ನೇತಾಜಿ ಕ್ಲಬ್ಬಿಗೆ ಕೆ.ಎಸ್.ಸಿ.ಎ ಕ್ರಿಕೆಟ್ ಟ್ರೋಫಿ

Spread the love

ನೇತಾಜಿ ಕ್ಲಬ್ಬಿಗೆ ಕೆ.ಎಸ್.ಸಿ.ಎ ಕ್ರಿಕೆಟ್ ಟ್ರೋಫಿ

ಮಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಸರೆಯಲ್ಲಿ ಜರಗಿದ ಉಡುಪಿ, ದಕ್ಷಿಣಕನ್ನಡ ಮತ್ತು ಕೊಡಗು ಜಿಲ್ಲೆಗಳನ್ನೊಳಗೊಂಡ ಮಂಗಳೂರು ವಲಯ ಮೂರನೇ ವಿಭಾಗದ ಕ್ರಿಕೆಟ್ ಪಂದ್ಯಾಟದ ಅಂತಿಮ ಪಂದ್ಯದಲ್ಲಿ ಪರ್ಕಳದ ನೇತಾಜಿ ಸ್ಪೋಟ್ರ್ಸ್ ಕ್ಲಬ್ ಮಂಗಳೂರಿನ ಕೆನರಾ ಯೂತ್ ಕೌನ್ಸಿಲ್ ತಂಡವನ್ನು 19 ರನ್‍ಗಳ ಅಂತರದಿಂದ ಸೋಲಿಸಿ ಕೆ.ಎಸ್.ಸಿ.ಎ . ಟ್ರೋಫಿಯನ್ನು ಗೆದ್ದುಕೊಂಡಿತು.

ಸುರತ್ಕಲಿನ ಎನ್ .ಐ.ಟಿ.ಕೆ ಮೈದಾನದಲ್ಲಿ ಜರಗಿದ ಅಂತಿಮ ಪಂದ್ಯದಲ್ಲಿ ಟಾಸ್ ವಿಜಯದೊಂದಿಗೆ ಬ್ಯಾಟಿಂಗನ್ನು ನೆಚ್ಚಿಕೊಂಡ ನೇತಾಜಿ ತಂಡಕ್ಕೆ ಆರಂಭಿಕ ದಾಂಡಿಗರಾದ ಅಚುತ್ತ ಭಟ್ – ಬಾಲಕೃಷ್ಣ ಪರ್ಕಳರವರು ಮೊದಲ ವಿಕೇಟಿನಲ್ಲಿ 110 ರನ್‍ಗಳ ಜತೆಯಾಟದಿಂದ ಭದ್ರ ತಳಪಾಯವನ್ನು ಹಾಕಿಕೊಟ್ಟರು. ತಂಡವು 110ರ ಮೊತ್ತದಲ್ಲಿ 64 ರನ್ ಗಳಿಸಿದ ಅಚ್ಚುತ ಭಟ್‍ರವರ ವಿಕೇಟನ್ನು ಕಳೆದು ಕೊಂಡಒಡನೆ ಸುಕುಮಾರ್ ಮತ್ತು ಬಾಲಕೃಷ್ಣ (33)ರವರು ರನ್ ಔಟ್ ಆಗಿ ತಂಡವು ಹೊಡೆತವನ್ನು ಕಂಡಿತಾದರೂ ನಾಗಾರ್ಜುನರವರ ಜವಾಬ್ದಾರಿಯುತ ಅಜೇಯ 70 ರನ್‍ಗಳಿಂದಾಗಿ ನಿಗದಿತ 50 ಓವರುಗಳಲ್ಲಿ 7 ವಿಕೆಟುಗಳ ನಷ್ಟದಲ್ಲಿ 294 ರನ್‍ಗಳನ್ನು ಕಲೆ ಹಾಕಿತು. ಶರತ್ 23, ಕಿಶನ್ 22, ನಾಗರಾಜ್ 21 ರನ್‍ಗಳನ್ನು ಗಳಿಸಿದರು. ಶಾರಿಖ್, ಇರ್ಫಾನ್, ಅಖ್ತರ್, ಝಾಹಿರ್, ಸಾಕ್ಷದ್‍ರವರು ತಲಾ ಒಂದೊಂದು ವಿಕೇಟುಗಳನ್ನು ಪಡೆದರು.

ವಿಜಯದ ಗುರಿ 295 ರನ್‍ಗಳನ್ನು ಬೆನ್ನತ್ತುವಲ್ಲಿ ಸಿ ವೈ ಸಿ ತಂಡದ ಆರಂಭಿಕ ದಾಂಡಿಗರು ಬಿರುಸಿನ ಆರಂಭವನ್ನು ನೀಡಿತಂಡವು ವಿಕೇಟ್ ನಷ್ಟವಿಲ್ಲದೆ 40 ರನ್‍ಗಳನ್ನು ಗಳಿಸಿತ್ತಾದರೂ ತಂಡದ ಮೊತ್ತ75 ತಲಪುವಷ್ಟರಲ್ಲಿ 4 ಪ್ರಮುಖ ಹುದ್ದರಿಗಳ ಪತನವಾಗಿತ್ತು. ಈ ಹಂತದಲ್ಲಿ ಇರ್ಫಾನ್ (53)ಮತ್ತುಝಹೀರ್ (52) ಅವರ ನಡುವೆ ಮೂಡಿ ಬಂದ ಮಹತ್ತರವಾದ 82 ರನ್‍ಗಳ ಜತೆಯಾಟವು ತಂಡವನ್ನು ಆಧರಿಸಿ ನಿಲ್ಲಿಸಿತು. ಈ ಜತೆಯಾಟದ ನಂತರ ಲಗುಬಗನೆ ಎರಡು ವಿಕೇಟುಗಳ ಪತನವಾದ ನಂತರ ಅಕ್ತರ್ (21) ಸಲ್ಮಾನ್ (20), ಅರಿಸ್ (ಅಜೇಯ 42) ರವರು ವಿಜಯಕ್ಕಾಗಿ ದಿಟ್ಟ ಹೋರಾಟ ನಡೆಸಿದರಾದರೂ ನಾಗರಾಜ್ (35 ಕ್ಕೆ 5 ವಿಕೇಟುಗಳು)ರವರ ಮಾರಕ ಬೌಲಿಂಗಿನೆದುರು ತಂಡವು 42ನೆ ಓವರಿನಲ್ಲಿ 275 ರನ್‍ಗಳಿಗೆ ಸರ್ವಪತನವನ್ನು ಕಂಡು 19 ರನ್‍ಗಳ ಅಂತರದಿಂದ ಸೋಲನ್ನಪ್ಪಿತು. ಪ್ರಭಾಕರ್ 48ಕ್ಕೆ 2, ಸತೀಶ್ 48ಕ್ಕೆ 2 ಮತ್ತು ಶರತ್ 30 ಕ್ಕೆ 1 ವಿಕೇಟನ್ನು ಪಡೆದರು.

ಸಂಕ್ಷಿಪ್ತ ಸ್ಕೋರ್:
ನೇತಾಜಿ ಸ್ಪೋಟ್ರ್ಸ್ ಕ್ಲಬ್: 294ಕ್ಕೆ 7 50 ಓವರುಗಳಲ್ಲಿ, ನಾಗಾರ್ಜುನ ಅಜೇಯ 70,ಅಚುತ್ತ ಭಟ್ 64, ಬಾಲಕೃಷ್ಣ 33, ಶರತ್ 23, ಕಿಷನ್ 22, ನಾಗರಾಜ 21
ಕೆನರಾ ಯೂತ್ ಕೌನ್ಸಿಲ್: 275 ಆಲೌಟ್ 42 ಓವರುಗಳಲ್ಲಿ –ಇರ್ಫಾನ್ 53, ಝಾಹಿರ್ 52, ಆರೀಸ್ ಅಜೇಯ 42, ಅಖ್ತರ್ 21, ಸಲ್ಮಾನ್20 ನಾಗರಾಜ 35ಕ್ಕೆ 5, ಪ್ರಭಾಕರ್ 48-2, ಸತೀಶ್ 48-1, ಶರತ್ 30ಕ್ಕೆ1 ವಿಕೇಟ್
ಜತೆಗಿರುವ ವಿಜೇತ ನೇತಾಜಿ ತಂಡದ ಚಿತ್ರದಲ್ಲಿ ಮೊದಲ ಸಾಲಿನಲ್ಲಿ ಎಡದಿಂದ ಆಕಾಶ್, ಸುಕುಮಾರ್, ರಮೇಶ, ಬಾಲಕೃಷ್ಣ ಪರ್ಕಳ (ನಾಯಕ), ಅಚ್ಚುತ್ ಭಟ್ ಮತ್ತು ಆಶೀಷ್
ಎರಡನೆ ಸಾಲಿನಲ್ಲಿ: ಶರತ್, ಶರಣ್, ಪ್ರಭಾಕರ್, ಸತೀಶ್, ನಾಗರಾಜ, ಹರಿಪ್ರಸಾದ್, ನಾಗಾರ್ಜುನ, ಕಿಶನ್‍ಇದ್ದಾರೆ


Spread the love