ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ ಜಯಗಳಿಸಿದ ಎಸ್.ಎಸ್.ಬೋಜೇಗೌಡ

Spread the love

ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ ಜಯಗಳಿಸಿದ ಎಸ್.ಎಸ್.ಬೋಜೇಗೌಡ

ಮಂಗಳೂರು: ನೈರುತ್ಯ ಶಿಕ್ಷಕ ಕ್ಷೇತ್ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಬೋಜೇಗೌಡ ಅವರು ತೀವ್ರ ಪ್ರತಿಸ್ಪರ್ಧೆ ನೀಡಿದ ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರನ್ನು ಮಣಿಸಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ನೈರುತ್ಯ ಶಿಕ್ಷಕ ಕ್ಷೇತ್ರ ಚುನಾವಣೆಗೆ ಈ ಬಾರಿ 12 ಮಂದಿ ಸ್ಪರ್ಧಿಸಿದ್ದು ತಮ್ಮನ್ನು ಹೊರತುಪಡಿಸಿ, ಸ್ಪರ್ಧಿಸಿದ ಎಲ್ಲ 11 ಅಭ್ಯರ್ಥಿಗಳ ನಿರ್ಗಮನದ ನಂತರವೂ ಜೆಡಿಎಸ್‌ನ ಭೋಜೇಗೌಡ ಅವರು ಗೆಲುವಿಗೆ ನಿಗಧಿಯಾಗಿದ್ದ 7,846 ಮತಗಳ ಕೋಟವನ್ನು ತಲುಪಲಾಗದೆ 7,310 ಮತ ಪಡೆದರು.

ಅಂತೆಯೆ ಚುನಾವಣೆ ಆಯೋಗ ಅಂತಿಮವಾಗಿ ಅತಿ ಹೆಚ್ಚು ಮತ ಪಡೆದ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದ ಬೋಜೇಗೌಡ ಅವರನ್ನು ಜಯಶಾಲಿ ಎಂದು ಘೋಷಣೆ ಮಾಡಿತು.

ಒಟ್ಟು 16,479 (80.46%) ಮತಗಳು ಚಲಾವಣೆಯಾಗಿದ್ದು 772 ಅಸಿಂಧು ಮತ್ತು 16 ನೋಟಾ ಮತಗಳು ಚಲಾವಣೆಯಾದವು. ಒಟ್ಟು 12 ಅಭ್ಯರ್ಥಿಗಳು ಕಣದಲ್ಲಿದ್ದರು. ನೈರುತ್ಯ ಶಿಕ್ಷಕರ ಕ್ಷೇತ್ರವು ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ದಾವಣಗೆರೆಯ 2ತಾಲೂಕುಗಳ ವಿಸ್ತಾರ ಹೊಂದಿದ್ದು ಒಟ್ಟು 20481 ನೊಂದಾಯಿತ ಮತದಾರರಿದ್ದು ಜೂನ್ 08 ರಂದು 71 ಮತಗಟ್ಟೆಗಳಲ್ಲಿ ಮತದಾನ ನಡೆದಿತ್ತು.

ಚಿಕ್ಕಮಗಳೂರಿನವರಾದ ಎಸ್. ಎಲ್. ಭೋಜೆಗೌಡ ಜನತಾ ದಳ (ಎಸ್) ಬೆಂಬಲಿತ ಅಭ್ಯರ್ಥಿಯಾಗಿದ್ದರು. ವೃತ್ತಿಯಲ್ಲಿ ವಕೀಲರಾಗಿದ್ದು ಕರ್ನಾಟಕ ಮತ್ತು ಭಾರತ ಬಾರ್ ಕೌನ್ಸಿಲ್ ಇದರ ಸದಸ್ಯರಾಗಿ ಹಾಗೂ ಚಿಕ್ಕಮಗಳೂರು ಮುನ್ಸಿಪಾಲಿಟಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಜನತಾದಳ ಜಿಲ್ಲಾಧ್ಯಕ್ಷರಾಗಿ ಮತ್ತು ರಾಜ್ಯ ಕಾರ್ಯಕಾರಿಣಿ ಸಮಿತಿಯಲ್ಲಿ ಕೆಲಸ ಮಾಡಿದ್ದಾರೆ. ಬೀರೂರು ಮಾಜಿ ಶಾಸಕ ದಿ. ಎಸ್.ಆರ್.ಲಕ್ಷ್ಮಯ್ಯ ಇವರ ಸುಪುತ್ರ ಹಾಗೂ ಹಾಲಿ ಜನತಾದಳದಿಂದ ಆಯ್ಕೆಯಾದ ಎಂ. ಎಲ್. ಸಿ. ಧರ್ಮೇಗೌಡ ಇವರ ಸೋದರ.


Spread the love