ನ್ಯೂಸ್ ಚಾನೆಲ್ ಮ್ಹಾಲಿಕ ರೋಹಿತ್ ರಾಜ್ ಆತ್ಮಹತ್ಯೆ; ಅಸಹಜ ಸಾವು ಪ್ರಕರಣ ದಾಖಲು – ಪೊಲೀಸ್ ಇಲಾಖೆ ಮಾಹಿತಿ

Spread the love

ನ್ಯೂಸ್ ಚಾನೆಲ್ ಮ್ಹಾಲಿಕ ರೋಹಿತ್ ರಾಜ್ ಆತ್ಮಹತ್ಯೆ; ಅಸಹಜ ಸಾವು ಪ್ರಕರಣ ದಾಖಲು – ಪೊಲೀಸ್ ಇಲಾಖೆ ಮಾಹಿತಿ

ಉಡುಪಿ : ಮಂಗಳೂರು ಮೂಲದ “ನ್ಯೂಸ್ ಚಾನೆಲ್” ಮಾಲೀಕರಾದ ರೋಹಿತ್ ರಾಜ್, ವರು ಮಣಿಪಾಲದ ರಾಯಲ್ ಎಂಬಸಿ ಅಪಾರ್ಟ್‌ಮೆಂಟ್ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಮಣಿಪಾಲ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿದ್ದು ಡಿಸೆಂಬರ್ 31ರಂದು ಸಂಜೆ ಹೊಸ ವರ್ಷದ ಆಚರಣೆಗಾಗಿ ರೋಹಿತ್ ರಾಜ್ ಮತ್ತು ಆತನ ಗೆಳತಿ ಕೋಲ್ಕತ್ತ ಮೂಲದ ರೂಮಾ ಸಹಾನಿ ಮತ್ತು ಚಾನೆಲ್‌ನಲ್ಲಿ ಕೆಲಸ ಮಾಡುವ ಜಾಸಿಂ ಮತ್ತು ಅಜ್ಜುಂ ಎಂಬ ನಾಲ್ವರು ಉಡುಪಿ ಓಶಿಯನ್ ಪರ್ಲ್‌ ಹೋಟೇಲ್ನಲ್ಲಿ ರಾತ್ರಿ ಊಟ ಮಾಡಿ, ನಂತರ ಅಪಾರ್ಟಮೆಂಟ್ಗೆ ತೆರಳಿದ್ದು 01/01/2020 ರಂದು ಬೆಳಿಗ್ಗೆ ರೂಮಾ ಸಹಾನಿರವರು ರಕ್ತದ ಮಡುವಿನಲ್ಲಿ ಬಿದ್ದಿದ್ದ ರೋಹಿತ್ ರಾಜ್ರವರನ್ನು ರಾಯಲ್ ಎಂಬಸಿಯ ಸೆಕ್ಯೂರಿಟಿ ಗಾರ್ಡ್ಗಳ ಸಹಾಯದಿಂದ ಆಂಬುಲೆನ್ಸ್ ಮೂಲಕ ಕೆ.ಎಂ.ಸಿ. ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಿದ್ದು, ರೋಹಿತ್ ರಾಜ್ ರವರು ಮೃತಪಟ್ಟಿರುವುದಾಗಿ ವೈದ್ಯಾಧಿಕಾರಿಯವರು ತಿಳಿಸಿರುತ್ತಾರೆ.

ಈ ಬಗ್ಗೆ ರೋಹಿತ್ ರಾಜ್ ರವರ ತಂದೆ ವಿಶ್ವನಾಥ್ ರವರು ಮಣಿಪಾಲ ಪೊಲೀಸ್ ಠಾಣೆಗೆ ಹಾಜರಾಗಿ ಲಿಖಿತ ದೂರನ್ನು ಸಲ್ಲಿಸಿದ್ದು ರೋಹಿತ್ ರಾಜ್‌ರವರು ಈ ಹಿಂದೆ 2 ಮದುವೆಯಾಗಿ ವಿಚ್ಚೇದನಕ್ಕಾಗಿ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಯಲ್ಲಿರುತ್ತದೆ. ಸಾಂಸಾರಿಕ ಜೀವನದಲ್ಲಿ ಅವರು ಮನಸ್ಸಿಗೆ ಬೇಜಾರು ಮಾಡಿಕೊಂಡಿದ್ದರು. ಇತ್ತೀಚೆಗೆ ಕೋಲ್ಕತ್ತ ಮೂಲದ ರೂಮಾ ಸಹಾನಿಯರವರನ್ನು ಮದುವೆಯಾಗಿ ಮಣಿಪಾಲದ ಅಪಾರ್ಟಮೆಂಟ್‌ನಲ್ಲಿ ಬಾಡಿಗೆಗೆ ಉಳಿದುಕೊಂಡಿದ್ದು, ಯಾವುದೋ ವಿಷಯದಿಂದ ಮನಸ್ಸಿಗೆ ಬೇಸರ ಮಾಡಿಕೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿ ಕೆಳಗೆ ಬಿದ್ದು ರಕ್ತಸ್ರಾವದಿಂದ ಮೃತಪಟ್ಟಿರಬಹುದು ಎಂಬುದಾಗಿ ದೂರಿನಲ್ಲಿ ತಿಳಿಸಿರುತ್ತಾರೆ.

ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಉಡುಪಿ ಜಿಲ್ಲೆ, ಉಡುಪಿ, ಪೊಲೀಸ್ ಉಪಾಧೀಕ್ಷಕರು, ಉಡುಪಿ ಉಪವಿಭಾಗ ಹಾಗೂ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಯ ಫಾರೆನ್ಸಿಕ್ ಮೆಡಿಸಿನ್ ವಿಭಾಗದ ವೈದಾಧಿಕಾರಿಗಳ ತಂಡ ಭೇಟಿ ನೀಡಿರುತ್ತಾರೆ. ವೈದ್ಯಾಧಿಕಾರಿಗಳಿಂದ ಮರಣೋತ್ತರ ಪರೀಕ್ಷೆ ವರದಿ ಹಾಗೂ ಎಫ್.ಎಸ್.ಎಲ್. ವರದಿ ಬಂದ ಬಳಿಕ ಮರಣದ ಸ್ಪಷ್ಟ ಕಾರಣ ತಿಳಿಯಬಹುದಾಗಿದೆ.


Spread the love