ಪರ್ಯಾಯಕ್ಕೆ ಆಗಮಿಸುವವರಿಗೆ ವಾಹನ ಪಾರ್ಕಿಂಗ್ ವ್ಯವಸ್ಥೆ

Spread the love

ಪರ್ಯಾಯಕ್ಕೆ ಆಗಮಿಸುವವರಿಗೆ ವಾಹನ ಪಾರ್ಕಿಂಗ್ ವ್ಯವಸ್ಥೆ

ಉಡುಪಿ: ಜನವರಿ 17 ಮತ್ತು 18 ರಂದು ನಡೆಯಲಿರುವ ಪುತ್ತಿಗೆ ಮಠದ ಪರ್ಯಾಯ ಮಹೋತ್ಸವಕ್ಕೆ ಆಗಮಿಸುವ ಭಕ್ತಾದಿಗಳ ವಾಹನಗಳನ್ನು ಈ ಕೆಳಕಂಡ ಸ್ಥಳಗಳಲ್ಲಿ ಪಾರ್ಕಿಂಗ್ ಮಾಡಲು ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಿದ್ದು ಇದರ ವಿವರ ಈ ರೀತಿ ಇದೆ.

  • ಮಂಗಳೂರು ಕಡೆಯಿಂದ ಬರುವ ಎಲ್ಲಾ ನಮೂನೆಯ ವಾಹನಗಳು – ಜಿ ಶಂಕರ್ ಶಾಮಿಲಿ ಹಾಲ್ ಎದುರು
  • ನಗರದ ಕಡೆಯಿಂದ ಆಗಮಿಸುವ ಎಲ್ಲಾ ನಮೂನೆಯ ವಾಹನಗಳು – ಸೈಂಟ್ ಸಿಸಿಲಿಸ್ ಸ್ಕೂಲ್ ಮೈದಾನ ಅಜ್ಜರಕಾಡು, ಪಿಪಿಸಿ ಕಾಲೇಜು ಪಾರ್ಕಿಂಗ್ ಸ್ಥಳ ಮತ್ತು ಸರ್ವಿಸ್ ನಿಲ್ದಾಣ ಬಳಿಯ ಬೋರ್ಡ್ ಹೈಸ್ಕೂಲ್ ಪಾರ್ಕಿಂಗ್
  • ಕಾರ್ಕಳ, ಮಣಿಪಾಲ ಕಡೆಯಿಂದ ಬರುವ ಎಲ್ಲಾ ನಮೂನೆಯ ವಾಹನಗಳು – ಎಮ್ ಜಿ ಎಮ್ ಕಾಲೇಜ್ ಮೈದಾನ
  • ಕಾರ್ಕಳ, ಮಣಿಪಾಲ ಕಡೆಯಿಂದ ಬರುವ ಎಲ್ಲಾ ನಮೂನೆಯ ವಾಹನಗಳು – ರಾಯಲ್ ಗಾರ್ಡನ್
  • ಸಂತೆಕಟ್ಟೆ ಮಲ್ಪೆ ಕಡೆಯಿಂದ ಬರುವ ವಾಹನಗಳು – ಕರಾವಳಿ ಹೋಟೆಲ್ ಪಾರ್ಕಿಂಗ್ ಸ್ಥಳ
  • ಇತರ ಕಡೆಗಳಿಂದ ಬರುವ ಬೆಂಗಳೂರು ಮತ್ತು ರೂಟ್ ಬಸ್ಸುಗಳು – ಕರಾವಳಿಯಿಂದ ಅಂಬಲಪಾಡಿ ಎರಡೂ ಕಡೆ ಸರ್ವಿಸ್ ರಸ್ತೆ
  • ವಿವಿಐಪಿ ವಾಹನಗಳಿಗೆ – ರಾಜಾಂಗಣ ಪಾರ್ಕಿಂಗ್ ಎಡ ಮತ್ತು ಬಲಬದಿಯಲ್ಲಿ
  • ವಿಐಪಿ ವಾಹನಗಳು – ಡಿ ಮಾರ್ಟ್ ಪಾರ್ಕಿಂಗ್ ಸ್ಥಳ
  • ಎಲ್ಲಾ ಕಡೆಯಿಂದ ಬರುವ ಕಾರು ಮತ್ತು ದ್ವಿಚಕ್ರ ವಾಹನಗಳನ್ನು ಕಲ್ಸಂಕ ಗುಂಡಿಬೈಲು ರಸ್ತೆಯ ಎರಡೂ ಬದಿ
  • ಕಿನ್ನಿಮೂಲ್ಕಿ ಸ್ವಾಗತ ಗೋಪುರ, ಕನ್ನರ್ಪಾಡಿ ಹೋಗುವ ಮಾರ್ಗದ ಎಲ್ಲಾ ವಾಹನಗಳು – ಅಜ್ಜರಕಾಡು ವಿವೇಕಾನಂದ ಶಾಲೆ, ಭುಜಂಗ ಪಾರ್ಕ್ ಪಕ್ಕದ ರಸ್ತೆ
  • ಮೆರವಣಿಗೆ ಹಾಗೂ ಸಾಂಸ್ಕೃತಿ ಕಾರ್ಯಕ್ರಮಗಳಿಗೆ ಬರುವ ವಾಹನಗಳು ಕಿತ್ತೂರು ಚೆನ್ನಮ್ಮ ಕ್ರಾಸ್ ರಸ್ತೆಯ ಎರಡೂ ಬದಿ, ಟೌನ್ ಹಾಲ್ ಪಾರ್ಕಿಂಗ್ ಸ್ಥಳ
  • ಪೋಲಿಸ್ ವಾಹನಗಳ ನಿಲುಗಡೆ – ಮದರ್ ಆಫ್ ಸೋರೊಸ್ ಚರ್ಚ್ ಮೈದಾನ
  • ಕುಕ್ಕಿಕಟ್ಟೆ, ಮಣಿಪಾಲ, ಮೂಡುಬೆಳ್ಳೆ, ಕಾರ್ಕಳ ಕಡೆಯಿಂದ ಬರುವ ಎಲ್ಲಾ ನಮೂನೆಯ ವಾಹನಗಳು ಬೀಡಿನಗುಡ್ಡೆ ಕ್ರೀಡಾಂಗಣ, ಮೈದಾನ ಹಾಗೂ ವಿದ್ಯೋದಯ ಹೈಸ್ಕೂಲ್ ಆವರಣ
  • ಅಲೆವೂರು, ಮೂಡುಬೆಳ್ಳೆ, ಕೊರಂಗ್ರಪಾಡಿ, ಕುಕ್ಕಿಕಟ್ಟೆ ಕಡೆಯಿಂದ ಬರುವ ಎಲ್ಲಾ ನಮೂನೆಯ ವಾಹನಗಳು ಅಮ್ಮಣ್ಣಿ ರಾಮಣ್ಣ ಹಾಲ್, ಮುದ್ದಣ್ಣ ಎಸ್ಟೇಟ್, ಕ್ರಿಶ್ಚಿಯನ್ ಹೈಸ್ಕೂಲ್, ಕ್ರಿಶ್ಚಿಯನ್ ಪದವಿಪೂರ್ವ ಮೈದಾನದಲ್ಲಿ ನಿಲ್ಲಿಸುವುದು
  • ನಗರದ ಕಡೆಯಿಂದ ಬರುವ ದ್ವಿಚಕ್ರ ವಾಹನಗಳನ್ನು ನಾಗಬನ ಕ್ರಾಸ್ (ವೆಂಕಟರಮಣ ದೇವಸ್ಥಾನದ ಬಳಿ), ಅಲೆವೂರು ಮೂಡುಬೆಳ್ಳೆ, ಕೊರಂಗ್ರಪಾಡಿ, ಕುಕ್ಕಿಕಟ್ಟೆ ಕಡೆಯಿಂದ ಬರುವ ದ್ವಿಚಕ್ರ ವಾಹನಗಳನ್ನು ಯುಬಿಎಂಸಿ ಚರ್ಚ್ ಮಿಷನ್ ಕಂಪೌಂಡ್ಸ್ ರಸ್ತೆಯಲ್ಲಿ ನಿಲ್ಲಿಸುವಂತೆ ಉಡುಪಿ ಟ್ರಾಫಿಕ್ ಪೊಲೀಸ್ ಪ್ರಕಟಣೆ ತಿಳಿಸಿದೆ.

Spread the love