‘ಪವಿತ್ರಾತ್ಮ ಅಭಿಶೆಕೋತ್ಸವ 2017’ ಕರ್ನಾಟಕ ರಾಜ್ಯ ಮಟ್ಟದ ನಾಲ್ಕು ದಿನಗಳ ಸಮ್ಮೆಳನ ಉದ್ಘಾಟನೆ

Spread the love

‘ಪವಿತ್ರಾತ್ಮ ಅಭಿಶೆಕೋತ್ಸವ 2017’ ಕರ್ನಾಟಕ ರಾಜ್ಯ ಮಟ್ಟದ ನಾಲ್ಕು ದಿನಗಳ ಸಮ್ಮೆಳನ ಉದ್ಘಾಟನೆ

ಮಂಗಳೂರು:ಅ. ವಂ. ಡಾ. ಎಲೋಶಿಯಸ್ ಪಾವ್ಲ್ ಡಿ’ಸೋಜ, ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು ಕಥೋಲಿಕ ಧರ್ಮಸಭೆಯಲ್ಲಿ ಕ್ಯಾರಿಜ್ಮ್ಯಾಟಿಕ್ ನವೀಕರಣದ ಸ್ವರ್ಣಮಹೋತ್ಸ್ವದ ಸಂದರ್ಭದಲ್ಲಿ ‘ಪವಿತ್ರಾತ್ಮ ಅಭಿಶೆಕೋತ್ಸವ 2017’ ಕರ್ನಾಟಕ ರಾಜ್ಯ ಮಟ್ಟದ ನಾಲ್ಕು ದಿನಗಳ ಸಮ್ಮೆಳನವನ್ನು ದೀಪ ಬೆಳಗುವ ಮೂಲಕ ಉದ್ಗಾಟಿಸಿದರು. ಇದೇ ಸಂದರ್ಭದಲ್ಲಿ ಪವಿತ್ರಾತ್ಮರ ಏಳು ವರಗಳ ಸಂಕೇತವಾಗಿ ಏಳು ಪಾರಿವಾಳಗಳನ್ನು ಹಾರಿಬಿಡಲಾಯ್ತು. ತದನಂತರ ಬಿಶಪರು ಮೊದಲ ದಿನದ ಬಲಿಪೂಜೆಯನ್ನು ಅರ್ಪಿಸಿ ತಮ್ಮ ಸಂದೇಶವನ್ನು ನೀಡಿದರು. ತಮ್ಮ ಸಂದೇಶದಲ್ಲಿ ಬಿಶಪರು, ‘ಈ ಸಮ್ಮೇಳನವು ಕಳೆದ ಐವತ್ತು ವರ್ಷಗಳಲ್ಲಿ ದೇವರು ಧರ್ಮಸಭೆಯಲ್ಲಿ ಸುರಿಸಿದ ಅಪಾರ ಆಶೀರ್ವಾದಗಳಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಏರ್ಪಾಡಿಸಲಾಗಿದೆ. ಕ್ಯಾರಿಜ್ಮ್ಯಾಟಿಕ್ ನವೀಕರಣದಿಂದಾಗಿ ಜಗತ್ತಿನಾದ್ಯಂತ ಲೆಕ್ಕವಿಲ್ಲದಷ್ಟು ಜನರು ತಮ್ಮ ಆಧ್ಯಾತ್ಮಿಕ ಜೀವನದಲ್ಲಿ ನವ ಚೈತನ್ಯವನ್ನು ಪಡೆದಿದ್ದಾರೆ, ಎಷ್ಟೋ ಜನರು ಶರೀರದ ಕಾಯಿಲೆಗಳಿಂದ ಗುಣ ಹೊಂದಿದ್ದಾರೆ, ಮಾನಸಿಕ ನೆಮ್ಮದಿಯನ್ನು ಪಡೆದಿದ್ದಾರೆ, ದುಶ್ಚಟಗಳನ್ನು ಬಿಟ್ಟು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ, ವೈರತ್ವ-ದ್ವೇಶವನ್ನು ತೊರೆದಿದ್ದಾರೆ. ದೇವರು ಮಾಡಿದ ಈ ಎಲ್ಲಾ ಒಳಿತಿಗಾಗಿ ದೇವರಿಗೆ ಮಹಿಮೆ ಪಡಿಸುವಾಗ ಈ ನಾಲ್ಕು ದಿನಗಳಲ್ಲಿ ನಡೆಯುತ್ತಿರುವ ಈ ಸಮ್ಮೇಳನದಲ್ಲಿ ಇನ್ನಷ್ಟು ಜನರಿಗೆ ದೇವರ ಅನುಭವ ಸಿಗಲಿ ಎಂದು ಹಾರೈಸಿದರು.


ಬಿಶಪ್ ಲಾರೆನ್ಸ್ ಮುಕ್ಕುಳಿ ಕರ್ನಾಟಕ ಕ್ಯಾರಿಜ್ಮ್ಯಾಟಿಕ್ ಸೇವಾ ಸಮಿತಿಯ ಆಧ್ಯಾತ್ಮಿಕ ಸಲಹೆಗಾರರು ಪ್ರಥಮ ಪ್ರಭೋದನೆಯನ್ನು ನೀಡಿದರು. ಯೇಸು ಸ್ವಾಮಿಯ ಕರೆಗೆ ಓಗೊಟ್ಟು ಅವರನ್ನು ಹಿಂಬಾಲಿಸುವ ಮೂಲಕ ನಾವು ಪಾವಿತ್ರ್ಯವನ್ನು ಪಡೆಯಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು. ಫಾ. ಫ್ರ್ಯಾಂಕ್ಲಿನ್ ಡಿ’ಸೋಜ ಮತ್ತು ಫಾ. ಜೋಸ್ ವೆಟ್ಟಿಯಾಂಕಲ್ ಪರಮ ಪ್ರಸದಾದ ಆರಾದನೆಯನ್ನು ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಧರ್ಮಪ್ರಾಂತ್ಯದ ಶ್ರೇಷ್ಟ ಗುರು ಮೊನ್ಸಿಂಜೊರ್ ಡೆನಿಸ್ ಮೊರಾಸ್ ಪ್ರಭು, ಪಾಲನಾ ಮಂಡಳಿಯ ಕಾರ್ಯದರ್ಶಿ ಶ್ರೀ ಎಮ್. ಪಿ. ನೊರೊನ್ಹಾ, ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರು ಶ್ರೀ ಜೆ. ಆರ್. ಲೋಬೊ, ವಿಧಾನ ಪರಿಶತ್ತ್ ಸದಸ್ಯರು ಮತ್ತುಸಚೇತಕರು ಶ್ರೀ ಐವನ್ ಡಿ’ಸೋಜ, ಫಾ. ಮೆಲ್ವಿನ್ ನೊರೊನ್ಹಾ, ಶ್ರೀ ಮೈಕಲ್ ನೊರೊನ್ಹಾ, ಶ್ರೀ ಅರುಣ್ ಲೋಬೊ ಉಪಸ್ತಿತರಿದ್ದರು. ಸಂಚಾಲಕರಾದ ಫಾ. ಒನಿಲ್ ಡಿ’ಸೋಜರವರು ಪ್ರಸ್ತಾವಿಕ ಮಾತುಗಳೊಂದಿಗೆ ನೆರೆದಿದ್ದವರನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಸುಮಾರು 10,000 ಮಂದಿ ಭಾಗವಹಿಸಿದರು.


Spread the love