ಪಶ್ಚಿಮ ವಲಯ ಹೋಂಗಾರ್ಡ್ ರಾಜ್ಯಕ್ಕೆ ಮಾದರಿ: ಎಸ್ಪಿ ಲಕ್ಷ್ಮೀ ಪ್ರಸಾದ್ 

Spread the love

ಪಶ್ಚಿಮ ವಲಯ ಹೋಂಗಾರ್ಡ್ ರಾಜ್ಯಕ್ಕೆ ಮಾದರಿ: ಎಸ್ಪಿ ಲಕ್ಷ್ಮೀ ಪ್ರಸಾದ್ 

ಮಂಗಳೂರು :ಪಶ್ಚಿಮ ವಲಯ ಗೃಹರಕ್ಷಕ/ರಕ್ಷಕಿಯರು ಶಿಸ್ತು, ದಕ್ಷತೆ ತನ್ನ ಕೆಲಸದಲ್ಲಿ ಬದ್ದತೆಯಲ್ಲಿ ರಾಜ್ಯಕ್ಕೆ ಮಾದರಿಯಾಗಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ಹೇಳಿದರು.

ಜನವರಿ 6 ರಂದು ನಗರದ ಪೊಲೀಸ್ ಪೆರೇಡ್ ಮೈದಾನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಪಶ್ವಿಮ ವಲಯ ಮಟ್ಟದ ವೃತ್ತಿಪರ ಕ್ರೀಡಾಕೂಟ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ರಾಜ್ಯದ ನಾನಾ ಕಡೆ ಸೇವೆ ಸಲ್ಲಿಸಿದ್ದೇನೆ ಆದರೆ ಇಲ್ಲಿಯ ಗೃಹರಕ್ಷಕ ತಂಡದ ಶಿಸ್ತು, ಕೆಲಸದಲ್ಲಿ ಬದ್ಧತೆ ನಿಜಕ್ಕೂ ಬೇರೆಲ್ಲೂ ನೋಡಿಲ್ಲ. ಇವರು ಪೊಲೀಸ್ ಕಾನ್‍ಸ್ಟೇಬಲ್‍ರಂತೆ ಕಾರ್ಯನಿರ್ವಹಿಸಬಲ್ಲವರು. ಈ ರೀತಿಯ ಕಾರ್ಯಶೈಲಿ ಮುಂದುವರಿಯಲಿ ಜೀವನದಲ್ಲಿ ಕ್ರೀಡೆ ಒಂದು ಭಾಗವಾಗಿದ್ದು, ಕ್ರೀಡೆಯಿಂದ ದೈಹಿಕ ಸಾಮಥ್ರ್ಯ ಹೆಚ್ಚಿಸುವುದಲ್ಲದೆ ಮತ್ತಷ್ಟು ಸಾಧನೆಗೆ ಕಾರಣವಾಗುತ್ತದೆ. ಕೆಲಸದ ಒತ್ತಡ ಜತೆ ಕ್ರೀಡೆಯಲ್ಲೂ ತೊಡಗಿಸಿಕೊಂಡು ಕ್ರೀಡಾ ಸ್ಪೂರ್ತಿ ಬೆಳೆಸಿಕೊಳ್ಳಿ. ಪಶ್ಚಿಮ ವಲಯ ಕ್ರೀಡಾಕೂಟದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಚಿಕ್ಕಮಗಳೂರು ತಂಡ ಸೇರಿದಂತೆ ಎಲ್ಲಾ ಸ್ಪರ್ಧಿಗಳಿಗೂ ಅಭಿನಂದನೆಗಳು, ಮುಂದಿನ ಜೀವನದಲ್ಲಿ ಮತ್ತಷ್ಟು ಸಾಧನೆ ಮಾಡಿ ಎಂದರು.

ದ.ಕ ಜಿಲ್ಲಾ ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಡಾ.ಮುರಲೀ ಮೋಹನ್ ಚೂಂತಾರು ಅಧ್ಯಕ್ಷತೆ ವಹಿಸಿ ಮಾತನಾಡಿ, ಗೃಹರಕ್ಷಕ ದಳ ಪೊಲೀಸ್ ಇಲಾಖೆ ಜತೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವ ತಂಡ ಜೀವನದಲ್ಲಿ ಎದುರಾಗುವ ಒತ್ತಡಗಳನ್ನು ಕಡಿಮೆ ಮಾಡಲು ಕ್ರೀಡಾ ಸ್ಪೂರ್ತಿ ಸಹಕಾರಿಯಾಗಲಿ. ಆಟದಲ್ಲಿ ಯಾವತ್ತೂ ಕ್ರೀಡೆ ಗೆಲ್ಲಬೇಕು ಹೊರತು ವ್ಯಕ್ತಿಯಲ್ಲ ಪಶ್ಚಿಮ ವಲಯ ಗೃಹರಕ್ಷಕದಳ ಮುಂದೆ ರಾಜ್ಯದಲ್ಲೂ ಉತ್ತಮ ಪ್ರದರ್ಶನ ನೀಡಲಿ ಎಂದು ಶುಭಹಾರೈಸಿದರು.

ಈ ಸಂದರ್ಭ ಉಡುಪಿ ಜಿಲ್ಲೆಯ ಕಮಾಂಡೆಂಟ್ ಪ್ರಶಾಂತ್ ಶೆಟ್ಟಿ ಚಿಕ್ಕಮಗಳೂರು ಕಮಾಂಡೆಂಟ್ ಅನಿಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಬೆಳ್ತಂಗಡಿ ಘಟಕದ ಪ್ರಭಾರ ಘಟಕಾಧಿಕಾರಿ ಜಯಾನಂದ್ ಕಾರ್ಯಕ್ರಮ ನಿರೂಪಿಸಿದರು.


Spread the love