ಪಿಲಿಕುಳ :ಗುತ್ತು ಮನೆ, ಕುಶಲಕರ್ಮಿ ಗ್ರಾಮಕ್ಕೆ ವಿದೇಶಿ ಪ್ರವಾಸಿಗರ ಭೇಟಿ

Spread the love

ಪಿಲಿಕುಳ :ಗುತ್ತು ಮನೆ, ಕುಶಲಕರ್ಮಿ ಗ್ರಾಮಕ್ಕೆ ವಿದೇಶಿ ಪ್ರವಾಸಿಗರ ಭೇಟಿ

ಮಂಗಳೂರು:  ನವಮಂಗಳೂರು ಬಂದರಿಗೆ ಓಶೇನಿಯಾ ಹಡಗಿನಲ್ಲಿ ಆಗಮಿಸಿದ್ದ ನೂರಾರು ವಿದೇಶಿ ಪ್ರವಾಸಿಗರು ಪಿಲಿಕುಳದ ಗುತ್ತುಮನೆ ಮತ್ತು ಕುಶಲಕರ್ಮಿ ಗ್ರಾಮಕ್ಕೆ ಭಾನುವಾರ ಭೇಟಿ ನೀಡಿದರು.

ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಕುಶಲಕರ್ಮಿ ಗ್ರಾಮದಲ್ಲಿ ಮುಂದಿನ ತಲೆಮಾರಿಗೆ ಪಾರಂಪರಿಕವಾಗಿ ಉಳಿಸಿಕೊಂಡು ಬಂದಿರುವ ಕುಂಬಾರಿಕೆ, ಕುಟ್ಟಣದ ಅವಲಕ್ಕಿ, ಎಣ್ಣೆ ಗಾಣ, ಕಮ್ಮಾರಿಕೆ, ಬಡಗಿ, ಬೆತ್ತ ಬಿದಿರು ವಿಭಾಗಗಳಲ್ಲಿ ದೈನಂದಿನ ನಿರಂತರವಾಗಿ ನಡೆಯುವ ನೇರ ಪ್ರಾತ್ಯಕ್ಷಿಕೆಗಳನ್ನು ವೀಕ್ಷಿಸಿ ಆಶ್ಚರ್ಯ ಪಟ್ಟು ಗ್ರಾಮ್ಯ ಜೀವನದ ಮಾಹಿತಿಗಳನ್ನು ಪ್ರವಾಸಿಗರು ಪಡೆದುಕೊಂಡರು.

ಪ್ರತೀ ವರ್ಷ ಪಿಲಿಕುಳಕ್ಕೆ ಪ್ರವಾಸವನ್ನು ಆಯೋಜಿಸುವ ಮಂಗಳೂರಿನ ಪ್ರಸಿದ್ಧ ಪ್ರವಾಸಿ ಸಂಸ್ಥೆ ಲಿಯಾ ಟ್ರಾವೆಲ್ಸ್ ವಿದೇಶಿ ಪ್ರವಾಸಿಗರನ್ನು ಕರೆತರುವ ಜವಾಬ್ದಾರಿಯನ್ನು ವಹಿಸಿದ್ದರು. ಒಟ್ಟು 150 ಕ್ಕಿಂತಲೂ ಹೆಚ್ಚು ವಿದೇಶಿ ಪ್ರವಾಸಿಗರು ಪಿಲಿಕುಳಕ್ಕೆ ಭೇಟಿ ನೀಡಿರುತ್ತಾರೆ ಎಂದು ಪಿಲಿಕುಳ ಅಭಿವ್ರದ್ಧಿ ಪ್ರಾಧಿಕಾರದ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments