ಪುತ್ತೂರು ಶೂಟೌಟ್ ಪ್ರಕರಣ ನಾಲ್ವರ ಬಂಧನ

Spread the love

ಪುತ್ತೂರು ಶೂಟೌಟ್ ಪ್ರಕರಣ ನಾಲ್ವರ ಬಂಧನ

ಮಂಗಳೂರು: ಪುತ್ತೂರು ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ಪೋಲಿಸರು ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

4-arrested-puttur-shootout-case-02

ಬಂಧಿತರನ್ನು ಮಹಮ್ಮದ್ ಹನೀಫ್ ಅಲಿಯಾಸ್ ಮುನ್ನ, ಕಾಲಿಯಾ ರಫೀಕ್, ಆಸಿರ್ ಅಲಿಯಾಸ್ ಅಬ್ದುಲ್ ಅಸೀರ್ ಮತ್ತು ಮಹಮ್ಮದ್ ಅನ್ವರ್ ಅಲಿಯಾಸ್ ಅನ್ನು ಎಂದು ಗುರುತಿಸಲಾಗಿದೆ.

ಘಟನೆಯ ವಿವರ: ದಿನಾಂಕ: 16.10.2015 ರಂದು ಪುತ್ತೂರು ನಗರ ಠಾಣಾ ವ್ಯಾಪ್ತಿಯ ರಾಜಧಾನಿ ಜುವೆಲ್ಲರ್ಸ್ ಎಂಬಲ್ಲಿಗೆ ಯಾರೋ ದುಷ್ಕರ್ಮಿಗಳು ಮೋಟಾರು ಸೈಕಲ್‌ನಲ್ಲಿ ಬಂದು ಪಿಸ್ತೂಲಿನಿಂದ 3 ಸುತ್ತು ಗುಂಡು ಹಾರಿಸಿ ಅಲ್ಲಿಂದ ಪರಾರಿಯಾಗಿರುತ್ತಾರೆ. ಈ ಕುರಿತು ಪುತ್ತೂರು ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನಾ ಸ್ಥಳದಲ್ಲಿ ಜುವೆಲ್ಲರ್‍ಸ್ ಶಟರ್, ಗ್ಲಾಸ್ ಮತ್ತು ಗೋಡೆಗೆ ಗುಂಡು ತಾಗಿರುತ್ತದೆ. ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು, ಪೊರೆನ್ಸಿಕ್ ತಜ್ಞರು, ಮತ್ತು ಬ್ಯಾಲೆಸ್ಟಿಕ್ ತಜ್ಞರೊಂದಿಗೆ ತನಿಖೆಯನ್ನು ಆರಂಬಿಸಿರುತ್ತಾರೆ,ಆ ಸಂದರ್ಭದಲ್ಲಿ ಎರಡು ಖಾಲಿ ತೋಪುಗಳನ್ನು ಹಾಗೂ ಗುಂಡಿನ ಚೂರುಗಳನ್ನು ವಶಪಡಿಸಿಕೊಂಡಿರುತ್ತಾರೆ ತನಿಖೆ ನಂತರ ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಯಿತು.

image002sp-press-20160621-002

ದಿನಾಂಕ: 01-04-2016 ರಂದು ಈ ಪ್ರಕರಣದ ಪ್ರಮುಖ ಆರೋಪಿ ಅಬ್ದುಲ್ ಆಸೀರ್ ಎಂಬಾತನನ್ನು ಪುತ್ತೂರು ನಗರ ಠಾಣೆ ಇನ್ಸ್‌ಪೆಕ್ಟರ್ ಮತ್ತು ಸಿಬ್ಬಂದಿವರು ಸೇರಿ ದಸ್ತಗಿರಿಮಾಡಿ ರಿವಾಲ್ವರ್ ಒಂದನ್ನು ವಶಪಡಿಸಿಕೊಂಡಿದ್ದರು ಆರೋಪಿಯನ್ನು ಕೂಲಂಕೂಷವಾಗಿ ವಿಚಾರಣೆಗೆ ಒಳಪಡಿಸಿದಾಗ ರಾಜಧಾನಿ ಜುವೆಲ್ಲರ್‍ಸ್‌ನ ಶೂಟ್ ಔಟ್ ಪ್ರಕರಣದ ಪೂರ್ತಿ ಚಿತ್ರಣವು ಬಯಲಿಗೆ ಬಂದಿದ್ದು, ಈ ಪ್ರರಕರಣದಲ್ಲಿ ಭೂಗತ ಜಗತ್ತಿನ ಪಾತಕಿ ಕಲಿಯೋಗಿಶ್ ಎಂಬಾತನು ಆತನ ಸಹಚರರಾದ ಖಾಲಿಯ ರಫೀಕ್, ಹಾಗೂ ಮಹಮ್ಮದ್ ಹನೀಪ್ @ ಅಲಿ @ ಮುನ್ನಾ ಎಂಬವರ ಮುಖಾಂತರ ಪುತ್ತೂರಿನ ಮುಳಿಯ ಜುವೆಲ್ಲರ್‍ಸ್ ಮತ್ತು ರಾಜಧಾನಿ ಜುವೆಲ್ಲರ್‍ಸ್‌ಗೆ ಗುಂಡಿನ ದಾಳಿ ನಡೆಸಿ ಹಪ್ತಾ ಹಣವನ್ನು ಪಡೆಯಲು ಅಪರಾಧಿಕ ಒಳಸಂಚು ಮಾಡಿರುವುದು ಮತ್ತು ಮುಳಿಯ ಜುವೆಲ್ಲರಿಯಲ್ಲಿ ಸಾಕಷ್ಟು ಭದ್ರತಾ ವ್ಯವಸ್ಥೆ ಇರುವುದರಿಂದ ಖಾಲಿಯಾ ರಫೀಕ್ ನಿರ್ಧರಿಸಿದಂತೆ ರಾಜಧಾನಿ ಜುವೆಲ್ಲರ್‍ಸ್‌ಗೆ ಗುಂಡಿನ ದಾಳಿ ನಡೆಸಿ ಹಪ್ತಾ ಹಣಕ್ಕಾಗಿ ಬೇಡಿಕೆ ಇರಿಸುವ ಬಗ್ಗೆ ಜೈಲಿನಲ್ಲಿ ಪ್ಲಾನ್ ಮಾಡಿದ್ದರು. ಖಾಲಿಯಾ ರಫೀಕ್ ಮತ್ತು ಮುನ್ನಾ @ ಆಲಿ @ ಮಹಮ್ಮದ್ ಹನೀಫ್ ಎಂಬವರು ಸೇರಿಕೊಂಡು ಅವರ ಸಹಚರರಾದ ಕುಂಬ್ಳೆಯ ಅಬ್ದುಲ್ ಆಸೀರ್, ರಮೀಜ್ ರಾಜಾ, ಪೈಯ @ ಫಯಾಜ್, ಅನ್ವರ್ ಸುಂಕದಕಟ್ಟೆ, ಎಂಬವರೊಂದಿಗೆ ಸೇರಿಕೊಂಡು ರಾಜಧಾನಿ ಜುವೆಲ್ಲರ್‍ಸ್‌ಗೆ ಗುಂಡಿನ ದಾಳಿನ್ನು ನಡೆಸಿರುತ್ತಾರೆ. ಈ ಪ್ರಕರಣದಲ್ಲಿ ಈಗಾಗಲೇ ಅಬ್ದುಲ್ ಆಶೀರ್ ಮತ್ತು ಅನ್ವರ್ ನನ್ನು ದಸ್ತಗಿರಿ ಮಾಡಿದ್ದು, ಇವರು ನ್ಯಾಯಾಂಗ ಬಂಧನದಲ್ಲಿರುತ್ತಾರೆ ಒಂದು ಅಲ್ಟೋಕಾರ್ ಮತ್ತು ಒಂದು ಮೋಟಾರು ಸೈಕಲ್ ಗಳನ್ನು ಈಗಾಗಲೇ ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ ಆರೋಪಿ ಖಾಲಿಯ ರಫೀಕ್ ಎಂಬಾತನನ್ನು ತ್ರಿಶೂರು ಜೈಲಿನಿಂದ ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ತನಿಖೆಗೆ ಒಳಪಡಿಸಿದಾಗಿರುತ್ತದೆ ಈತನನ್ನು ಮಂಜೇಶ್ವರ ಪೊಲೀಸರು ಗೂಂಡಾ ಕಾಯ್ದೆ ಅಡಿ ಬಂದಿಸಿ ತ್ರಿಶೂರ್ ಜೈಲಿನಲ್ಲಿಟ್ಟಿರುತ್ತಾರೆ. ಆರೋಪಿಗಳಾದ ರಮೀಜ್ ರಾಜಾ, ಪೈಯ @ ಫಯಾಜ್ ಎಂಬವರು ದುಬೈ ಹಾಗೂ ಶಾರ್ಜಾದಲ್ಲಿ ತಲೆಮರೆಸಿಕೊಂಡಿರುತ್ತಾರೆ. ಇವರುಗಳ ದಸ್ತಗಿರಿಗೆ ವಿಶೇಷ ತಂಡ ರಚನೆ ಮಾಡಲಾಗಿದೆ.

ಈ ಪ್ರಕರಣದಲ್ಲಿ ತಲೆಮರೆಡಸಿಕೊಂಡಿದ್ದ ಆರೋಪಿ ಮಹಮ್ಮದ್ ಹನೀಪ್ @ ಅಲಿ @ ಮುನ್ನಾ ಎಂಬಾತನ ದಸ್ತಗಿರಿಗೆ ನಗರ ಠಾಣಾ ಪೊಲೀಸ್ ಉಪನಿರೀಕ್ಷರರಾದ ಶ್ರೀ ಅಬ್ದುಲ್ ಖಾದರ್ ರವರ ನೇತೃತ್ವದಲ್ಲಿ ವಿಶೇಷ ಪೊಲೀಸ್ ತಂಡವನ್ನು ರಚಿಸಿದ್ದು ಈ ದಿನ ಬೆಳಿಗ್ಗೆ ವಿಟ್ಲದ ಉಕ್ಕುಡ ಪ್ರಯಾಣಿಕರ ತಂಗುದಾಣದ ಬಳಿ ಮಹಮ್ಮದ್ ಹನೀಪ್ @ ಅಲಿ @ ಮುನ್ನಾ ಎಂಬಾತನನ್ನು ದಸ್ತಗಿರಿ ಮಾಡಿ, ವಿಚಾರಣೆ ನಡೆಸಿ ಆರೋಪಿಯ ಮನೆಯಿಂದ ಈ ಪ್ರಕರಣದಲ್ಲಿ ಶೂಟೌಟ್‌ಗೆ ಬಳಸಿದ ಪಿಸ್ತೂಲನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿ ಮಹಮ್ಮದ್ ಹನೀಪ್ @ ಅಲಿ @ ಮುನ್ನಾ, ಪ್ರಾಯ 34 ವರ್ಷ, ತಂದೆ: ಹಸೈನಾರ್, ವಾಸ: ದೇರ ಮನೆ, ಪೈವಳಿಕೆ ಗ್ರಾಮ, ಕುರುಡಪದವು ಪೋಸ್ಟ್, ಮಂಜೇಶ್ವರ ತಾಲೂಕು, ಕಾಸರಗೋಡು ಜಿಲ್ಲೆ. ಎಂಬಾತನ ಮೇಲೆ ಈಗಾಗಲೇ ಬೆಂಗಳೂರಿನ ಏರ್‌ಪೋರ್ಟ್ ಪೊಲೀಸ್ ಠಾಣೆಯಲ್ಲಿ ಖೋಟಾನೋಟು ಪ್ರಕರಣ, ವಿಟ್ಲ ಠಾಣಾಯಲ್ಲಿ ದರೋಡೆಗೆ ಸಂಚು ಪ್ರಕರಣ, ಕಾಸರಗೊಡು ಪೊಲೀಸ್ ಠಾಣೆಯ ಬೇವಿಂಜೆ ಶೂಟೌಟ್ ಪ್ರಕರಣ, ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತಲಪಾಡಿ ಶೂಟೌಟ್ ಪ್ರಕರಣ ಹಾಗೂ ಕೋಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಕಾಯಿತಿಗೆ ಸಂಚು ಪ್ರಕರಣ ದಾಖಲಾಗಿ ವಿವಿಧ ಕೇರಳ ಮತ್ತು ಕರ್ನಾಟಕ ರಾಜ್ಯಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ 7 ಪ್ರಕರಣಗಳು ದಾಖಲಾಗಿ ನ್ಯಾಯಾಲಯದ ವಿಚಾರಣೆಯಲ್ಲಿರುತ್ತದೆ.

ಈ ಪ್ರಕರಣದ ಪ್ರಮುಖ ಆರೋಪಿ ಭೂಗತ ಪಾತಕಿ ಕಲಿಯೋಗಿಶನು ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದು, ಮಂಗಳೂರು ನಗರ, ಉಡುಪಿ ಜಿಲ್ಲೆಗಳಲ್ಲಿ ಇವನ ಮೇಲೆ ಹಲವಾರು ಪ್ರಕರಣಗಳು ದಾಖಲಾಗಿದ್ದು, ಈತನು ಪುತ್ತೂರಿನ ಮುಳಿಯ ಜುವೆಲ್ಲರ್‍ಸ್‌ನ ಮಾಲೀಕರಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿಯೂ ಸಹ ತಲೆಮರೆಸಿಕೊಂಡಿರುವ ಆರೋಪಿಯಾಗಿರುತ್ತಾನೆ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಆರೋಪಿಗಳಾದ ರಮೀಜ್ ರಾಜಾ ಮತ್ತು ಪೈಯ @ ಫಯಾಜ್‌ರವರು ಭೂಗತ ಪಾತಕಿ ಕಲಿಯೋಗಿಶ ಇವರ ಪತ್ತೆಗಾಗಿ ಉನ್ನತ ಮಟ್ಟದಲ್ಲಿ ಪ್ರಯತ್ನಗಳನ್ನು ನಡೆಸಲಾಗುವುದು.

ಈ ಕಾರ್ಯಚರಣೆಯಲ್ಲಿ ಪುತ್ತೂರು ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ ಶ್ರೀ ರಿಷ್ಯಂತ್ ಐ.ಪಿ.ಎಸ್, ಪುತ್ತೂರು ನಗರ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ಮಹೇಶ್ ಪ್ರಸಾದ್, ಪುತ್ತೂರು ನಗರ ಠಾಣಾ ಪೊಲೀಸ್ ಉಪನಿರೀಕ್ಷಕರು ಹಾಗೂ ತನಿಖಾಧಿಕಾರಿಯಾದ ಶ್ರೀ ಅಬ್ದುಲ್ ಖಾದರ್, ಎ.ಎಸ್.ಐ ಪಾಂಡುರಂಗ, ವೆಂಕಟರಮಣ ಗೌಡ, ಹೆಚ್.ಸಿ 2167 ಸ್ಕರಿಯ, ಹೆಚ್.ಸಿ 1993 ಕೃಷ್ಣಪ್ಪ, ಹೆಚ್‌ಸಿ 1107 ಜಯರಾಮ್, ಪಿ.ಸಿ 1038- ಉದಯ ಕುಮಾರ್, ಪಿಸಿ 685 ಪ್ರಶಾಂತ್ ರೈ, ಪಿ.ಸಿ 688 ಪ್ರಶಾಂತ್ ಶೆಟ್ಟಿ, ಪಿ.ಸಿ 320 ಮಂಜುನಾಥ ಇವರುಗಳು ಭಾಗವಹಿಸಿರುತ್ತಾರೆ. ಇವರ ಈ ಕಾರ್ಯದಕ್ಷತೆ ಹಾಗೂ ಪರಿಶ್ರಮಗಳನ್ನು ಪ್ರಶಂಸಿಸಿ ರೂ. 25,000/- ನಗದು ಬಹುಮಾನ ಘೋಷಿಸಲಾಗಿದೆ ಹಾಗೂ ಇಲಾಖಾ ಹಿರಿಯ ಅಧಿಕಾರಿಗಳು ಪ್ರಶಂಸಿಸಿರುತ್ತಾರೆ.


Spread the love