ಪೌರಕಾರ್ಮಿಕರ ನೇಮಕಾತಿ: ಮಹಾನಗರಪಾಲಿಕೆ ಸ್ಪಷ್ಟೀಕರಣ 

Spread the love

ಪೌರಕಾರ್ಮಿಕರ ನೇಮಕಾತಿ: ಮಹಾನಗರಪಾಲಿಕೆ ಸ್ಪಷ್ಟೀಕರಣ 

ಮಂಗಳೂರು: ಮಂಗಳೂರು ಮಹಾನಗರಪಾಲಿಕೆಗೆ ನೇರಪಾವತಿಯಡಿ ಆಯ್ಕೆಗೊಂಡಿರುವ ಪೌರಕಾರ್ಮಿಕರ ವಿಚಾರಕ್ಕೆ ಸಂಬಂಧಿಸಿದಂತೆ ಮಹಾನಗರಪಾಲಿಕೆ  ವತಿಯಿಂದ ಈ ಕೆಳಗಿನಂತೆ ಸ್ಪಷ್ಟೀಕರಣ ನೀಡಲಾಗಿದೆ.

ಮಂಗಳೂರು ಮಹಾನಗರಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೊರಗುತ್ತಿಗೆ ಪೌರಕಾರ್ಮಿಕರನ್ನು ಪಾಲಿಕೆಯ ವೃಂದ ಮತ್ತು ನೇಮಕಾತಿ ನಿಯಮದಂತೆ ಮಂಜೂರಾದ ಪೌರಕಾರ್ಮಿಕರ ಹುದ್ದೆಗಳ ಪೈಕಿ ಸರ್ಕಾರ ಜಾರಿಗೆ ತಂದಿರುವ ವಿಶೇಷ ನೇಮಕಾತಿ ನಿಯಮಗಳಂತೆ ಶೇ. 50 ರಷ್ಟು ಹುದ್ದೆಗಳಿಗೆ ನೇರ ನೇಮಕಾತಿಗೊಂಡ ಪೌರಕಾರ್ಮಿಕರನ್ನು ಹೊರತುಪಡಿಸಿ ಉಳಿದ ಶೇ. 50 ರಷ್ಟು ಪೌರಕಾರ್ಮಿಕರ ಹುದ್ದೆಗಳನ್ನು ನೇರ ಪಾವತಿ ಮೂಲಕ ತೆಗೆದುಕೊಳ್ಳುವ ಬಗ್ಗೆ ಸರ್ಕಾರದ ಆದೇಶ ಸಂಖ್ಯೆ: ನಅಇ 126/ ಟಿಎಂಎಸ್ 2016; 2017 ರ ಆಗಸ್ಟ್ 7 ರಲ್ಲಿ ರೂಪಿಸಿರುವ ನಿಯಮದಂತೆ, ಹೊರಗುತ್ತಿಗೆ ಆದಾರದಲ್ಲಿ ಕರ್ತವ್ಯ ನಿರ್ವಹಿಸಿದ ಅವಧಿಗೆ ಅನುಗುಣವಾಗಿ ಸೇವಾ ಜೇಷ್ಟತೆಯನ್ನು ಪರಿಗಣಿಸಿ ಪಟ್ಟಿಯನ್ನು ಸಿದ್ದಪಡಿಸಿಕೊಂಡು ಸಂಬಂಧಪಟ್ಟ ಆರೋಗ್ಯ ನಿರೀಕ್ಷಕರುಗಳಿಂದ ಎಲ್ಲಾ ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಬಗ್ಗೆ ಖಾತ್ರಿಪಡಿಸುವ ಸಲುವಾಗಿ ಪೌರಕಾರ್ಮಿಕರ ಜಿಪಿಎಸ್ ಪೆÇೀಟೋಗಳನ್ನು ಅಳವಡಿಸಿಕೊಂಡು ಸಂಬಂಧಪಟ್ಟ ಅಧಿಕಾರಿಗಳಿಂದ ದೃಡೀಕರಿಸಿ ಪಾಲಿಕೆಯ ಪರಿಷತ್ತಿನ ಸಮಾನ್ಯ ಸಭೆಯ ಠರಾವು ಸಂಖ್ಯೆ: ಮನಪಾ/1028/2023-24 ಅಕ್ಟೋಬರ್ 31  ರಂತೆ ಮಂಜೂರಾತಿ ಪಡೆದು ಅರ್ಹ ನೌಕರರನ್ನು ಕ್ರಮಬದ್ದವಾಗಿ ನಿಯಮಾನುಸಾರ ಆಯ್ಕೆ ಮಾಡಲಾಗಿರುತ್ತದೆ.

ಈ ಆಯ್ಕೆ ಪ್ರಕ್ರಿಯೆಯಿಂದ ಯಾರಿಗಾದರೂ ತೊಂದರೆ ಆಗಿದ್ದರೆ , ಬಾಧಿತರಾಗಿದ್ದರೆ ಅಥವಾ ಯಾವುದೇ ದೂರುಗಳಿದ್ದಲ್ಲಿ ಆಯುಕ್ತರ ಕಾರ್ಯಾಲಯಕ್ಕೆ ಸೂಕ್ತ ದಾಖಲಾತಿಗಳೊಂದಿಗೆ ಖುದ್ದಾಗಿ ಭೆÉೀಟಿಯಾಗಿ ಆಕ್ಷೇಪಣೆಯನ್ನು ಸಲ್ಲಿಸಬಹುದಾಗಿದೆ.  ಆದರೆ ಈ ರೀತಿ ವಿನಾಃ ಕಾರಣ ಯಾವುದೇ ಆಧಾರಗಳಿಲ್ಲದೆ ಸ್ವಹಿತಾಸಕ್ತಿಯಡಿ ಪಾಲಿಕೆಯ ವಿರುದ್ದ ಆರೋಪ ಮಾಡಿ ಮಾದ್ಯಮಗಳಿಗೆ ಅನಪೇಕ್ಷಿತ ಹೇಳಿಕೆಗಳನ್ನು ನೀಡುತ್ತಾ ಪಾಲಿಕೆಯ ಗೌರವಕ್ಕೆ ದಕ್ಕೆ ತರುವವರ ಹಾಗೂ ಮುಜುಗರ ಉಂಟುಮಾಡುತ್ತಿರುವವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಸದ್ರಿ ಆಯ್ಕೆ ಪ್ರಕ್ರಿಯೆಯಲ್ಲಿ ಯಾವುದೇ ಲೋಪಗಳು ಕಂಡು ಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದೆಂದು ಈ ಮೂಲಕ ತಿಳಿಸಲಾಗಿದೆ. ಯಾವುದೇ ಆಧಾರ ರಹಿತ ಆರೋಪಗಳಿಗೆ ಮತ್ತು ಊಹಾಪೆÇೀಹಗಳಿಗೆ ಕಿವಿಗೊಡದಂತೆ ಹಾಗೂ ಈ ಬಗ್ಗೆ ಯಾವುಧೇ ದೂರುಗಳಿದ್ದಲ್ಲಿ ಆಯುಕ್ತರನ್ನು ನೇರವಾಗಿ ಸಂಪರ್ಕಿಸುವಂತೆ ಸಾರ್ವಜನಿಕರಲ್ಲಿ ಮಹಾನಗರ ಪಾಲಿಕೆ ಆಯುಕ್ತರು ಮನವಿ ಮಾಡಿದ್ದಾರೆ.


Spread the love