ಪ್ರತಿಭಟನೆಯ ಬ್ಯಾನರಿನಲ್ಲಿ ಕ್ರೈಸ್ತರ ಪವಿತ್ರ ಶಿಲುಬೆಗೆ ಅವಮಾನ ಖಂಡನೀಯ – ಅಮೃತ್ ಶೆಣೈ

Spread the love

ಪ್ರತಿಭಟನೆಯ ಬ್ಯಾನರಿನಲ್ಲಿ ಕ್ರೈಸ್ತರ ಪವಿತ್ರ ಶಿಲುಬೆಗೆ ಅವಮಾನ ಖಂಡನೀಯ – ಅಮೃತ್ ಶೆಣೈ

ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯ ಪ್ರಾರ್ಥನಾ ಮಂದಿರವೊಂದರಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುತ್ತಾರೆ ಎಂಬ ಆರೋಪ ಹೊರಿಸಿ ಅದರ ಕ್ರೈಸ್ತರು ಪೂಜಿಸುವ ಪವಿತ್ರ ಶಿಲುಬೆಯನ್ನು ನಿಷೇಧ ಮಾಡಬೇಕು ಎಂದು ಪೋಸ್ಟರ್ ಮಾಡಿರುವ ವರ್ತನೆಯನ್ನು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಉಪಾಧ್ಯಕ್ಷ ಅಮೃತ್ ಶೆಣೈ ಖಂಡಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು ಮಂಗಳೂರಿನ ಮುಲ್ಕಿಯಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುತ್ತಾರೆ ಎಂದು ಒಂದು ಸಂಸ್ಥೆಯ ವಿರುದ್ಧ ಪ್ರತಿಭಟನೆ ಇದೇ ಬರುವ26 ಕ್ಕೆ ಇದ್ದು, ಬಲವಂತದ ಮತಾಂತರ ತಪ್ಪು ,ಹಾಗೆ ಮಾಡಿದವರ ವಿರುದ್ಧ ಪ್ರತಿಭಟನೆ ಮಾಡುವುದು ಅದನ್ನು ಮಾಡುವ ಸಂಘಟನೆಯ ಹಕ್ಕಿನ ವ್ಯಾಪ್ರಿಯಲ್ಲಿ ಬರುತ್ತದೆ. ಆದರೆ ಕೆಲವರು ಮಾಡಿದ ತಪ್ಪಿಗೆ(ಮಾಡಿದ್ದರೆ) ಇಡೀ ಸಮುದಾಯದವರು ಪೂಜಿಸುವ ಪವಿತ್ರ ಶಿಲುಬೆಯನ್ನು ನಿಷೇಧ ಮಾಡಬೇಕು ಎಂದು ಪೋಸ್ಟರ್ ಮಾಡಿರುವುದು ಅವುಗಳನ್ನು ಹಂಚುವುದು ಸರ್ವಥಾ ತಪ್ಪು .

ಒಳ್ಳೆಯವರು ಕೆಟ್ಟವರು ಎಲ್ಲಾ ಕುಟುಂಬದಲ್ಲಿಯೂ ,ಊರಿನಲ್ಲಿಯೂ ,ಸಮುದಾಯದಲ್ಲಿಯೂ ,ದೇಶದಲ್ಲೂ ಇರುತ್ತಾರೆ. ಅವಿಭಜಿತ ದಕ್ಷಿಣ ಕನ್ನಡದಲ್ಲಿ ಕ್ರೈಸ್ತ ಸಮುದಾಯದವರು ಇತರ ಧರ್ಮೀಯರಿಗೆ ಸರಿಸಮಾನವಾಗಿ ಶೈಕ್ಷಣಿಕ ಸಂಸ್ಥೆಗಳನ್ನು ,ಆಸ್ಪತ್ರೆಗಳನ್ನು ನೂರಾರು ವರ್ಷಗಳಿಂದ ಅತ್ಯುತ್ತಮವಾಗಿ ನಡೆಸಿಕೊಂಡು ಬರುತ್ತಿದ್ದಾರೆ ಸಾಮಾಜಿಕ ಸಾಂಸ್ಕೃತಿಕ ಆರ್ಥಿಕ ಕ್ಷೇತ್ರಗಳಲ್ಲಿ ತಮ್ಮದೇ ಆದ ಕೊಡುಗೆ ನೀಡಿರುತ್ತಾರೆ. ದಕ್ಷಿಣ ಕನ್ನಡ ಜಿಲ್ಲಾಡಳಿತ ಕೂಡಲೆ ಮಧ್ಯ ಪ್ರವೇಶಿಸಿ ಇಂತಹ ಪ್ರತಿಭಟನೆಗಳಲ್ಲಿ ಧಾರ್ಮಿಕ ಭಾವನೆಗಳಿಗೆ ಘಾಸಿ ಉಂಟು ಮಾಡುವ ವಿಚಾರಗಳಿಗೆ ಅವಕಾಶ ನೀಡಬಾರದಂತೆ ಅವರು ಆಗ್ರಹಿಸಿದ್ದಾರೆ.


Spread the love