ಪ್ರಧಾನ ಅಂಚೆ ಕಚೇರಿ 2 ಸಿಬಂದಿಗಳಿಗೆ ಕೊರೋನಾ ಪಾಸಿಟವ್ – ಸೋಮವಾರ ಮಂಗಳೂರಿನ13 ಅಂಚೆ ಕಚೇರಿ ಬಂದ್

Spread the love

ಪ್ರಧಾನ ಅಂಚೆ ಕಚೇರಿ 2 ಸಿಬಂದಿಗಳಿಗೆ ಕೊರೋನಾ ಪಾಸಿಟವ್ – ಸೋಮವಾರ 13 ಅಂಚೆ ಕಚೇರಿ ಬಂದ್

ಮಂಗಳೂರು : ಅಂಚೆ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಇಬ್ಬರು ಸಿಬಂದಿಗಳಿಗೆ ಕೊರೋನಾ ಪಾಸಿಟಿವ್ ದೃಢಪಟ್ಟ ಹಿನ್ನಲೆಯಲ್ಲಿ ಸೋಮವಾರ ಮಂಗಳೂರಿನ 13 ಅಂಚೆ ಕಚೇರಿಗಳನ್ನು ಸ್ಯಾನಿಟೈಜ್ ಮಾಡುವ ಸಲುವಾಗಿ ಬಂದ್ ಮಾಡಲಾಗುವುದು ಎಂದು ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಶ್ರೀಹರ್ಷ ಎನ್ ತಿಳಿಸಿದ್ದಾರೆ.

ಮಂಗಳೂರಿನ ಪ್ರಧಾನ ಅಂಚೆ ಕಚೇರಿಯ ಇಬ್ಬರು ಸಿಬ್ಬಂದಿಗೆ ಇಂದು ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಈ ಇಬ್ಬರು ಅಂಚೆ ಇಲಾಖೆಯ ಕ್ಯಾಶ್ ಓವರ್ ಕರ್ತವ್ಯ ನಿರ್ವಹಿಸುತ್ತಿದ್ದು, ಮಂಗಳೂರಿನ ವಿವಿಧ ಅಂಚೆ ಇಲಾಖೆಗೆ ತೆರಳಿ ನಗದು ವಹಿವಾಟು ನೋಡಿಕೊಳ್ಳುತ್ತಿದ್ದರು.

ಆದ್ದರಿಂದ ಮಂಗಳೂರಿನ ಪಾಂಡೇಶ್ವರದಲ್ಲಿರುವ ಪ್ರಧಾನ ಅಂಚೆ ಕಚೇರಿ, ಹಂಪನಕಟ್ಟಾ, ಅಶೋಕನಗರ, ಗಾಂಧಿನಗರ, ಬೋಳೂರು, ಕೂಳೂರು, ಕೊಂಚಾಡಿ, ಕಾವೂರು, ಬಿಜೈ, ಕೊಡಿಯಾಲ್ ಬೈಲ್, ಫಳ್ನೀರ್, ಫಿಶರಿಸ್ ಕಾಲೇಜ್, ಮಂಗಳೂರು ಕಲೆಕ್ಟರೇಟ್, ಎಸ್ ಓ ಅಂಚೆ ಕಚೇರಿಗಳು ಸೋಮವಾರದಂದು ಸಾರ್ವಜನಿಕ ಸೇವೆಗೆ ದೊರೆಯುವುದಿಲ್ಲ ಎಂದು ತಿಳಿದು ಬಂದಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಅಂಚೆ ಇಲಾಖೆಯಿಂದ ಇಂದು ಸ್ಯಾನಿಟೈಸೇಶನ್ ಮಾಡಲಾಗಿದೆ.ಎಲ್ಲಾ ಅಂಚೆ ಕಚೇರಿಗಳಿಗೂ ಸ್ಯಾನಿಟೈಸೇಶನ್ ಮಾಡಲಾಗಿದ್ದು, ಸೋಮವಾರದವರೆಗೆ 13 ಅಂಚೆ ಕಚೇರಿ ಮುಚ್ಚಲಿವೆ. ಆದ್ದರಿಂದ ಸಾರ್ವಜನಿಕ ಸೇವೆ ಲಭ್ಯವಿರುವುದಿಲ್ಲ ಎಂದು ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಶ್ರೀಹರ್ಷ ಎನ್ ತಿಳಿಸಿದ್ದಾರೆ.


Spread the love