ಪ್ರಸ್ತುತ ವಿದ್ಯಮಾನಗಳಿಗೆ ಹೆಚ್ಚು ಗಮನ ಹರಿಸಿ – ಸನಲ್ ನಾಯರ್

Spread the love

ಪ್ರಸ್ತುತ ವಿದ್ಯಮಾನಗಳಿಗೆ ಹೆಚ್ಚು ಗಮನ ಹರಿಸಿ – ಸನಲ್ ನಾಯರ್

ಮೂಡುಬಿದಿರೆ: ಪತ್ರಿಕೋದ್ಯಮ ವಿದ್ಯಾರ್ಥಿಗಳು ತಮ್ಮ ಕ್ಷೇತ್ರದ ಪ್ರಸ್ತುತ ವಿದ್ಯಮಾನಗಳಿಗೆ ಹೆಚ್ಚು ಗಮನ ಹರಿಸಿ, ತಮ್ಮನ್ನು ತಾವು ತೊಡಗಿಸಿಕೊಂಡಾಗ ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಲು ಸಾಧ್ಯ ಎಂದು ಕಲರ್ಸ್ ಕನ್ನಡದ ಧಾರವಾಹಿಯ ಕಾರ್ಯನಿರ್ವಾಹಕ ಸನಲ್ ನಾಯರ್ ಹೇಳಿದರು.

ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಬಂದಿದ್ದರು.

ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮನ್ನೂ ತಾವು ತೊಡಗಿಸಿಕೊಂಡಾಗ ಮಾತ್ರ ಉನ್ನತವಾಗಿ ಬೆಳೆಯಲು ಸಾಧ್ಯ. ಅಲ್ಲದೇ ಪ್ರತಿಯೊಬ್ಬರು ವಿಭಿನ್ನವಾದ ಅಭಿರುಚಿ ಹೊಂದಿದಾಗ ಪ್ರಸ್ತುತ ಮಾಧ್ಯಮ ಕ್ಷೇತ್ರದಲ್ಲಿ ತಮ್ಮ ತನವನ್ನು ರೂಪಿಸಿಕೊಳ್ಳಬಹುದು. ವಿದ್ಯಾರ್ಥಿ ದೆಸೆಯಲ್ಲಿ ನಿರ್ದಿಷ್ಟ ಗುರಿಯನ್ನಿಟ್ಟುಕೊಂಡು ಸಾಧನೆ ಮಾಡಲು ಬಹು ಸುಲಭ. ಅಲ್ಲದೇ ನಮ್ಮ ಬೆಳವಣಿಗೆಯಲ್ಲಿ ಸೃಜನ ಶೀಲತೆಯು ಬಹುಮುಖ್ಯ ಪಾತ್ರ ವಹಿಸುತ್ತದೆ ಅದನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ವಿದ್ಯಾರ್ಥಿಗಳಿಗೆ ಧಾರವಾಹಿ ಮತ್ತು ಪ್ರೊಡಕ್ಷನ್ ಹೌಸ್ ಕುರಿತು ಇರುವ ಕುತೂಹಲಕಾರಿ ಸಂಗತಿಗಳನ್ನು ಹಾಗೂ ವಾಹಿನಿಗಳು ಯಾವ ರೀತಿಯಾಗಿ ಮತ್ತು ಅದರಲ್ಲಿರುವ ಉದ್ಯೋಗವಕಾಶಗಳ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಪದವಿ ವಿಭಾಗದ ಸಂಯೋಜಕರಾದ ಶ್ರೀನಿವಾಸ ಪೆಜತ್ತಾಯ, ಪ್ರಾಧ್ಯಾಪಕರಾದ ಡಾ. ಶ್ರೀನಿವಾಸ್ ಹೊಡೆಯಾಲ ಮತ್ತು ಇತರ ಉಪನ್ಯಾಸಕರು ಉಪಸ್ಥಿತರಿದ್ದರು.


Spread the love