ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಮಂಗಳೂರು : 36ನೇ ಪದವಿ ಪ್ರದಾನ ಸಮಾರಂಭ

Spread the love

ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಮಂಗಳೂರು : 36ನೇ ಪದವಿ ಪ್ರದಾನ ಸಮಾರಂಭ

ಫಾದರ್ ಮುಲ್ಲರ್ ಚಾರಿಟೆಬಲ್ ಸಂಸ್ಥೆಗಳ ಅ೦ಗವಾದ ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ 36 ನೇ ಪದವಿ ಪ್ರದಾನ ಸಮಾರಂಭವನ್ನು ಏಪ್ರಿಲ್ 16, 2026 ರಂದು ಗುರುವಾರ ಬೆಳಿಗ್ಗೆ 10.00 ಗಂಟೆಗೆ ಕಂಕನಾಡಿಯ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್‌ನಲ್ಲಿ ಆಯೋಜಿಸಲಾಗಿದೆ.

ಸಮಾರಂಭದ ಮುಖ್ಯ ಅತಿಥಿಗಳಾಗಿ ಮಂಗಳೂರಿನ ಯೆನೆಪೊಯ (ಡೀಮ್ಡ್ ಟು ಬಿ ಯುನಿವರ್ಸಿಟಿ) ಕುಲಪತಿ ಡಾ. ಕೆ. ಎಸ್. ಗಂಗಾಧರ ಸೋಮಯಾಜಿ ಮತ್ತು ನವದೆಹಲಿಯ ರಾಷ್ಟ್ರೀಯ ಹೋಮಿಯೋಪತಿ ಆಯೋಗದ ಅಧ್ಯಕ್ಷ ಡಾ. ತಾರಕೇಶ್ವರ ಜೈನ್ ಭಾಗವಹಿಸಲಿದ್ದಾರೆ.  

ಸಂದರ್ಭದಲ್ಲಿ ಒಟ್ಟು 111 ವಿದ್ಯಾರ್ಥಿಗಳು, ಇದರಲ್ಲಿ 92 ಪದವಿಪೂರ್ವ (BHMS) ಇಂಟರ್ನ್‌ಗಳು ಮತ್ತು 19 ಸ್ನಾತಕೋತ್ತರ (MD ಹೋಮಿಯೋಪತಿ) ವಿದ್ಯಾರ್ಥಿಗಳು ಪದವಿ ಪಡೆಯಲಿದ್ದಾರೆ.

ಸಮಾರಂಭದಲ್ಲಿ ಪದವಿ ಪ್ರದಾನ, ವೃತ್ತಿಪರ ಪ್ರಮಾಣವಚನ ಬೋಧನೆ ಮತ್ತು ಶೈಕ್ಷಣಿಕ ಸಾಧನೆಗಳನ್ನು ಗುರುತಿಸಲಾಗುತ್ತದೆ. “ದಿ ಫಾದರ್ ಮುಲ್ಲರ್ ಚಾರಿಟೆಬಲ್ ಇನ್‌ಸ್ಟಿಟ್ಯೂಷನ್ಸ್ ಪ್ರೆಸಿಡೆಂಟ್ಸ್ ಗೋಲ್ಡ್ ಮೆಡಲ್ಅನ್ನು ಅತ್ಯುತ್ತಮ ಬೆಸ್ಟ್ ಔಟ್‌ಗೋಯಿಂಗ್ ಪದವಿಪೂರ್ವ ವಿದ್ಯಾರ್ಥಿಗೆ ನೀಡಲಾಗವುದು.

ಹೊರಹೋಗುವ ಬ್ಯಾಚ್ಗೆ ಕೆಳಕ೦ಡ೦ತೆ  ಪ್ರಶಸ್ತಿಗಳನ್ನು ನೀಡಲಾಗುವುದು

  1. ಅವಾರ್ಡ್ ಆಫ್ ಎಕ್ಸಲೆನ್ಸ್ಪದವಿಪೂರ್ವ
  2. ಬೆಸ್ಟ್ ಔಟ್ಗೋಯಿಂಗ್ ಪೋಸ್ಟ್ ಗ್ರ್ಯಾಜುವೇಟ್
  3. ಅವಾರ್ಡ್ ಆಫ್ ಎಕ್ಸಲೆನ್ಸ್ಸ್ನಾತಕೋತ್ತರ ವಿಭಾಗ
  4. ಬೆಸ್ಟ್ ಸ್ಟೂಡೆಂಟ್ ರಿಸರ್ಚ್ ಅವಾರ್ಡ್

ಇದಲ್ಲದೆ, ಶೈಕ್ಷಣಿಕ ಗೌರವಗಳು ಕೆಳಕ೦ಡ೦ತಿದೆ

  1. ಇನ್ಸ್ಟಿಟ್ಯೂಷನಲ್  ಪ್ರೈಜಸ್ : 8
  2. ಸಬ್ಜೆಕ್ಟ್ ವೈಸ್ ಪ್ರೈಜಸ್ : 17 (UG & PG)
  3. RGUHS ಯುನಿವರ್ಸಿಟಿ ರಾ೦ರ್ಕ್ಸ್: ಪದವಿಪೂರ್ವ – 4, ಸ್ನಾತಕೋತ್ತರ ಪದವಿ – 12
  4. ಹೋಮಿಯೋಪತಿ ಮೆಟೀರಿಯಾ ಮೆಡಿಕಾದ RGUHS ಚಿನ್ನದ ಪದಕ: 1
  5. ಕ್ವಾಲಿಟಿ MD ಡಿಸರ್ಟೇಶನ್ ಅವಾರ್ಡ್ (CCRH ವತಿಯಿಂದ): 1

ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜು ಆಸ್ಪತ್ರೆಯು, ಜನವರಿ 6, 2026 ರಿಂದ ಜನವರಿ 5, 2028 ರವರೆಗಿನ ಅವಧಿಗೆ ಆಯುಷ್ ಪ್ರವೇಶ ಮಟ್ಟದ NABH ಮಾನ್ಯತೆ ಪಡೆದಿದೆ ಎಂದು ಘೋಷಿಸಲು ಹೆಮ್ಮೆಪಡುತ್ತದೆ. ಇದಲ್ಲದೆ, ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿರುವವೈದ್ಯಕೀಯ ಪ್ರಯೋಗಾಲಯವು ಏಪ್ರಿಲ್ 1, 2026 ರಿಂದ 31 ಮಾರ್ಚ್ 2030 ರವರೆಗಿನ ಅವಧಿಗೆ NABL ನೊಂದಿಗೆ ಮಾನ್ಯತೆ ಪಡೆದಿದೆ

ಪದವಿ ಪ್ರದಾನ ಸಮಾರಂಭವು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಯಾಣದಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಲಿದೆ

ಸಂಸ್ಥೆಯು ಹೋಮಿಯೋಪತಿ ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯ ಶ್ರೇಷ್ಠತೆಗೆ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.


Spread the love
Subscribe
Notify of

0 Comments
Inline Feedbacks
View all comments