ಫೆಬ್ರವರಿ 25 ರಂದು ಅಮ್ಮ ಉಡುಪಿಯಲ್ಲಿ ಊಟೋಪಚಾರಕ್ಕಾಗಿ “ಉಗ್ರಾಣ ಮುಹೂರ್ತ”

Spread the love

ಫೆಬ್ರವರಿ 25 ರಂದು ಅಮ್ಮ ಉಡುಪಿಯಲ್ಲಿ ಊಟೋಪಚಾರಕ್ಕಾಗಿ “ಉಗ್ರಾಣ ಮುಹೂರ್ತ”

ಉಡುಪಿ: ಕೋಟ್ಯಾಂತರ ಭಕ್ತರ ಆರಾಧ್ಯಮಾತೆಯಾಗಿರುವ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿದೇವಿಯವರು ಫೆಬ್ರವರಿ 25 ರಂದು ಉಡುಪಿಗೆ ಆಗಮಿಸುವ ಪ್ರಯುಕ್ತ ಉಡುಪಿಯ ಎಂ.ಜಿ.ಎಂ ಮೈದಾನದಲ್ಲಿ ಆಯೋಜಿಸಿರುವ ಅಮೃತ ವೈಭವ ಕಾರ್ಯಕ್ರಮದಲ್ಲಿ ಭಾಗವಹಿಸುವ ಸುಮಾರು 50 ರಿಂದ 60 ಸಾವಿರ ಭಕ್ತರಿಗೆ ಊಟೋಪಚಾರದ ವ್ಯವಸ್ಥೆಗಾಗಿ ಗುರುವಾರ ಉಗ್ರಾಣ ಮಹೂರ್ತ ನಡೆಯಿತು.

ಉಗ್ರಾಣ ಮಹೂರ್ತ ನೆರೆವೇರಿಸಿ ಮಾತನಾಡಿದ ಅಮೃತ ವೈಭವ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರಾದ ಕೆ. ರಘುಪತಿ ಭಟ್‍ರವರು ‘ಸಮಿತಿಯು ಈಗಾಗಲೇ ಊಟೋಪಚಾರಕ್ಕಾಗಿ ಸಾಕಷ್ಟು ವ್ಯವಸ್ಥೆಯನ್ನು ಕಲ್ಪಿಸಿದ್ದರೂ ಕೂಡ ಸಂಘ ಸಂಸ್ಥೆಗಳು, ಭಜನಾ ಮಂದಿರಗಳು, ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಧವಸ-ಧಾನ್ಯ, ತರಕಾರಿಗಳನ್ನ ಹೊರೆಕಾಣಿಕೆ ರೂಪದಲ್ಲಿ ನೀಡಿ ಮಾತಾ ಅಮೃತಾನಂದಮಯಿಯವರ ಅಮೃತ ವೈಭವದ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ಸಹಕಾರಿಯಾಗುವಂತೆ ಕರೆ ನೀಡಿದರು.

ಉಗ್ರಾಣ ಮಹೂರ್ತದಲ್ಲಿ ಸ್ವಾಗತ ಸಮಿತಿಯ ಅಧ್ಯಕ್ಷರಾದ ಆನಂದ್ ಸಿ.ಕುಂದರ್, ಸಮಿತಿಯ ಉಪಾಧ್ಯಕ್ಷರುಗಳಾದ ರಮೇಶ್ ಕಾಂಚನ್, ದಿನೇಶ್ ಪುತ್ರನ್, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಪಾಂಡುರಂಗ ಮಲ್ಪೆ, ರಾಧಾಕೃಷ್ಣ ಮೆಂಡನ್ ಮಲ್ಪೆ, ಸಾದು ಸಾಲ್ಯಾನ್ ಊಟೋಪಾಚಾರದ ಸಂಪೂರ್ಣ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿರುವ ಮಲ್ಪೆಯ ರಮೇಶ್ ಕೋಟ್ಯಾನ್, ರಾಮಚಂದ್ರ ಕುಂದರ್ ಮತ್ತು ಮಂಜುನಾಥ ಹೆಬ್ಬಾರ್ ಉಪಸ್ಥಿತರಿದ್ದರು.


Spread the love

1 Comment

Comments are closed.