ಬಂಟ್ವಾಳದಲ್ಲಿ ಸೀಲ್ ಡೌನ್ ಆದೇಶ ಉಲ್ಲಂಘಿಸಿದ 30 ಮಂದಿಯ ವಿರುದ್ದ ಪ್ರಕರಣ ದಾಖಲು

Spread the love

ಬಂಟ್ವಾಳದಲ್ಲಿ ಸೀಲ್ ಡೌನ್ ಆದೇಶ ಉಲ್ಲಂಘಿಸಿದ 30 ಮಂದಿಯ ವಿರುದ್ದ ಪ್ರಕರಣ ದಾಖಲು

ಬಂಟ್ವಾಳ: ಬಂಟ್ವಾಳದಲ್ಲಿ ಜಿಲ್ಲಾಡಳಿತ ವಿಧಿಸಿದ್ದ ಸೀಲ್ ಡೌನ್ ತೆರವುಗೊಳಿಸುವಂತೆ ಆಗ್ರಹಿಸಿ ಪ್ರತಿಭಟಿಸಿ ಕಾನೂನು ಮುರಿದ ಆರೋಪದ ಮೇಲೆ 30 ಮಂದಿಯ ವಿರುದ್ದ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೇ 21 ರಂದು ಕೆಲವೊಂದು ವ್ಯಕ್ತಿಗಳು ಗುಂಪು ಸೇರಿ ಬಂಟ್ವಾಳದಲ್ಲಿ ಜಿಲ್ಲಾಡಳೀತ ವಿಧಿಸಿದ್ದ ಸೀಲ್ ಡೌನ್ ತೆರವುಗೊಳಿಸುವಂತೆ ಆಗ್ರಹಿಸಿದ್ದರು. ಜಿಲ್ಲಾಡಳಿತ ಸೀಲ್ ಡೌನ್ ವಿಧಿಸಿದ್ದರಿಂದ ಜನಜೀವನಕ್ಕೆ ತೊಂದರೆಯಾಗಿದೆ. ಸೀಲ್ ಡೌನ್ ವಿಧಿಸಿದ ಬಳಿಕವೂ ಕೂಡ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿದೆ. ಮೂರು ಮಂದಿ ಮೃತಪಟ್ಟಿದ್ದು ಜನರ ಹಿತದೃಷ್ಠಿಯಿಂದ ಸೀಲ್ ಡೌನ್ ತೆರವುಗೊಳಿಸುವಂತೆ ಆಗ್ರಹಿಸಿದ್ದರು. ಈ ಮೂಲಕ ಸೀಲ್ ಡೌನ್ ಆದೇಶವನ್ನು ಉಲ್ಲಂಘಿಸಿದ್ದರು ಎನ್ನಲಾಗಿದೆ.

ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕು ಬಿ ಕಸಬಾ ಗ್ರಾಮದ ಬಂಟ್ವಾಳ ಪೇಟೆ ಕೊರೋನಾ ಹಿನ್ನೆಲೆಯಲ್ಲಿ ಕಂಟೈನ್ ಮೆಂಟ್ ಝೋನ್ ಎಂದು ಘೋಷಿಸಲಾಗಿದ್ದು, ಸದರಿ ಪ್ರದೇಶದಲ್ಲಿ ಮೇ 21 ರಂದು 12.00 ಗಂಟೆಗೆ ಬಂಟ್ವಾಳ ತಹಶಿಲ್ದಾರರು ಪರಿಶೀಲಿಸಲು ಸ್ಥಳಕ್ಕೆ ಭೇಟಿ ನೀಡಿದಾಗ ಸರಕಾರ ಜಾರಿಗೊಳಿಸಿದ ಅದೇಶವನ್ನು ಉಲ್ಲಂಘಿಸಿ ಕಂಟೈನ್ ಮೆಂಟ್ ಝೋನ್ ಒಳಗೆ ಸುಮಾರು ಆರು ಜನರ ಗುಂಪು ಸೇರಿರುವುದು ಕಂಡು ಬಂದಿದ್ದು. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಸೀಲ್ ಡೌನ್ ನಿಯಮಾವಳಿಗಳನ್ನು ಉಲ್ಳಂಘಿಸಿದ ಆರೋಪದ ಮೇಲೆ 30 ಮಂದಿಯ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.


Spread the love