ಬಜೆಟಿ ನಲ್ಲಿ ಸರ್ವರಿಗೂ ಸಮಪಾಲು-ಕರಾವಳಿ ಜನತೆಗೂ ಹರ್ಷ – ರಘುಪತಿ ಭಟ್

Spread the love

ಬಜೆಟಿ ನಲ್ಲಿ ಸರ್ವರಿಗೂ ಸಮಪಾಲು-ಕರಾವಳಿ ಜನತೆಗೂ ಹರ್ಷ – ರಘುಪತಿ ಭಟ್

ಉಡುಪಿ: ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪನವರು ಇಂದು ಮಂಡಿಸಿದ ಬಜೆಟ್ ಅನೇಕ ವರ್ಷಗಳ ನಂತರ ಯಾವ ವರ್ಗಕ್ಕೂ ಅಸಮಾಧಾನ ಹೊಂದದ ಬಜೆಟ್ ಆಗಿದೆ. ಕೇವಲ ಒಂದು ವರ್ಗವನ್ನು ಓಲೈಸಲು ಮಂಡಿಸಿದ ಬಜೆಟ್ ಆಗದೆ “ಸರ್ವರಿಗೂ ಸಮಬಾಳು- ಸರ್ವರಿಗೂ ಸಮಪಾಲು” ಎಂಬ ತತ್ವ ಪಾಲನೆ ಆಗಿದೆ ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದರು.

ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿರುವ ಅವರು ಅತ್ಯಂತ ಕಡೆಗಣನೆಗೆ ಕಾರಣವಾಗಿದ್ದ ಕರಾವಳಿ ಜಿಲ್ಲೆಗಳಿಗೆ ಈ ಬಾರಿಯ ಬಜೆಟ್ ಸಂತಸ ನೀಡಿದೆ. ವಿಶೇಷವಾಗಿ ಈ ಬಾರಿಯ ಬಜೆಟ್ನಲ್ಲಿ ಮೀನುಗಾರರ ಅನೇಕ ವರ್ಷಗಳ ಬೇಡಿಕೆಗೆ ಮನ್ನಣೆ ದೊರಕಿದೆ.

  •  ಕರಾವಳಿ ಪ್ರದೇಶದಲ್ಲಿ ಪಶ್ಚಿಮ ಘಟ್ಟದ ನದಿಗಳಿಗೆ ಅಡ್ಡಲಾಗಿ ‘ಕಿಂಡಿ ಅಣೆಕಟ್ಟು ಯೋಜನೆ’ಗಳ ವ್ಯಾಪಕ ಅನುಷ್ಠಾನಕ್ಕೆ ಯೋಜನೆ ರೂಪಿಸಲಾಗಿದೆ.
  • “ಮಹಿಳಾ ಮೀನುಗಾರರ ಸಬಲೀಕರಣ” ಯೋಜನೆಯಡಿ 1000 ಮೀನುಗಾರ ಮಹಿಳೆಯರಿಗೆ ದ್ವಿಚಕ್ರ ವಾಹನಗಳನ್ನು ನೀಡಲು ಐದು ಕೋಟಿ ರೂ. ಅನುದಾನ ನೀಡಿದ್ದು ಬಹುದೊಡ್ಡ ಆಶಾದಾಯಕ ಯೋಜನೆಯಾಗಿದೆ.
  • ಮಂಗಳೂರಿನ ಕುಳಾಯಿಯಲ್ಲಿ ನಿರ್ಮಿಸಲಾಗುತ್ತಿರುವ ಹೊಸ ಮೀನುಗಾರಿಕೆ ಬಂದರಿನಲ್ಲಿ 12.5 ಕೋಟಿ ರೂ. ವೆಚ್ಚದಲ್ಲಿ ಆಧುನಿಕ ಕರಾವಳಿ ಮೀನು ರಫ್ತು ಸ್ಥಾವರ ಸ್ಥಾಪನೆಗೂ ಅನುದಾನ ನೀಡಿದೆ.
  • ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಜವುಳಿ ಪಾರ್ಕ್ ಘೋಷಿಸಿ ಕರಾವಳಿಯಲ್ಲಿ ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡಲಾಗಿದೆ.
  • ಉಡುಪಿಯ ಅಂಗಾರು ಕಟ್ಟೆ ಬಂದರು ಅಭಿವೃದ್ಧಿಗೆ 130 ಕೋಟಿ ರೂ. ಅನುದಾನ ಬಜೆಟ್ನಲ್ಲಿ ಘೋಷಣೆಯಾಗಿದೆ.
  • ಉಡುಪಿ ಜಿಲ್ಲೆಯ ಹೆಜಮಾಡಿಕೋಡಿಯಲ್ಲ್ಲಿ ಪರಿಷ್ಕೃತ ಅಂದಾಜು ವೆಚ್ಚ 181 ಕೋಟಿ ರೂ.ಗಳಲ್ಲಿ ಮೀನುಗಾರಿಕೆ ಬಂದರು ನಿರ್ಮಾಣ ಘೋಷಣೆ ಅದೆಷ್ಟೋ ವರ್ಷಗಳ ಬೇಡಿಕೆಗೆ ಸ್ಪಂದನೆಯಾಗಿದೆ.
  • ಉಡುಪಿ ಜಿಲ್ಲೆ ಬೈಂದೂರು ತಾಲ್ಲೂಕಿನ ಮರವಂತೆಯ ಹೊರ ಬಂದರಿನ ಎರಡನೇ ಹಂತದ ಕಾಮಗಾರಿ ಪೂರ್ಣಗೊಳಿಸಲು 85 ಕೋಟಿ ರೂ. ಅನುದಾನನೀಡಿದೆ.
  • ಉಡುಪಿಯಲ್ಲಿರುವ ಸ್ಕೌಟ್ಸ್ ಮತ್ತು ಗೈಡ್ಸ್ ಕೇಂದ್ರಗಳಿಗೆ ನಾಲ್ಕು ಕೋಟಿ ರೂ. ಅನುದಾನ ದೊರಕಿದೆ.
  • ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯಲ್ಲಿ ಎರಡು ಕೋಟಿ ರೂ. ವೆಚ್ಚದಲ್ಲಿ ಹಿನ್ನೀರು ಮೀನು ಮರಿ ಉತ್ಪಾದನಾ ಕೇಂದ್ರ ಸ್ಥಾಪನೆಯ ಘೋಷಣೆಯಾಗಿದೆ.
  • ಆಧುನಿಕ ಮೀನುಗಾರಿಕೆ ತಾಂತ್ರಿಕತೆ ಅಳವಡಿಕೆಯ ಉತ್ತೇಜನಕ್ಕೆ 1.5 ಕೋಟಿ ರೂ. ವೆಚ್ಚದಲ್ಲಿ “ಕರ್ನಾಟಕ ಮತ್ಸ್ಯ ವಿಕಾಸ ಯೋಜನೆ’ ಜಾರಿ.
  • ಇದರಲ್ಲಿ ಪಶ್ಚಿಮ ವಾಹಿನಿ ಯೋಜನೆ, ವಿವಿಧ ಮೀನುಗಾರಿಕಾ ಬಂದರು ಅಭಿವೃದ್ಧಿ ಕಾರ್ಯಕ್ರಮಗಳು ಸೇರಿವೆ.
  • ಅಡಿಕೆ ಬೆಳೆಗಾರರ ಪ್ರಾಥಮಿಕ/ ಮಾರುಕಟ್ಟೆ ಸಹಕಾರ ಸಂಘಗಳಲ್ಲಿ ಪ್ರತಿ ರೈತ ಕುಟುಂಬಕ್ಕೆ ನೀಡುವ ದೀರ್ಘಾವಧಿ ಕೃಷಿ ಸಾಲದ ಪೈಕಿ ಗರಿಷ್ಠ ಎರಡು ಲಕ್ಷ ರೂ. ವರೆಗಿನ ಸಾಲಕ್ಕೆ ಶೇ.5 ರಷ್ಟು ಬಡ್ಡಿ
  • ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯ, ಅಡಿಕೆ ಬೆಳೆಗಾರರ ಸಾಲಕ್ಕೆ ಬಡ್ಡಿ ವಿನಾಯಿತಿ ಹೀಗೆ ಅನೇಕ ಕೊಡುಗೆಗಳು ಕರಾವಳಿಗೆ ದೊರಕಿದೆ.
  • ಇನ್ನು ರಾಜ್ಯದ ಆಟೋ ಚಾಲಕರ ಮಕ್ಕಳಿಗೆ ಮಾಸಿಕ, 2000 ರೂಗಳ ವಿದ್ಯಾರ್ಥಿ ವೇತನ ನೀಡಲು ಸರ್ಕಾರ ನಿರ್ಧರಿಸಿದ್ದು ರಾಜ್ಯದ ಲಕ್ಷಾಂತರ ರೈತರ ಪಾಲಿಗೆ ಬೆಳಕಾಗಿದೆ. ಕಡೆಹಣಿಸ್ಪಟ್ಟಿದ್ದ ರಿಕ್ಷಾ ಚಾಲಕರ ಬೇಡಿಕೆಗೆ ಈಗ ಮನ್ನಣೆ ದೊರೆತಿದೆ.
  • ಮಹಿಳಾ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ಯೋಜನೆ ಜಾರಿಗೊಳಿಸಲಾಗಿದೆ.ಒಂದು ಲಕ್ಷ ಮಹಿಳಾ ಕಾರ್ಮಿಕರು ಇದರ ಲಾಭ ಪಡೆಯಬಹುದಾಗಿದೆ.
  • ಕಟ್ಟಡ ಕಾರ್ಮಿಕರಿಗೆ 10 ಮೊಬೈಲ್ ಕ್ಲಿನಿಕ್ ತೆರೆಯಲು ಘೋಷಣೆ ಮಾಡಲಾಗಿದೆ.
  • ಕೃಷಿಗೆ ಸಹಜವಾಗಿಯೇ ಹೆಚ್ಚಿನ ಮಹತ್ವ ನೀಡಲಾಗಿದೆ,ರಾಜ್ಯದ ಎಲ್ಲಾ ಪ್ರದೇಶದ ರೈತರಿಗೆ ಕೊಡುಗೆ ನೀಡಲಾಗಿದೆ.
  • ಪ್ರಥಮ ಬಾರಿಗೆ ಮಕ್ಕಳ ಬಜೆಟ್ ಮಂಡಿಸಿದ್ದು ಕಾರ್ಮಿಕರ ಮಕ್ಕಳಿಗೆ 110 ಶಿಶುಪಾಲನಾ ಕೇಂದ್ರಗಳನ್ನು ಘೋಷಣೆ ಮಾಡಲಾಗಿದೆ.
  • ಪ್ರತೀ ಎರಡನೇ ಶನಿವಾರ ಪಠ್ಯೇತರ ಚಟುವಟಿಕೆಗಳಿಗೆ ಅವಕಾಶ ನೀಡಿದ್ದು ಬ್ಯಾಗ್ ರಹಿತ ದಿನ ಎಂದು ಘೋಷಿಸಲಾಗಿದೆ.
  • 100 ಬಾಲಮಂದಿರ ಸ್ಥಾಪನೆಗೆ ಒತ್ತು ನೀಡಲಾಗಿದೆ.
  • ಪರಿಶಿಷ್ಟ ಜಾತಿ ಪಂಗಡ ಯುವಕರಿಗೆ ಉಚಿತ ಡ್ರೈವಿಂಂಗ್ ತರಬೇತಿ ನೀಡಲು ಒತ್ತು ನೀಡುವ ಯೋಜನೆ ಜಾರಿಗೊಳಿಸಲಾಗಿದೆ.
  • ಯುವಕರಿಗೆ ಕ್ರೀಡಾ ಪ್ರೋತ್ಸಾಹ ಯೋಜನೆಗಳನ್ನು ಒತ್ತು ನೀಡಲಾಗಿದೆ.
  • ಹಿರಿಯ ನಾಗರಿಕರಿಗೆ ಜೀವನಚೈತ್ರ ಯಾತ್ರೆಗೆ ಪ್ರೋತ್ಸಾಹಧನ ನೀಡಲಾಗಿದೆ. ದೇಶದ ಪ್ರಮುಖ ತೀರ್ಥ ಕ್ಷೇತ್ರಗಳಿಗೆ ಭೇಟಿ ನೀಡಲು ಸರ್ಕಾರ ಅನುದಾನ ನೀಡಲಿದೆ.
  • ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ 5 ಕೋಟಿ ಅನುದಾನ ಘೋಷಣೆ ಮಾಡಲಾಗಿದೆ.
  • ಆರೋಗ್ಯದ ಹಿತದೃಷ್ಟಿಯಿಂದ ಸಾವಯವ ಕೃಷಿಗೆ 200 ಕೋಟಿ ರೂಪಾಯಿ ಘೋಷಿಸಲಾಗಿದೆ.

ಇನ್ನು ಜಾತೀವಾರು ಕೊಡಗೆಗಳಾಗಿ, ಕ್ರೈಸ್ತರಿಗೆ 200 ಕೋಟಿ, ಕುಂಬಾರರಿಗೆ 20 ಕೋಟಿ, ವಿಶ್ವಕರ್ಮರಿಗೆ 25 ಕೋಟಿ, ಜನವರಿ 1 ಜಕಣಾಚಾರಿ ಜಯಂತಿ ಘೋಷಣೆ, ಆರ್ಯವೈಶ್ಯರಿಗೆ 15 ಕೋಟಿ, ಲಂಬಾಣಿಗೆ 50 ಲಕ್ಷ, ಗೊಲ್ಲರಿಗೆ 10 ಕೋಟಿ, ಬಸವಣ್ಣ (ಲಿಂಗಾಯತ) ಪ್ರತಿಮೆಗೆ 20 ಕೋಟಿ, (ಒಕ್ಕಲಿಗ)ಕೆಂಪೇಗೌಡರ 100 ಅಡಿ ಪ್ರತಿಮೆ, ನೇಕಾರರ ಸಾಲಮನ್ನಾಕ್ಕೆ 74 ಕೋಟಿ, ಚಮ್ಮಾರಿಗೆ ಪ್ರತ್ಯೇಕ ರಿಯಾಯಿತಿ ಎಸ್ ಸಿ, ಎಸ್ಟಿ ಸಮುದಾಯಗಳ ಅಭಿವೃದ್ಧಿಗೆ ಭರಪೂರ ಅನುದಾನ ಹೀಗೆ ಅನೇಕ ಕೊಡುಗೆಯನ್ನು ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪನವರು ಇಂದಿನ ಬಜೆಟ್ನಲ್ಲಿ ಘೋಷಣೆ ಮಾಡಿದ್ದಾರೆ. ಕರಾವಳಿ ಕರ್ನಾಟಕ, ಕಲ್ಯಾಣ ಕರ್ನಾಟಕ, ಮಧ್ಯ ಕರ್ನಾಟಕ ಹೀಗೆ ರಾಜ್ಯದ ಮೂಲೆ ಮೂಲೆಯೂ ಅಭಿವೃದ್ಧಿಗೊಳ್ಳುವ ಉದ್ದೇಶದಿಂದ ಈ ಬಜೆಟ್ ಮಂಡನೆಯಾಗಿದೆ. ಹಿಂದಿನ ಸರ್ಕಾರಗಳ ತಪ್ಪು ನೀತಿ, ಸಾಲದ ಹೊರೆ ಹಾಗೂ ಅತಿವೃಷ್ಟಿ ಅನಾವೃಷ್ಠಿಯಿಂದಾದ ಹೊಡೆತಗಳ ನಡುವೆಯೂ ಇಂತಹ ಉತ್ತಮ ಬಜೆಟ್ ಮಂಡಿಸಿದ ರೈತ ಬಂಧುಗೆ ಅಭಿನಂದನೆಗಳನ್ನು ಶಾಸಕರು ಸಲ್ಲಿಸಿದ್ದಾರೆ.


Spread the love