ಬಲ್ಮಠ – ಫಳ್ನೀರ್ ರಸ್ತೆ, ಪಣಂಬೂರು ಪೊಲೀಸ್ ಠಾಣೆ ರಸ್ತೆ: ಪಾರ್ಕಿಂಗ್ ನಿಷೇಧ

Pictogram of Prohibition for Parking
Spread the love

ಬಲ್ಮಠ – ಫಳ್ನೀರ್ ರಸ್ತೆ, ಪಣಂಬೂರು ಪೊಲೀಸ್ ಠಾಣೆ ರಸ್ತೆ: ಪಾರ್ಕಿಂಗ್ ನಿಷೇಧ

ಮಂಗಳೂರು: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಬೆಂದೂರು ವಾರ್ಡಿನ ಯುನಿಟಿ ಆಸ್ಪತ್ರೆಯಿಂದ ಬಲ್ಮಠ ರಸ್ತೆಗೆ ಸಂಪರ್ಕಿಸುವ ವಾಸ್ ಲೇನ್ ರಸ್ತೆಯನ್ನು ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಮಂಗಳೂರು ಮಹಾನಗರ ಪಾಲಿಕೆಯಿಂದ ಅಗಲೀಕರಣಗೊಳಿಸಿ ರಸ್ತೆ ಬದಿಗಳನ್ನು ಇಂಟರ್ಲಾಾಕ್ನಿಂೂದ ನಿರ್ಮಾಣ ಮಾಡಲಾಗಿರುತ್ತದೆ. ರಸ್ತೆಯು ಫಳ್ನೀರು ರಸ್ತೆ ಹಾಗೂ ಬಲ್ಮಠ ರಸ್ತೆಯನ್ನು ಸಂಪರ್ಕಿಸುವ ಪ್ರಮುಖ ಮುಖ್ಯ ರಸ್ತೆಯಾಗಿದ್ದು, ಈ ರಸ್ತೆಯಲ್ಲಿ ಪ್ರತಿ ದಿನ ಹೆಚ್ಚಿನ ಸಂಖ್ಯೆಯಲ್ಲಿ ಕಾರು ದ್ವಿಚಕ್ರ ಹಾಗೂ ಇತ್ಯಾದಿ ವಾಹನಗಳು ಸಂಚರಿಸುತ್ತಿರುವುದರಿಂದ ವಾಸ್ಲೇ್ನ್ ರಸ್ತೆಯು ಹೆಚ್ಚಿನ ವಾಹನ ದಟ್ಟಣೆಯಿಂದ ಕೂಡಿದ ರಸ್ತೆಯಾಗಿರುತ್ತದೆ. ಅಲ್ಲದೇ ಫಳ್ನೀರು ರಸ್ತೆಯಲ್ಲಿ ಯುನಿಟಿ, ಹೈಲ್ಯಾಂಡ್ ಆಸ್ಪತ್ರೆಗಳಿದ್ದು ಮತ್ತು ಬಲ್ಮಠ ರಸ್ತೆಯಲ್ಲಿ ಅನೇಕ ನಸಿರ್ಂಗ್ ಹೋಮ್ಗಲಳಿರುವುದರಿಂದ ತುರ್ತು ವಾಹನಗಳ ಹೆಚ್ಚಿನ ಸಂಚಾರ ಇರುತ್ತದೆ.

ವಾಸ್ಲೇ ನ್ ರಸ್ತೆಯ ಎರಡೂ ಬದಿ ಹೆಚ್ಚಿನ ವಸತಿ ಸಮುಚ್ಚಯಗಳಿದ್ದು, ರಸ್ತೆಯ ಪ್ರಾರಂಭದ ಫಳ್ನೀರು ರಸ್ತೆಯಲ್ಲಿ ಯುನಿಟಿ ಆಸ್ಪತ್ರೆ, ವಾಣಿಜ್ಯ ಕಟ್ಟಡಗಳು, ಅನೇಕ ವೈದ್ಯರ ಕ್ಲಿನಿಕ್ಗರಳಿದ್ದು ಇಲ್ಲಿಗೆ ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನು ರಸ್ತೆಯಲ್ಲಿ ವಾಹನ ಪಾರ್ಕ್ ಮಾಡುತ್ತಿದು, ಇದರ ಪರಿಣಾಮವಾಗಿ ಮುಖ್ಯ ರಸ್ತೆಯಾದ ಫಳ್ನೀರು ರಸ್ತೆ ಹಾಗೂ ಬಲ್ಮಠ ರಸ್ತೆಯಲ್ಲಿ ಕೂಡಾ ಹೆಚ್ಚಿನ ವಾಹನ ದಟ್ಟಣೆ ಉಂಟಾಗುತ್ತಿರುತ್ತದೆ. ವಾಸ್ಲೇಬನ್ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದಲೂ ದೂರುಗಳು ಬಂದಿವೆ.

ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ನಗರದ ಯುನಿಟಿ ಆಸ್ಪತ್ರೆಯಿಂದ ಬಲ್ಮಠ ರಸ್ತೆಗೆ ಸಂಪರ್ಕಿಸುವ ವಾಸ್ ಲೇನ್ ರಸ್ತೆಯಲ್ಲಿ ವಾಸ್ಲೇನನ್ ಒಂದನೇ ಅಡ್ಡ ರಸ್ತೆಯಿಂದ ಯುನಿಟಿ ಆಸ್ಪತ್ರೆಯವರೆಗೆ (ರಸ್ತೆಯ ಬಲಬದಿ-ಪಶ್ಚಿಮ ದಿಕ್ಕು) ವಾಹನಗಳ ನಿಲುಗಡೆಯನ್ನು ನಿಷೇಧಿಸಿ ”ನೋ ಪಾಕಿರ್ಂಗ್ ವಲಯ” ಎಂದು ಘೋಷಿಸಿ ಮಂಗಳೂರು ನಗರ ಪೆÇಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಪಣಂಬೂರು ಪೊಲೀಸ್ ಠಾಣೆ ರಸ್ತೆಯಲ್ಲಿ ಪಾರ್ಕಿಂಗ್ ನಿಷೇಧ

ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ 66 ರ ಸರ್ವಿಸ್ ರಸ್ತೆಯಿಂದ ಪಣಂಬೂರು ಪೊಲೀಸ್ ಠಾಣೆಯವರೆಗೆ ರಸ್ತೆಯಲ್ಲಿ ಪ್ರತಿ ದಿನ ಹೆಚ್ಚಿನ ಸಂಖ್ಯೆಯಲ್ಲಿ ಘನ ಸರಕು ವಾಹನಗಳು ಹಾಗೂ ಇತರ ವಾಹನಗಳು ಸಂಚರಿಸುತ್ತಿರುವುದರಿಂದ ಹೆಚ್ಚಾಗಿ ವಾಹನ ದಟ್ಟಣೆಯಿಂದ ಕೂಡಿದ ರಸ್ತೆಯಾಗಿರುತ್ತದೆ. ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ಬೃಹತ್ ಕೈಗಾರಿಕಾ ಕಂಪೆನಿಗಳಿದ್ದು, ಈ ಕಂಪೆನಿಗಳಿಗೆ ಸರಕು ವಸ್ತುಗಳನ್ನು ಸಾಗಾಟ ಮಾಡಲು ಬೃಹತ್ ಗಾತ್ರದ ಹೆಚ್ಚಿನ ಸಂಖ್ಯೆಯಲ್ಲಿ ಘನ ವಾಹನಗಳ ಓಡಾಟವಿರುತ್ತದೆ. ಈ ರಸ್ತೆಯ ಎರಡೂ ಬದಿಗಳಲ್ಲಿ ಎಲ್ಲಾ ರೀತಿಯ ವಾಹನಗಳನ್ನು ಪಾರ್ಕ್ ಮಾಡುವುದರಿಂದ ಪಾದಚಾರಿಗಳು ನಡೆದಾಡಲು ಹಾಗೂ ಇತರ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತಿದೆ.

ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಬೈಕಂಪಾಡಿ ಕೈಗಾರಿಕಾ ಪ್ರದೇಶದ ರಾಷ್ಟ್ರೀಯ ಹೆದ್ದಾರಿ 66 ರ ಸರ್ವಿಸ್ ರಸ್ತೆಯಿಂದ ಪಣಂಬೂರು ಪೊಲೀಸ್ ಠಾಣೆಯವರೆಗೆ ರಸ್ತೆಯಲ್ಲಿ ವಾಹನಗಳ ನಿಲುಗಡೆ ನಿಷೇಧಿಸಿ ”ನೋ ಪಾರ್ಕಿಂಗ್ ವಲಯ” ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಆದೇಶಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments