ಬಾಲ ಭಿಕ್ಷಾಟಣೆ ನಿರ್ಮೂಲನೆಗಾಗಿ ಜನಜಾಗೃತಿ ಅಭಿಯಾನ

Spread the love

ಬಾಲ ಭಿಕ್ಷಾಟಣೆ ನಿರ್ಮೂಲನೆಗಾಗಿ ಜನಜಾಗೃತಿ ಅಭಿಯಾನ

ಮಂಗಳೂರು: ಪ್ರತಿಯೊಂದು ವ್ಯಕಿಯು ಸಮಾಜದಲ್ಲಿ ಘನತೆ, ಗೌರವದಿಂದ ಬದುಕಬೇಕೆಂದು ನಮ್ಮ ಸಂವಿಧಾನದ ಆಶಯವಾಗಿದ್ದು, ಈ ನಿಟ್ಟಿನಲ್ಲಿ ಶಿಕ್ಷಣವು ವ್ಯಕ್ತಿಯ ಬದುಕಿನಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಆದರೆ ಅದೆಷ್ಟೋ ಮಕ್ಕಳು ತಮ್ಮ ಬಾಲ್ಯದಲ್ಲಿ ಶಿಕ್ಷಣದಿಂದ ವಂಚಿತರಾಗಿ ಭಿಕ್ಷಾಟಣೆಯ ಬಲೆಯಲ್ಲಿ ಬಿದ್ದು ನರಳಾಡುತ್ತಾ ಇದ್ದಾರೆ. ಪರಿಣಾಮವಾಗಿ ಮಕ್ಕಳ ಭವಿಷ್ಯದ ಮೇಲೆ ಗಂಭೀರವಾದ ಪರಿಣಾಮ ಭೀರುತ್ತಿದೆ. ಎಲ್ಲಾ ಮಕ್ಕಳಂತೆ ತಮ್ಮ ಮಕ್ಕಳು ಬಾಲ್ಯತನವನ್ನು ಅನುಭವಿಸಬೇಕಾದರೆ ನಾಗರಿಕ ಸಮಾಜ ಈ ಮಕ್ಕಳ ಭವಿಷ್ಯದತ್ತ ಚಿಂತಿಸಬೇಕಾಗಿದೆ ಹಾಗೂ ಭಿಕ್ಷಾಟಣೆಗೆ ಒಳಗಾಗಿರುವ ಮಕ್ಕಳಿಗೆ ಶಿಕ್ಷಣ ಸಿಗುವಂತಹ ವಾತಾವರಣ ನಿರ್ಮಿಸಬೇಕಾಗಿದೆ ಮತ್ತು ಮಕ್ಕಳನ್ನು ಭಿಕ್ಷಾಟಣೆಗೆ ನೂಕುವಂತಹ ವ್ಯವಸ್ಥೆಯ ಬಗ್ಗೆ ಪ್ರಶ್ನಿಸಬೇಕಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಬಿಕ್ಷಾಟಣೆಗೆ ಪ್ರೋತ್ಸಾಹ ನೀಡದೆ, ಭಿಕ್ಷಾಟಣೆ ಮುಕ್ತ ಸಮಾಜ ನಿರ್ಮಾಣವಾಗಬೇಕಾಗಿದೆ. ಇದಕ್ಕಾಗಿ ನಾಗರಿಕ ಸಮಾಜ ಎಚ್ಚೆತ್ತು ಅರಿವು ಮೂಡಿಸುವ ಸಲುವಾಗಿ ನಗರದಲ್ಲಿ ಭಿಕ್ಷಾಟಣೆಯನ್ನು ತೊಲಗಿಸುವ ನಿಟ್ಟಿನಲಿ ಮಂಗಳೂರು ನಗರದಾಧ್ಯಂತ ಜನಜಾಗೃತಿ ಅಭಿಯಾನವನ್ನು ಚೈಲ್ಡ್‍ಲೈನ್ ಮಂಗಳೂರು -1098,ಜಿಲ್ಲಾ ಮಕ್ಕಳ ರಕ್ಷಣಾ ಘಟಕ ದ.ಕ, ಬೆಸೆಂಟ್ ಮಹಿಳಾ ಕಾಲೇಜು ಮಂಗಳೂರು, ಮಕ್ಕಳ ವಿಶೇಷ ಪೊಲೀಸ್ ಘಟಕ ಮಂಗಳೂರು, ಸಂಚಾರ ಪೊಲೀಸ್ ಇಲಾಖೆ ಮಂಗಳೂರು ಮತ್ತು ಸಮಾಜ ಕಲ್ಯಾಣ ಇಲಾಖೆ ದ.ಕ ಇವರ ಸಹಯೋಗದಲ್ಲಿ ದಿನಾಂಕ:29/09/2016ರಂದು “ಬಾಲ ಭಿಕ್ಷಾಟಣೆ ನಿರ್ಮೂಲನೆಗಾಗಿ ಜನಜಾಗೃತಿ ಅಭಿಯಾನ” ಕಾರ್ಯಕ್ರಮವನ್ನು ಪೂರ್ವಾಹ್ನ 10.30 ರಿಂದ 11.30ರ ವರೆಗೆ ಹಮ್ಮಿಕೊಂಡಿದ್ದು ಅಭಿಯಾನದ ಉಧ್ಘಾಟಣೆಯನ್ನು ಮಂಗಳೂರು ಮಹಾನಗರ ಪಾಲಿಕೆಯ ಗಾಂಧೀ ಪ್ರತಿಮೆಯ ಎದುರುಗಡೆ ಮಾಡಲು ನಿರ್ಧರಿಸಲಾಗಿದೆ.

ಬೆಸೆಂಟ್ ಮಹಿಳಾ ಕಾಲೇಜು ಮಂಗಳೂರು ಇಲ್ಲಿಯ ಸುಮಾರು 600ಕ್ಕೂ ಹೆಚ್ಚಿನ ವಿಧ್ಯರ್ಥಿಗಳು ಈ ಅಭಿಯಾನದಲ್ಲಿ ಭಾಗವಹಿಸಲಿದ್ದು ಏಕಕಾಲದಲ್ಲಿ ನಗರದ ಸುಮಾರು 12ಕ್ಕೂ ಹೆಚ್ಚಿನ ಪ್ರಮುಖ ಟ್ರಾಫಿಕ್ ಸಿಗ್ನಲ್ ಮತ್ತು ಜನ ನಿಭಿಡ ಸ್ಥಳಗಳಲ್ಲಿ ಕರಪತ್ರ ಮತ್ತು ಪ್ಲಾ-ಕಾರ್ಡ್ ಹಿಡಿದುಕೊಂಡು ಬಾಲ ಭಿಕ್ಷಾಟನೆ ಕುರಿತು ಜನರಲ್ಲಿ ಜಾಗೃತಿಯನ್ನು ಮೂಡಿಸಲಿದ್ದಾರೆ. ಸಾರ್ವಜನಿಕರು ಈ ಅಭಿಯಾನದಲ್ಲಿ ಭಾಗವಹಿಸಿ ಮಕ್ಕಳನ್ನು ಭಿಕ್ಷಾಟಣೆ ಮುಕ್ತರನ್ನಾಗಿಸುವಲ್ಲಿ ಮತ್ತು ಭಿಕ್ಷಾಟಣೆ ಮುಕ್ತ ಸಮಾಜವನ್ನು ನಿರ್ಮಿಸುವಲ್ಲಿ ಕೈಜೋಡಿಸಿಬೇಕಾಗಿ ಈ ಮೂಲಕ ವಿನಂತಿಸಲಾಗಿದೆ.


Spread the love