ಬೆಂಗಳೂರಿನಿಂದ ಹೊರಟಿದ್ದ ಕೇರಳ ಸಾರಿಗೆ ಬಸ್‌ಗೆ ಕಂಟೈನರ್ ಡಿಕ್ಕಿ: 21 ಮಂದಿ ದುರ್ಮರಣ

Spread the love

ಬೆಂಗಳೂರಿನಿಂದ ಹೊರಟಿದ್ದ ಕೇರಳ ಸಾರಿಗೆ ಬಸ್‌ಗೆ ಕಂಟೈನರ್ ಡಿಕ್ಕಿ: 21 ಮಂದಿ ದುರ್ಮರಣ

ಚೆನ್ನೈ: ಬಸ್ ಹಾಗೂ ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಪರಿಣಾಮ ಅಪಘಾತದಲ್ಲಿ 21 ಮಂದಿ ದುರ್ಮರಣವನ್ನಪ್ಪಿರುವ ದಾರುಣ ಘಟನೆ ತಮಿಳುನಾಡಿನ ತಿರುಪುರ್ ಜಿಲ್ಲೆಯ ಅವಿನಾಶಿಯಲ್ಲಿ ನಡೆದಿದೆ.

ಕೇರಳ ರಾಜ್ಯಕ್ಕೆ ಸೇರಿದ ಸರ್ಕಾರಿ ವೋಲ್ವೋ ಬಸ್ ಬೆಂಗಳೂರಿನಿಂದ ತಿರುವನಂತಪುರಕ್ಕೆ ಹೊರಟಿತ್ತು. ಈ ವೇಳೆ ಕೊಯಮತ್ತೂರ್-ಸೇಲಂ ಹೆದ್ದಾರಿಯಲ್ಲಿ ಎದುರಿನಿಂದ ಬಂದಿರುವ ಟ್ರಕ್ ರಭಸದಿಂದ ಡಿಕ್ಕಿ ಹೊಡೆದಿದೆ. ಪರಿಣಾಮ 21 ಮಂದಿ ಸಾವನ್ನಪ್ಪಿದ್ದಾರೆಂದು ವರದಿಗಳು ತಿಳಿಸಿವೆ.

ಬಸ್ ನಲ್ಲಿ ಒಟ್ಟು 48 ಮಂದಿ ಪ್ರಯಾಣಿಕರಿದ್ದರು. ಚಾಲಕ, ನಿರ್ವಾಹಕ ಸೇರಿ ಒಟ್ಟು 21 ಮಂದಿ ಸಾವನ್ನಪ್ಪಿದ್ದು, ಉಳಿದ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಂದು ಬೆಳಗಿನ ಜಾವ 3.15ರ ಸುಮಾರಿಗೆ ದುರ್ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಬಸ್ ನಲ್ಲಿ ಒಟ್ಟು 48 ಮಂದಿ ಪ್ರಯಾಣಿಕರಿದ್ದರು. ಸಾಕಷ್ಟು ಪ್ರಯಾಮಿಕರು ಆನ್ ಲೈನ್ ಮೂಲಕ ಪಾಲಕ್ಕಾಡ್ ಮತ್ತು ಎರ್ನಾಕುಲಂಗೆ ಟಿಕೆಟ್ ಬುಕ್ ಮಾಡಿದ್ದರು ಎಂದು ಕೇರಳ ರಾಜ್ಯ ಸಾರಿಗೆ ಸಚಿವ ಎಕೆ.ಸಸೀಂದ್ರನ್ ಹೇಳಿದ್ದಾರೆ.

ನಿಯಮ ಉಲ್ಲಂಘಿಸಿ ಲಾರಿ ತಪ್ಪಾದ ಹಾದಿಯಲ್ಲಿ ಚಲಿಸಿದ್ದರಿಂದ ಅಪಘಾತ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ. ಘಟನೆ ಸಂಭವಿಸುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿರುವ ಪೊಲೀಸರು ಗಾಯಾಳುಗಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

21ಮೃತದೇಹಗಳ ಪೈಕಿ 4 ಮಂದಿಯನ್ನು ಗುರ್ತಿಸಲಾಗಿದ್ದು, ಮೃತದೇಹಗಳನ್ನು ಅವಿನಾಶಿ ಸರ್ಕಾರಿ ಆಸ್ಪತ್ರೆಯಲ್ಲಿರಿಸಲಾಗಿದೆ ಎಂದು ವರದಿಗಳು ತಿಳಿಸಿವೆ.


Spread the love