ಬೆಂಗಳೂರು ಗಲಭೆ – ಎ.ಬಿವಿಪಿ ಖಂಡನೆ

Spread the love

ಬೆಂಗಳೂರು ಗಲಭೆ – ಎ.ಬಿವಿಪಿ ಖಂಡನೆ

ಮಂಗಳೂರು: ಬೆಂಗಳೂರಿನ ಕಾವಲ್ ಭೈರಸಂದ್ರದಲ್ಲಿ ನಡೆದ ಗಲಭೆಯು ಸಮಾಜಘಾತುಕ ಶಕ್ತಿಗಳಿಂದ ಪೂರ್ವನಿಯೋಜಿತವಾಗಿ ನಡೆದ ಷಡ್ಯಂತ್ರಕ್ಕೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಖಂಡಿಸಿದೆ

ಶಾಂತಿಯುತವಾಗಿರುವ ಕರ್ನಾಟಕ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕದಡುವ ಪ್ರಯತ್ನ ಸುನಿಯೋಜಿತವಾಗಿ ನಡೆಯುತ್ತಿರುವುದನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಟುವಾಗಿ ಖಂಡಿಸುತ್ತದೆ. ಸಮಾಜ ಘಾತುಕ ಶಕ್ತಿಗಳಿಗೆ ತಮ್ಮ ಪುಂಡಾಟದ ಮೂಲಕ ಮನಸೋ ಇಚ್ಛೆ ವರ್ತಿಸಿ ಪೆÇಲೀಸರ ಮೇಲೆ ಮತ್ತು ಪ್ರಜಾತಂತ್ರ ವ್ಯವಸ್ಥೆಯ ಆಧಾರ ಸ್ತಂಭವಾಗಿರುವ ಮಾಧ್ಯಮ ಪ್ರತಿನಿಧಿಗಳ ಮೇಲೆ ಕಲ್ಲುತೂರಾಟ, ಹಲ್ಲೆ ನಡೆಸಿ ಸಾರ್ವಜನಿಕ ಆಸ್ತಿಯನ್ನು ಹಾನಿ ಮಾಡಿರುವುದು ಖಂಡನೀಯ ರಾಜ್ಯದಲ್ಲಿ ಈ ರೀತಿಯಾಗಿ ಶಾಂತಿ ಕದಡುವ ಪ್ರಯತ್ನ ನಡೆಯುತ್ತಿರುವಾಗ ಶಾಂತಿ ಸುವ್ಯವಸ್ಥೆ ಕಾಪಾಡಬೇಕಾದ ಗೃಹ ಇಲಾಖೆ ಮತ್ತು ಗುಪ್ತಚರ ಇಲಾಖೆಗಳ ವಿಫಲತೆ ಎದ್ದು ಕಾಣುತ್ತಿದೆ.

ಘಟನೆ ನಡೆಸಿದ ಪುಂಡರ ಹಿಂದೆ ಯಾರಿದ್ದಾರೆ ಅನ್ನೋದನ್ನ ಸರಕಾರ ತಕ್ಷಣವೇ ತನಿಖೆ ಮಾಡಬೇಕು ಮತ್ತು ಘಟನೆಯ ಕುರಿತು ಸಿಸಿ ಕ್ಯಾಮರಾದಲ್ಲಿ ದಾಖಲಾಗಿರುವ ಚಿತ್ರಗಳನ್ನು ಸಂಗ್ರಹಿಸಿ ಪುಂಡಾಟಿಕೆಯಲ್ಲಿ ಮುಂಚೂಣಿಯಲ್ಲಿದ್ದವರಿಂದ ಪ್ರಾಥಮಿಕ ಹಂತದ ಮಾಹಿತಿ ಪಡೆದು ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಡಿಸಲು ಪ್ರಯತ್ನ ಮಾಡಿದವರಿಗೆ ಕಠಿಣವಾದ ಶಿಕ್ಷೆಗೆ ಒಳಪಡಿಸಬೇಕು. ಉತ್ತರ ಪ್ರದೇಶದಲ್ಲಿ ಸಾರ್ವಜನಿಕರ ಆಸ್ತಿಪಾಸ್ತಿಗಳನ್ನು ಹಾನಿಮಾಡಿದವರೆ ಅದರ ಒಟ್ಟು ಖರ್ಚನ್ನು ಹಾನಿ ಮಾಡಿದವರೆ ತುಂಬಿಕೊಡಬೇಕೆಂಬ ನಿಯಮವಿದೆ. ಇಂತಹ ಕಠೋರವಾದ ನಿಯಮವನ್ನು ಕರ್ನಾಟಕ ರಾಜ್ಯದಲ್ಲೂ ಜಾರಿಗೆ ತಂದು ನಿನ್ನೆಯ ಘಟನೆಯಲ್ಲಿ ಹಾನಿಯಾದ ಒಟ್ಟು ವೆಚ್ಚವನ್ನು ಸರಕಾರ ಆ ಪುಂಡರಿಂದಲೇ ವಸೂಲಿ ಮಾಡಬೇಕು.

ಶಾಂತಿಯುತವಾದ ರಾಜ್ಯದಲ್ಲಿ ಇದನ್ನು ಸಹಿಸದ ಕೆಲ ಸಮಾಜಘಾತಕ ಶಕ್ತಿಗಳು ಈ ಸಂದರ್ಭವನ್ನು ಉಪಯೋಗಿಸಿಕೊಂಡು ಸಮಾಜ ಘಾತುಕ ಕೃತ್ಯ ಎಸಗಿದ್ದಾರೆ.ಈ ಘಟನೆಯಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಭಾಗಿಯಾದ ಎಲ್ಲರನ್ನು ತನಿಖೆಗೆ ಒಳಪಡಿಸಬೇಕು.ಯಾರೊಬ್ಬರೂ ಕೂಡ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಂಡು ಹೋಗಬಾರದಂತೆ ಸರಕಾರ ಎಚ್ಚರವಹಿಸಿಕೊಳ್ಳಬೇಕು. ರಾಜ್ಯದ ರಾಜಧಾನಿಯಲ್ಲಿ ಇಂತಹ ಭಯಾನಕ ಘಟನೆ ನಡೆದಿದೆ ಎಂದರೆ ಇದರಲ್ಲಿ ಪೆÇಲೀಸ್ ಮತ್ತು ಸರಕಾರ ವಿಫಲತೆಯೂ ಕೂಡ ಎದ್ದು ಕಾಣುತ್ತಿದೆ. ಈ ಘಟನೆಯಿಂದ ಸಾರ್ವಜನಿಕರಲ್ಲಿ ಭಯದ ವಾತಾವರಣ ಉಂಟಾಗಿದೆ. ಮುಂದೆ ಇಂತಹ ಘಟನೆ ಮಾಡುವವರಿಗೆ ಎಚ್ಚರಿಕೆಯ ಗಂಟೆ ಆಗುವ ರೀತಿಯಲ್ಲಿ ಸರಕಾರ ತನಿಖೆ ನಡೆಸಿಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿರುವ ಈ ಘಟನೆಯಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಭಾಗಿಯಾದ ಎಲ್ಲರನ್ನು ತನಿಖೆಗೆ ಒಳಪಡಿಸಬೇಕು ಮತ್ತು ಯಾವುದೇ ಪಕ್ಷಗಳು ಗಿoಣe ಃಚಿಟಿಞ ಗಾಗಿ ಮೃದುಧೋರಣೆ ತೋರಿ ತನಿಖೆಯನ್ನು ಹತ್ತಿಕ್ಕಲು ಪ್ರಯತ್ನಿಸಬಾರದು.

ಸರಕಾರ ಎಚ್ಚರಿಕೆಯಿಂದ ತಪ್ಪಿತಸ್ಥರ ವಿರುದ್ಧ ಪೆÇಲೀಸರು ಕಠಿಣ ಕ್ರಮಕೈಗೊಳ್ಳುಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಜ್ಯ ಸರಕಾರಕ್ಕೆ ಆಗ್ರಹಿಸುತ್ತದೆ.


Spread the love