ಬೆಳಪು ವಿಜ್ಞಾನ ಕೇಂದ್ರಕ್ಕೆ 50 ಕೋಟಿ ರೂ ಬಿಡುಗಡೆ- ಸಚಿವ ಟಿ.ಬಿ. ಜಯಚಂಧ್ರ

Spread the love

ಉಡುಪಿ: ಬೆಳಪುವಿನಲ್ಲಿ ನಿರ್ಮಾಣವಾಗುತ್ತಿರುವ ಅತ್ಯಾಧುನಿಕ ವಿಜ್ಞಾನ ಕೇಂದ್ರಕ್ಕೆ 50 ಕೋಟಿ ರೂ ಗಳನ್ನು ಈ ವರ್ಷದಲ್ಲಿ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ರಾಜ್ಯದ ಉನ್ನತ ಶಿಕ್ಷಣ ಮತ್ತು ಕಾನೂನು ಸಚಿವ ಟಿ.ಬಿ. ಜಯಚಂದ್ರ ತಿಳಿಸಿದ್ದಾರೆ.
ಅವರು ಶುಕ್ರವಾರ ಬೆಳಪುಗೆ ಭೇಟಿ ನೀಡಿ, ವಿಜ್ಞಾನ ಕೇಂದ್ರದ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದರು.

image006tbjayachandra-belapu-visit-20160415 image005tbjayachandra-belapu-visit-20160415 image004tbjayachandra-belapu-visit-20160415 image003tbjayachandra-belapu-visit-20160415 image002tbjayachandra-belapu-visit-20160415

ಬೆಳಪುವಿನಲ್ಲಿ ಸಂಶೋಧನೆ ಉದ್ದೇಶದಿಂದ ನಿರ್ಮಾಣವಾಗುತ್ತಿರುವ ವಿಜ್ಞಾನ ಕೇಂದ್ರವು ಅಂತಾರಾಷ್ಟ್ರೀಯ ಮಟ್ಟದಲ್ಲಿದ್ದು, 140 ಕೋಟಿ ರೂ ಗಳ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ, ಇದಕ್ಕಾಗಿ ಈಗಾಗಲೇ 20 ಎಕರೆ ಸ್ಥಳವನ್ನು ಗುರುತಿಸಲಾಗಿದ್ದು, ಸ್ಥಳದ ಅಭಾವ ಕಂಡುಬರುತ್ತಿರುವುದರಿಂದ ಹೆಚ್ಚುವರಿಯಾಗಿ 14 ಎಕರೆ ಸ್ಥಳವನ್ನು ನೀಡಲಾಗುವುದು, ಮುಂದಿನ 2 ವರ್ಷದಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದೆ ಎಂದು ಅವರು ಹೇಳಿದರು.
ಈ ವಿಜ್ಞಾನ ಕೇಂದ್ರದಲ್ಲಿ ಪಶ್ಚಿಮ ಘಟ್ಟ ಹಾಗೂ ಇಲ್ಲಿನ ಜೀವ ವೈವಿಧ್ಯ ವಾತಾವರಣದ ವೈಪರೀತ್ಯ ಸೇರಿದಂತೆ ಹಲವು ವಿಷಯಗಳ ಕುರಿತು ವೈಜ್ಞಾನಿಕ ಅಧ್ಯಯನ ನಡೆಸಲಾಗುವುದು ಎಂದು ಹೇಳಿದರು.
ಈ ಸಾಲಿನ ಬಜೆಟ್ ನಲ್ಲಿ 22 ಕೌಟುಂಬಿಕ ಕೋರ್ಟ್‍ಗಳನ್ನು ಸ್ಥಾಪನೆ ಮಾಡಲು ನಿರ್ಧರಿಸಲಾಗಿದ್ದು, ಉಡುಪಿಯಲ್ಲಿ 600 ಕ್ಕೂ ಹೆಚ್ಚು ಕೌಟುಂಬಿಕ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಗೆ ಇರುವುದರಿಂದ ಉಡುಪಿಯಲ್ಲಿಯೂ ಸಹ ಒಂದು ಕೌಟುಂಬಿಕ ಕೋರ್ಟ್ ಪ್ರಾರಂಭಿಸಲಾಗುವುದು ಎಂದು ಸಚಿವರು ಹೇಳಿದರು.
ಮಾಹಿತಿ, ಸಂವಹನ ಮತ್ತು ತಂತ್ರಜ್ಞಾನ (ಐ.ಸಿ.ಟಿ) ಯೋಜನೆಯ ಅಳವಡಿಸಿಕೊಳ್ಳುವುದರ ಮೂಲಕ ವಿದ್ಯಾರ್ಥಿಗಳ ಅಂಕಪಟ್ಟಿಗಳಲ್ಲಿನ ದೋಷ, ದೋಷ ಪೂರಿತ ಫಲಿತಾಂಶ ಪ್ರಕಟಗೊಳ್ಳುವುದು ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳನ್ನು ತಪ್ಪಿಸಬಹುದಾಗಿದ್ದು, ಈ ಯೋಜನೆ ಅಳವಡಿಸಲಾಗುವುದು ಎಂದು ಸಚಿವರು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ, ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಮಂಗಳೂರು ವಿಶ್ವ ವಿದ್ಯಾಲಯದ ಕುಲಪತಿ ಭೈರಪ್ಪ, ರಿಜಿಸ್ಟ್ರಾರ್ ಕೆಂಪರಾಜು, ಹಣಕಾಸು ಅಧಿಕಾರಿ ರೇಗೋ, ಇಂಜಿನಿಯರ್ ಮಹದೇವ ಸ್ವಾಮಿ, ವಿಶೇಷ ಅಧಿಕಾರಿ ಬಿ.ಎಸ್ ಶೇಖರ್, ಸಿಂಡಿಕೇಟ್ ಸದಸ್ಯ ಪ್ರಸನ್ನ ಕುಮಾರ್ ರೈ, ಮೋಹನಚಂದ್ರ ನಂಬಿಯಾರ್, ಮಾಜಿ ಸಿಂಡಿಕೇಟ್ ಸದಸ್ಯ ಪಿ,ವಿ ಮೋಹನ್, ಬೆಳಪು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶೋಭಾ ಭಟ್, ಪಿಡಿಓ ಅಪ್ಪು ಸೇರಿಗಾರ್ , ಜಿ.ಪಂ. ಮಾಜಿ ಅಧ್ಯಕ್ಷೆ ಸರಸು ಬಂಗೇರಾ ಮತ್ತಿತರರು ಉಪಸ್ಥಿತರಿದ್ದರು.


Spread the love