ಬೆಳ್ತಂಗಡಿ ಚಿನ್ನಾಭರಣ ಕಳ್ಳತನ ; ಬಂಧನ

Spread the love

ಬೆಳ್ತಂಗಡಿ ಚಿನ್ನಾಭರಣ ಕಳ್ಳತನ ; ಬಂಧನ

ಬೆಳ್ತಂಗಡಿ: ಚಿನ್ನಾಭರಣ ಕಳ್ಳತನ ಪ್ರಕರಣವೊಂದನ್ನು ಭೇಧಿಸುವಲ್ಲಿ ಧರ್ಮಸ್ಥಳ ಠಾಣಾ ಪೋಲಿಸರು ಚಿನ್ನಾಭರಣ ಸಮೇತ ಬಂಧಿಸಿದ್ದಾರೆ, ಬಂಧಿತನನ್ನು ಬಂಟ್ವಾಳ ತಾಲೂಕಿನ ಕಾವಳಕಟ್ಟೆ ಸಾರಬಳಿ ಮನೆಯ ನಿವಾಸಿ ಬಾಲಕೃಷ್ಣ ಕುಲಾಲ್ (33) ಎಂದು ಗುರುತಿಸಲಾಗಿದೆ.

ಮಾರ್ಚ್ 21 ರಂದು ಶ್ರೀ ಓಬಯ್ಯ ನಾಯ್ಕ(51), ತಂದೆ: ದಿ. ಅಂಗಾರ ನಾಯ್ಕ, ವಾಸ: ವಿದ್ಯಾನಗರ, ನಿಡಿಗಲ್‌, ಕಲ್ಮಂಜ ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರು ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದು, ಮಾರ್ಚ್ 14 ರಿಂದ 20 ರ ನಡುವೆ ಫಿರ್ಯಾದಿದಾರರು ಹಾಗೂ ಅವರ ಪತ್ನಿ ಕುಶಲ ಎಂಬವರು ಕೆಲಸಕ್ಕೆ ಹೋಗಿದ್ದ ಸಂದರ್ಭ ಮನೆಯಲ್ಲಿ ಫಿರ್ಯದಿದಾರರ ಪ್ರಾಯಸ್ಥ ತಾಯಿ ಮಾತ್ರ ಮನೆಯಲ್ಲಿದ್ದು, ಆ ಸಂದರ್ಭದಲ್ಲಿ ಯಾರೋ ಕಳ್ಳರು ಮನೆಗೆ ನುಗ್ಗಿ ಮನೆಯ ಕಪಾಟಿನಲ್ಲಿದ್ದ ಸುಮಾರು 6 ರಿಂದ 8 ಪವನ್‌ ನಷ್ಟು ಚಿನ್ನಾಭರಣಗಳನ್ನು ಕಳವು ಮಾಡಿರುವುದಾಗಿ ಎಂಬಿತ್ಯಾದಿಯಾಗಿದ್ದು, ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿತ್ತು.

ಈ ಬಗ್ಗೆ ತನಿಖೆಯನ್ನು ಕೈಗೆತ್ತಿಕೊಂಡ ಬೆಳ್ತಂಗಡಿ ಪೊಲೀಸ್‌ ವೃತ್ತ ನಿರೀಕ್ಷಕ ನಾಗೇಶ್‌ ಕದ್ರಿಯವರ ತಂಡವು ಆರೋಪಿಯನ್ನು ಉಜಿರೆಯಲ್ಲಿ ದಸ್ತಗಿರಿ ಮಾಡಿ ಕಳ್ಳತನ ಮಾಡಿದ ಎಲ್ಲಾ ಚಿನ್ನಾಭರಣಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಸ್ವಾಧೀನಪಡಿಸಿಕೊಂಡ ಚಿನ್ನಾಭರಣಗಳ ಮೌಲ್ಯ ರೂ 1,50,000/- ಆಗಬಹುದು.

ಈ ಪ್ರಕರಣವನ್ನು ಪತ್ತೆ ಹಚ್ಚುವರೇ ದ.ಕ ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ಭೂಷಣ್‌ ಗುಲಾಬ್‌ರಾವ್‌ ಬೊರಸೆ, ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾದ ಡಾ| ವೇದಮೂರ್ತಿ ರವರ ನಿರ್ದೇಶನದಂತೆ ಬಂಟ್ವಾಳ ಪೊಲೀಸ್‌ ಉಪಾಧೀಕ್ಷಕರಾದ ರವೀಶ್‌ ಸಿ.ಆರ್‌ ರವರ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕರಾದ ನಾಗೇಶ್‌ ಕದ್ರಿರವರ ನೇತ್ರತ್ವದಲ್ಲಿ ಧರ್ಮಸ್ಥಳ ಠಾಣಾ ಪಿ.ಎಸ್‌.ಐ ರಾಮ ನಾಯ್ಕ, ಬೆಳ್ತಂಗಡಿ ಠಾಣಾ ಪಿ.ಎಸ್‌.ಐ ರವಿ ಬಿ.ಎಸ್‌, ವೇಣೂರು ಠಾಣಾ ಏ.ಎಸ್‌.ಐ ದೇವಪ್ಪ, ಪ್ರವೀಣ್‌ ಎಂ, ವೆಂಕಟೇಶ್‌, ಬೆನ್ನಿಚ್ಚನ್‌, ಪ್ರಮೋಧ್‌, ವಿಜು ಹಾಗೂ ಪೌಲೋಸ್‌ ರವರು ಸಹಕರಿಸಿರುತ್ತಾರೆ.


Spread the love