ಬೈಂದೂರು: “ಕೈ” ಬಿಟ್ಟು “ಕಮಲ” ಹಿಡಿದ ಪ್ರಭಾವಿ ನಾಯಕ!

Spread the love

ಬೈಂದೂರು: “ಕೈ” ಬಿಟ್ಟು “ಕಮಲ” ಹಿಡಿದ ಪ್ರಭಾವಿ ನಾಯಕ!

ಕುಂದಾಪುರ: ಬೈಂದೂರು ರಾಜಕೀಯದಲ್ಲಿ ಅಚ್ಚರಿಯ ಬೆಳವಣಿಗೆಯೊಂದು ನಡೆದಿದ್ದು, ಸಾಕಷ್ಟು ವರ್ಷಗಳಿಂದ ಕಾಂಗ್ರೆಸ್ನ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ಹರ್ಕೂರು ಮಂಜಯ್ಯ ಶೆಟ್ಟಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ಬುಧವಾರ ಬೆಳಿಗ್ಗೆ ನೆಂಪುವಿನಲ್ಲಿರುವ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿಯವರ ನಿವಾಸದಲ್ಲಿ ಶಾಸಕರು  ಹರ್ಕೂರು ಮಂಜಯ್ಯ ಶೆಟ್ಟಿ ಯವರಿಗೆ ಬಿಜೆಪಿ ಬಾವುಟ ನೀಡುವುದರ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು.

ಸಾಕಷ್ಟು ವರ್ಷಗಳಿಂದಲೂ ಆಲೂರು, ಹರ್ಕೂರು ಭಾಗಗಳಲ್ಲಿ ಕಾಂಗ್ರೆಸ್ ನಾಯಕರಾಗಿ ಎಲ್ಲಾ ಚುನಾವಣೆಗಳಲ್ಲೂ ನಾಯಕತ್ವ ವಹಿಸಿಕೊಂಡು ಪಕ್ಷದ ಏಳಿಗೆಗೆ ಕಾರಣರಾಗಿದ್ದ ಹಕರ್ೂರು ಮಂಜಯ್ಯ ಶೆಟ್ಟಿಯವರ ಈ ನಡೆ ಬೈಂದೂರು ಕಾಂಗ್ರೆಸ್ ಪಾಳಯದಲ್ಲಿ ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ. ಕಾಂಗ್ರೆಸ್ನಿಂದ ಒಂದು ಬಾರಿ ಜಿ.ಪಂ ಹಾಗೂ ಒಂದು ಬಾರಿ ತಾ.ಪಂ ಸದಸ್ಯರಾಗಿ, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ, ಕನರ್ಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸದಸ್ಯರಾಗಿಯೂ ಹಕರ್ೂರು ಮಂಜಯ್ಯ ಶೆಟ್ಟಿ ಕೆಲಸ ನಿರ್ವಹಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಹರ್ಕೂರು ಮಂಜಯ್ಯ ಶೆಟ್ಟಿ, ಇತ್ತೀಚೆಗೆ ನಡೆದ ಕೆಲವು ರಾಜಕೀಯ ವಿದ್ಯಮಾನಗಳಿಂದ ಬೇಸತ್ತು ಕಾಂಗ್ರೆಸ್ ತೊರೆದಿದ್ದೇನೆ. ಭಾರತೀಯ ಜನತಾ ಪಾಟರ್ಿಯಲ್ಲಿರುವವರಷ್ಟು ಪ್ರಮಾಣಿಕರು ಕಾಂಗ್ರೆಸ್ನಲ್ಲಿಲ್ಲ. ಇದು ನನ್ನ ಹಿಂದಿನ ಜಿ.ಪಂ ಚುನಾವಣೆಯಲ್ಲಿ ಅರಿತುಕೊಂಡಿದ್ದೇನೆ. ನನ್ನನ್ನು ಚುನಾವಣೆಯಲ್ಲಿ ಸೋಲಿಸಲೆಂದೆ ಕಳೆದ ಬಾರಿಯ ಜಿ.ಪಂ ಚುನಾವಣೆಯಲ್ಲಿ ನನ್ನ ವಿರುದ್ದ ಬಿಜೆಪಿಯಿಂದ ಸ್ಪಧರ್ಿಸಿದ್ದ ಬಾಬು ಹಗ್ಡೆಯವರಿಗೆ ಮತ ನೀಡಲು ಕಾಂಗ್ರೆಸ್ ಪಕ್ಷದವರೇ ಪ್ರಚಾರ ನಡೆಸಿ ನನ್ನನ್ನು ಸೋಲಿಸಿದ್ದಾರೆ. ಹೀಗಾಗಿ ನನ್ನ ಗೆಲುವಿಗೆ ಕಾಂಗ್ರೆಸ್ ಪಕ್ಷದವರೇ ಅಡ್ಡಿಯಾದರು ಎಂದ ಅವರು, ಕಾಂಗ್ರೆಸ್ನಲ್ಲಿರುವವರು ಮತಗಳನ್ನು ಮಾರಿಕೊಳ್ಳುತ್ತಾರೆ ಎಂದು ಕಾಂಗ್ರೆಸ್ ವಿರುದ್ದ ಅಸಮಧಾನ ಹೊರಹಾಕಿದರು.

ಬಿಎಂ ಸುಕುಮಾರ್ ಶೆಟ್ಟಿಯವರು ಶಾಸಕರಾಗುವ ಮೊದಲೂ ನನಗೆ ಬಿಜೆಪಿಗೆ ಬರುವಂತೆ ಒತ್ತಾಯ ಮಾಡುತ್ತಿದ್ದರು. ಆದರೆ ಆ ಸಂದರ್ಭದಲ್ಲಿ ನಾನು ಬಿಜೆಪಿ ಸೇರಲಿಲ್ಲ. ಬಿಜೆಪಿಗೆ ನನ್ನ ಅಗತ್ಯ ಖಂಡಿತವಾಗಿಯೂ ಇಲ್ಲ. ಶಾಸಕರಿದ್ದಾರೆ, ಸಕರ್ಾರವಿದೆ ನಾನು ಪಕ್ಷಕ್ಕೆ ಬಾರದಿದ್ದರೂ ನಷ್ಟವಿಲ್ಲ. ಆದರೆ ನನ್ನನ್ನು ಪ್ರೀತಿಯಿಂದ ಮತ್ತೆ ಮತ್ತೆ ಕರೆದಿದ್ದಾರೆ. ಮೂವತ್ತು ವರ್ಷಗಳಿಂದಲೂ ನನ್ನೊಂದಿಗೆ ಪಕ್ಷಕ್ಕಾಗಿ ದುಡಿದಿರುವ ನನ್ನ ಕಾರ್ಯಕರ್ತರ ಅಭಿಪ್ರಾಯವನ್ನು ಕ್ರೋಢೀಕರಿಸಿ ಅವರ ಅಭಿಪ್ರಾಯದಂತೆ ನಾನು ಬಿಜೆಪಿ ತತ್ವ, ಸಿದ್ದಾಂತಗಳನ್ನು ಒಪ್ಪಿಕೊಂಡು ಬಿಜೆಪಿ ಸೇರ್ಪಡೆಗೊಂಡಿದ್ದೇನೆ ಎಂದರು.

ಈ ಬಗ್ಗೆ ಮಾತನಾಡಿದ ಶಾಸಕ ಬಿಎಂ ಸುಕುಮಾರ ಶೆಟ್ಟಿ, ಹರ್ಕೂರು ಮಂಜಯ್ಯ ಶೆಟ್ಟಿಯವರು ಸಾಮಾನ್ಯ ಜನರೊಂದಿಗೆ ಬೆರೆಯುವ ನಾಯಕ. ಸಾಮಾನ್ಯ ಜನರ ನೋವುಗಳನ್ನು ಆಲಿಸುವ ಅವರ ಕಣ್ಣೀರನ್ನು ಒರೆಸುವ ಹಕರ್ೂರು ಮಂಜಯ್ಯ ಶೆಟ್ಟಿಯವರಂತಹ ನಾಯಕರ ಸಹಕಾರ ಪಕ್ಷದ ಮುನ್ನಡೆಗೆ ಬೇಕಾಗುತ್ತದೆ. ಯಾವುದೇ ಬೇಡಿಕೆ ಇಟ್ಟು ಮಂಜಯ್ಯ ಶೆಟ್ಟಿಯವರು ಪಕ್ಷಕ್ಕೆ ಬಂದಿಲ್ಲ. ಮುಂದಿನ ದಿನಗಳಲ್ಲಿ ಅವರ ಘನತೆಗೆ ತಕ್ಕುದಾದ ಸೂಕ್ತ ಸ್ಥಾನಮಾನವನ್ನು ಪಕ್ಷ ನೀಡುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ನಿಂದ ಉಳ್ಳೂರು-74 ಪಂಚಾಯಿತಿ ಸದಸ್ಯ ಪ್ರಸಾದ್, ಮುಖಂಡರಾದ ಕೆಂಚನೂರು ಸುಬ್ಬಣ್ಣ ಶೆಟ್ಟಿ, ಸುಧೀರ್, ನವೀನ್ ಆಚಾರ್ಯ ಮೊದಲಾದವರು ಬಿಜೆಪಿಗೆ ಸೇರ್ಪಡೆಗೊಂಡರು. ಈ ವೇಳೆಯಲ್ಲಿ ಜಿ.ಪಂ ಸದಸ್ಯರಾದ ಶಂಕರ್ ಪೂಜಾರಿ, ರೋಹಿತ್ ಶೆಟ್ಟಿ, ಶೋಭಾ ಜಿ ಪುತ್ರನ್ ಬೈಂದೂರು, ತಾ.ಪಂ ಸದಸ್ಯ ಉಮೇಶ್ ಕಲ್ಗದ್ದೆ, ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಕಾರ್ಯದಶರ್ಿ ಪ್ರಕಾಶ್ ಜೆಡ್ಡು ಮೊದಲಾದವರು ಉಪಸ್ಥಿತರಿದ್ದರು.


Spread the love