ಬೈಂದೂರು| ದನ ಕಳ್ಳತನ ಆರೋಪ: ಇಬ್ಬರು ಆರೋಪಿಗಳ ಬಂಧನ
ಬೈಂದೂರು: ದನ ಕಳ್ಳತನ ಮಾಡಿ ಸಾಗಾಟ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಬೈಂದೂರು ಪೋಲಿಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಸಾಸ್ತಾನ ನಿವಾಸಿ ಮೊಹಮ್ಮದ್ ಕೈಪ್ ಮತ್ತು ಉಚ್ಚಿಲ ಕಾಪು ನಿವಾಸಿ ಮೊಹಮ್ಮದ್ ಸುಹೇಲ್ ಖಾದರ್ ಎಂದು ಗುರುತಿಸಲಾಗಿದೆ.
ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪದೇ ಪದೇ ದನ ಕಳ್ಳತನ ಪ್ರಕರಣಗಳು ವರದಿಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಆರೋಪಿಗಳ ಪತ್ತೆಯ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಹರಿರಾಮ್ ಶಂಕರ ರವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸುಧಾಕರ ನಾಯ್ಕ್ ಹಾಗೂ ಪರಮೇಶ್ವರ ಹೆಗಡೆ ಉಡುಪಿ ಜಿಲ್ಲೆ ಮತ್ತು ಹೆಚ್ ಡಿ ಕುಲಕರ್ಣಿ ಉಪಾಧೀಕ್ಷಕರು ಕುಂದಾಪುರ ಉಪ ವಿಭಾಗರವರ ನಿರ್ದೇಶನದಂತೆ ಸವೀತ್ರತೇಜ್ ಪೊಲೀಸ್ ವೃತ್ತ ನಿರೀಕ್ಷಕರು ಬೈಂದೂರು ರವರ ನೇತೃತ್ವದಲ್ಲಿ ದನ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ಮತ್ತು ಪತ್ತೆಗೆ 3 ತಂಡಗಳಾಗಿ ನೇಮಕ ಮಾಡಲಾಗಿತ್ತು.
ತಂಡದ ನೇತೃತ್ವವನ್ನು ತಿಮ್ಮೇಶ್ ಬಿ ಎನ್, ಪಿ.ಎಸ್.ಐ., ನವೀನ ಬೋರಕರ ಪಿ.ಎಸ್.ಐ., ಬೈಂದೂರು ಠಾಣೆ , ವಿನಯ ಪಿ.ಎಸ್.ಐ., ಕೊಲ್ಲೂರು ಠಾಣೆ , ಬಸವರಾಜ್ ಪಿ.ಎಸ್.ಐ. ಗಂಗೋಳ್ಳಿ ಠಾಣೆ ಮತ್ತು ಸಿಬ್ಬಂದಿಯವರಾದ ನಾಗೇಂದ್ರ, ಮೋಹನ, ಸುರೇಶ್, ಚೇತನ್, ಜಯರಾಮ, ಸತೀಶ್, ಚಿದಾನಂದ, ಮಾಳಪ್ಪ ದೇಸಾಯಿ, ಶ್ರೀಧರ ಪಾಟೀಲ್, ಪರಯ್ಯ ಮಠಪತಿರವರ ತಂಡ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ದನಕಳ್ಳತನಕ್ಕೆ ಉಪಯೋಗಿಸಿದ ಮೂರು ಕಾರುಗಳನ್ನು ವಶಕ್ಕೆ ಪಡೆದಿದ್ದು, ಕಾರಿನಲ್ಲಿ ಸಾಗಾಟ ಮಾಡಿದ 4 ದನಗಳನ್ನು ರಕ್ಷಿಸಿ ಗೋಶಾಲೆ ಬಿಡಲಾಗಿದೆ.