ಬ್ರಹ್ಮಾವರ: ನಕಲಿ ಕಾರು ಮಾರಾಟ ಜಾಲದ ಆರೋಪಿಗಳ ಬಂಧನ – ರೂ. 39 ಲಕ್ಷ ಮೌಲ್ಯದ ಕಾರುಗಳ ವಶ

Spread the love

ಬ್ರಹ್ಮಾವರ: ನಕಲಿ ಕಾರು ಮಾರಾಟ ಜಾಲದ ಆರೋಪಿಗಳ ಬಂಧನ – ರೂ. 39 ಲಕ್ಷ ಮೌಲ್ಯದ ಕಾರುಗಳ ವಶ

ಉಡುಪಿ : ಲೀಸ್‌ಗೆ ಕೊಟ್ಟ ಕಾರುಗಳನ್ನು ಮತ್ತು OLXನಲ್ಲಿ ಮಾರಾಟಕ್ಕೆಇದೆ ಎಂದು ಪ್ರಕಟವಾಗುವ ಕಾರುಗಳನ್ನು, ಕಾರು ನಮಗೆ ಬೇಕು ಎಂದು ಸುಳ್ಳು ಹೇಳಿ ಮುಂಗಡ ಹಣ ಕೊಟ್ಟು ಖರೀದಿಸಿ ಅವರನ್ನು ನಂಬಿಸಲು ಕರಾರು ಪತ್ರ ಮಾಡಿ ಕಾರುಗಳನ್ನು ನಂತರ ದೂರದ ಊರಿಗೆ ತೆಗೆದುಕೊಂಡು ಹೋಗಿ ಕಾರು ನಮ್ಮದೇ ಎಂದು ಆರ್.ಸಿ.ಯಲ್ಲಿ ಹೆಸರು ಬದಲಾವಣೆ ಆಗಲು ಬಾಕಿ ಎಂದು ಹೇಳಿ ನಂಬಿಸಿ ಮಾರಾಟ ಮಾಡಿ ಕಾರು ಕೊಟ್ಟು ಅಡ್ವಾನ್ಸ್ ಹಣ ತೆಗೆದುಕೊಂಡು ಮೋಸ ಮಾಡುತ್ತಿದ್ದ ವ್ಯಕ್ತಿಗಳನ್ನು ಬ್ರಹ್ಮಾವರ ಠಾಣಾ ಪೊಲೀಸರು ಬಂಧಿಸಿದ್ದಾರೆ.

 ಬ್ರಹ್ಮಾವರ ತಾಲೂಕು ಕರ್ಜೆ ನಿವಾಸಿ ಸುನೀಲ್ (31) ನೀಡಿದ ದೂರಿನಂತೆ ಜುಲೈ 24 ರಂದು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,  ಪ್ರಕರಣದ ಆರೋಪಿತರಾದ 1) ಇಬ್ರಾಹಿಂ ಮಂಗಳೂರು 2) ಅಬ್ದುಲ್ಲ @ ಅಬ್ಬಾಸ್ (33 ವರ್ಷ) ತಂದೆ ದಿವಂಗತ ಮೊಯಿದ್ದೀನ್ ವಾಸ ಕಲ್ಲಕಟ್ಟೆ, ಪಡ್ಪು ಬಜಾಲ್ ಮಂಗಳೂರು ಹಾಲಿ ವಾಸ ಯಯ್ಯಾ ಕಲ್ಲಾಪು ಪಟ್ಲರವರ ಬಾಡಿಗೆ ಮನೆ, ತಲಪಾಡಿ, ತೊಕ್ಕೊಟ್ಟು, ಮಂಗಳೂರು 3) ಮಹಮ್ಮದ್ ಸಫಾನ್ (22 ವರ್ಷ) ತಂದೆ ಉಮ್ಮರ್ ಮುಸ್ಲಿಯಾರ್ ವಾಸ ಮೈರಾ ಕೇಪು ಗ್ರಾಮ, ವಿಟ್ಲ ಬಂಟ್ವಾಳ ತಾಲೂಕುರವರ ವಿರುದ್ಧ ಪ್ರಕರಣ ದಾಖಲಾಗಿರುತ್ತದೆ. ಆರೋಪಿಗಳ ಪೈಕಿ ಎರಡನೇ ಆರೋಪಿ ಅಬ್ದುಲ್ಲ @ ಅಬ್ಬಾಸ್ ಎಂಬಾತನು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣದ ಹಾಗೂ ಬಜ್ಪೆಯಲ್ಲಿ ಕೊಲೆಗೆ ಯತ್ನ ಪ್ರಕರಣದ ಆರೋಪಿಯಾಗಿರುತ್ತಾನೆ.

ಪ್ರಕರಣದ ತನಿಖೆಯ ಬಗ್ಗೆ ಪೊಲೀಸ್ ಅಧೀಕ್ಷಕರಾದ   ನಿಶಾ ಜೇಮ್ಸ್ ಹಾಗೂ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ  ಕುಮಾರ ಚಂದ್ರರವರ ನಿರ್ದೇಶನದಂತೆ ಹಾಗೂ ಉಡುಪಿ ಜಿಲ್ಲಾ ಪೊಲೀಸ್ ಉಪಾಧೀಕ್ಷಕರಾದ  ಜಯಶಂಕರ್ ಟಿ.ಆರ್. ಮತ್ತು ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕರಾದ   ಶ್ರೀಕಾಂತ ಕೆ. ರವರ ಮಾರ್ಗದರ್ಶನದಲ್ಲಿ ಬ್ರಹ್ಮಾವರ ಪೊಲೀಸ್ ಠಾಣಾ ಪಿ.ಎಸ್.ಐ ರಾಘವೇಂದ್ರ ಸಿ.ರವರು ಪ್ರಕರಣದ 2ನೇ ಆರೋಪಿ ಅಬ್ದುಲ್ಲ @ ಅಬ್ಬಾಸ್ ಹಾಗೂ 3ನೇ ಆರೋಪಿ ಮಹಮ್ಮದ್ ಸಫಾನ್‌ರವರನ್ನು ದಸ್ತಗಿರಿ ಮಾಡಿದ್ದಾರೆ.

ಬಂಧಿತರಿಂದ  ಬಳ್ಳಾರಿಯಲ್ಲಿ ಶಿವಕುಮಾರ ಎಂಬವರಿಗೆ ಮಾರಾಟ ಮಾಡಿರುವ ವಾಹನಗಳಾದ ರೂ 5 ಲಕ್ಷ ಮೌಲ್ಯದ ಸ್ಕಾರ್ಪಿಯೋ ಕಾರು, ರೂ  5 ಲಕ್ಷ ಮೌಲ್ಯದ ಮಹೀಂದ್ರ XUV 500 ಕಾರು, ರೂ 4 ಲಕ್ಷ ಮೌಲ್ಯದ ಸ್ಪೋರ್ಟಸ್ ಕಾರು, ರೂ 7 ಲಕ್ಷ ಮೌಲ್ಯದ ಮಹೀಂದ್ರ TUV300 ಕಾರು, ರೂ  8 ಲಕ್ಷ ಮೌಲ್ಯದ ಬ್ರೀಜಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ವಾಹನಗಳ  ಒಟ್ಟು ಮೌಲ್ಯ ರೂಪಾಯಿ 39,00,000/- ರೂಪಾಯಿ ಆಗಬಹುದು.

 ರಾಘವೇಂದ್ರ ಸಿ., ಪೊಲೀಸ್ ಉಪನಿರೀಕ್ಷಕರು, ಬ್ರಹ್ಮಾವರ ಪೊಲೀಸ್ ಠಾಣೆ ರವರ ನೇತೃತ್ವದ  ಈ ವಿಶೇಷ ಕಾರ್ಯಚರಣೆ ತಂಡದಲ್ಲಿ ಎ.ಎಸ್.ಐ. ಸಾಂತಪ್ಪ, ಹೆಚ್.ಸಿ. ವೆಂಕಟರಮಣ ದೇವಾಡಿಗ, ಹೆಚ್.ಸಿ. ರಾಘವೇಂದ್ರ ಕಾರ್ಕಡ, ಹೆಚ್.ಸಿ. ಪ್ರವೀಣ ಶೆಟ್ಟಿಗಾರ, ಪಿಸಿ ದಿಲೀಪ ಕುಮಾರ, ಹೆಚ್.ಸಿ.ಪ್ರದೀಪ ನಾಯಕ್ ಬ್ರಹ್ಮಾವರ ವೃತ್ತ ಕಚೇರಿರವರು ಪಾಲ್ಗೊಂಡಿರುತ್ತಾರೆ. ಜಿಲ್ಲಾ ಪೊಲೀಸ್ ಕಚೇರಿಯ ಸಿಬ್ಬಂದಿ   ಶಿವಾನಂದ ಸಿಡಿಆರ್ ವಿಭಾಗರವರು ಸಹಕರಿಸಿರುತ್ತಾರೆ.


Spread the love