ಭಟ್ಕಳದಲ್ಲಿ ಹೆಚ್ಚಿದ ಸಮುದ್ರ ಕೊರೆತ; ತೀರ ವಾಸಿಗಳಲ್ಲಿ ಆತಂಕ

Spread the love

ಭಟ್ಕಳ: ಕಳೆದ 3-4 ದಿನಗಳಿಂದ ತೀರವಾಸಿಗಳನ್ನು ಕಂಗೆಡಿಸಿದ್ದ ಕಡಲ ಆರ್ಭಟ ಮತ್ತಷ್ಟು ಹೆಚ್ಚಿದೆ. ಬೃಹದಾಕಾರದ ಬಂಡೆಕಲ್ಲುಗಳು ಸಮುದ್ರದಾಳಕ್ಕೆ ಜಾರಿ ಹೋಗುತ್ತಿದ್ದು, ನೀರು ಜನವಸತಿ ಪ್ರದೇಶಗಳತ್ತ ನುಗ್ಗುತ್ತಿರುವುದು ಕಂಡು ಬಂದಿದೆ.

23june5 23june6

 ತಾಲೂಕಿನ ಹೆಬಳೆ ಗ್ರಾಮ ಪಂಚಾಯತ ವ್ಯಾಪ್ತಿಯ ಹೊನ್ನೆಗದ್ದೆ, ಹೆರ್ತಾರ್‍ಗಳಲ್ಲಿ ನೆಲ ಕೊಚ್ಚಿ ಹೋಗುತ್ತಿದ್ದು, ತಟದಲ್ಲಿ ಬೆಳೆದು ನಿಂತಿರುವ ತೆಂಗಿನ ಮರಗಳಿಗೆ ಆಪತ್ತು ಬಂದೊದಗಿದೆ. ರಸ್ತೆಯೂ ಕಡಲ ಅಬ್ಬರಕ್ಕೆ ಕುಸಿಯುತ್ತಿದೆ.

ತಹಸೀಲ್ದಾರ ವಿ.ಎನ್.ಬಾಡ್ಕರ್ ಸಿಬ್ಬಂದಿಗಳೊಡನೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಾಲೂಕಿನ ತಲಗೋಡ, ಕರಿಕಲ್ ಭಾಗಗಳಲ್ಲಿ ಸಮುದ್ರ ಕೊರೆತ ಅಲ್ಲಿಯ ಜನರಿಗೆ ಸಂಕಟವನ್ನು ತಂದಿಟ್ಟಿದೆ. ನೀರು ಒಂದೇ ಸವನೆ ತಡೆಗೋಡೆಯನ್ನು ದಾಟಿ ಮೇಲಕ್ಕೆ ಹರಿಯಲಾರಂಭಿಸಿದೆ. ಮಂಗಳವಾರ ಬಂದರು ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ತಡೆಗೋಡೆ ಭದ್ರಗೊಳಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಮಂಗಳವಾರ ಕೆಲ ಕಾಲ ಮಳೆ ಭಟ್ಕಳದ ಜನರಿಗೆ ವಿಶ್ರಾಂತಿಯನ್ನು ನೀಡಿದ್ದು, ತಾಲೂಕಿನ ಬಹುತೇಕ ಎಲ್ಲ ಭಾಗಗಳಲ್ಲಿ ನಾಟಿ ಕಾರ್ಯ ಪ್ರಗತಿಯಲ್ಲಿದೆ.


Spread the love