ಮಂಗಳೂರಿಗೆ ಉಪಗ್ರಹ ಆಧಾರಿತ ಆಟೋರಿಕ್ಷಾ ಸೇವೆ

Spread the love

ಮಂಗಳೂರಿಗೆ ಉಪಗ್ರಹ ಆಧಾರಿತ ಆಟೋರಿಕ್ಷಾ ಸೇವೆ

ಮಂಗಳೂರು – ಸ್ಮಾರ್ಟ್ ಸಿಟಿಯಾಗಿ ಘೋಷಿತ ಮಂಗಳೂರು ನಗರದ ಉಪಗ್ರಹ ಆಧಾರಿತ ಆಟೋ ರಿಕ್ಷಾ ಸೇವೆಗೆ ಸಜ್ಜಾಗಿದ್ದು, ಪ್ರಯಾಣಿಕರ ಸುರಕ್ಷೆ ಮತ್ತು ಆಟೋ ಚಾಲಕರ ಆರ್ಥಿಕ ಸುಭದ್ರತೆಯ ಉದ್ದೇಶಗಳನ್ನು ಹೊಂದಿದೆ.

ನಗರದ ಪ್ರತಿಷ್ಠಿತ ಕಾಫೆರ್Çೀರೇಶನ್ ಬ್ಯಾಂಕ್, ಭಾರತ ಬಾಹ್ಯಕಾಶ ಸಂಶೋಧನಾ ಸಂಸ್ಥೆ ಮತ್ತು ಕರ್ನಾಟಕ ಸಾರಿಗೆ ಇಲಾಖೆಯ ಸಹಯೋಗದೊಂದಿಗೆ ಬೆಂಗಳೂರು ಮೂಲದ 50 ದೇಶಗಳಲ್ಲಿ ಸೆವೆ ಸಲ್ಲಿಸುತ್ತಿರುವ ಟೆಲಿಮೆಟಿಕ್ಸ್ ಫಾರ್ ಯು ಮಾಹಿತಿ ತಂತ್ರಜ್ಞಾನ ಕಂಪೆನಿ ದೇಶದಲ್ಲೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಈ ಯೋಜನೆ ಕಾರ್ಯಗತ ಮಾಡುತ್ತಿದೆ ಎಂದು ಟಿ4ಯು ಕಂಪೆನಿ ಮುಖ್ಯಸ್ಥ ಪ್ರತಾಪ್ ಹೆಗ್ಡೆ ಪ್ರಕಟಿಸಿದ್ದಾರೆ.

satalite-auto-service-mangalore-00 satalite-auto-service-mangalore-01 satalite-auto-service-mangalore-02

ಅವರು ಇಂದು ನಗರದ ಮಣ್ಣಗುಡ್ಡೆ ಸಮಾಜಭವನದಲ್ಲಿ ಕುಡ್ಲ ಸೌಹಾರ್ದ ಸಹಕಾರಿ ನಿಯಮಿತದ ಆಶ್ರಯದಲ್ಲಿ ನಡೆದ ಆಟೋರಿಕ್ಷಾಗಳಿಗೆ ಜಿಪಿಎಸ್ ಮತ್ತು ಜಾಹಿರಾತು ಫಲಕ ಅಳವಡಿಕೆ ಸಾರ್ವಜನಿಕ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರಯೋಗ ಹಂತದಲ್ಲಿರುವ ನಾವಿಕ್ ತಂತ್ರಜ್ಞಾನವನ್ನು ಮಂಗಳೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ಉಪಯೋಗಿಸಿ ಆಟೋ ಕಮ್ಯೂನಿಟಿ ಎಂಪವರ್ ಮೆಂಟ್ (ಎಸಿಇ) ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ. ಈಗಾಗಲೇ ತ್ರಿಪುರ ರಾಜ್ಯದ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್, ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು ಈ ಯೋಜನೆ ಅನುಷ್ಠಾನ ಮಾಡಲು ಆಹ್ವಾನ ನೀಡಿದ್ದು, ರಾಜ್ಯದ ಹದಿನೈದು ನಗರಗಳಲ್ಲಿ ಜಾರಿ ಮಾಡುವಂತೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಮನವಿ ಮಾಡಿದ್ದಾರೆ ಎಂದು ಪ್ರತಾಪ್ ಹೆಗ್ಡೆ ಹೇಳಿದರು.

ಎಸಿಇ ಪ್ರಕಾರ ಕುಡ್ಲ ಸೌಹಾರ್ದ ಸಹಕಾರಿ ನಿಯಮಿತದ ಆಶ್ರಯದಲ್ಲಿ ಆಟೋ ಪ್ರಯಾಣಿಕರ ಸೌಕರ್ಯಕ್ಕೆ ಕಾಲ್ ಸೆಂಟರ್ ಆರಂಭಿಸಲಾಗುವುದು, ಆಟೋಗಳನ್ನು ಕರೆಯಲು ಕಾಲ್ ಸೆಂಟರ್ ಮತ್ತು ಆಪ್ಸ್ ಉಪಯೋಗಿಸಬಹುದಾಗಿದೆ. ರಿಕ್ಷಾ ಚಾಲಕರಿಗೆ ಹೆಚ್ಚುವರಿ ಆದಾಯ ನೀಡುವ ನಿಟ್ಟಿನಲ್ಲಿ ರಿಕ್ಷಾ ಹಿಂಭಾಗ ಜಾಹಿರಾತು ಫಲಕ ಅಳವಡಿಸಲಾಗುವುದು. ಇದರಿಂದ, ಮಹಿಳಾ ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತೆ ದೊರೆಯಲಿದೆ ಎಂದು ಅವರು ವಿವರಿಸಿದರು.

ಮಂಗಳೂರು ಸ್ಮಾರ್ಟ್ ಸಿಟಿ ಆಗುತ್ತಿರುವ ಸಂದರ್ಭದಲ್ಲಿ ಆಟೋ ರಿಕ್ಷಾ ಚಾಲಕರು ತಂತ್ರಜ್ಞಾನ ಮೂಲಕ ಪ್ರಗತಿ ಹೊಂದುವುದು ಸ್ವಾಗತಾರ್ಹವಾಗಿದ್ದು, ಜಿಪಿಎಸ್ ಅಳವಡಿಸಿದ ಆಟೋ ರಿಕ್ಷಾಗಳಲ್ಲೇ ಮಹಿಳೆಯರು ಪ್ರಯಾಣಿಸುವಂತೆ ಸಲಹೆ ನೀಡುವುದಾಗಿ ಹೇಳಿದ ಡೀಡ್ಸ್ ಸಂಸ್ಥೆ ನಿರ್ದೇಶಕಿ ಮಾರ್ಲಿನ್ ಮಾರ್ಟಿಸ್, ಹೊಸ ಪ್ರಯತ್ನವನ್ನು ಪ್ರಶಂಸಿಸಿದರು.
ಮಂಗಳೂರು ನಗರದಲ್ಲಿ ಆಟೋರಿಕ್ಷಾ ಚಾಲಕರಿಂದ ಅಹಿತಕರ ಘಟನೆ ನಡೆಯದಿದ್ದರೂ, ತಂತ್ರಜ್ಞಾನದಲ್ಲಿ ಮಾತ್ರ ನಂಬಿಕೆ ಇರುವ ಇಂದಿನ ದಿನಗಳಲ್ಲಿ ಆಟೋರಿಕ್ಷಾ ಚಾಲಕರು ಕೂಡ ಇಂತಹ ಯಂತ್ರಗಳನ್ನು ಉಪಯೋಗಿಸಲಿ. ಇದರಿಂದ ಮಹಾನಗರದ ಜನತೆಗೆ ಪ್ರಯೋಜನ ಆಗಲಿದೆ ಎಂದು ಸಾಮಾಜಿಕ ಕಾರ್ಯಕರ್ತೆ ವಿದ್ಯಾ ದಿನಕರ್ ಹೇಳಿದರು.

ಕುಡ್ಲ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ವಿಎಸ್ ಪ್ರಕಾಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಆಟೋ ರಿಕ್ಷಾ ಚಾಲಕರ ಸಂಘದ ಕಾರ್ಯಾಧ್ಯಕ್ಷ ಅಶೋಕ್ ಕೊಂಚಾಡಿ ಪ್ರಸ್ತಾವಿಕವಾಗಿ ಮಾತನಾಡಿದರು. ನೇತ್ರಾವತಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಗೀತಾ ಕಲ್ಯಾಣಪುರ್,ಮಂಗಳಾದೇವಿ ಲಯನ್ಸ್ ಕ್ಲಬ್ ಅಧ್ಯಕ್ಷ ದೇವದಾಸ್, ದ.ಕ.ಆಟೋ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಅಲ್ಫೋನ್ಸ್ ಡಿ ಸೋಜ ಮತ್ತಿತರರು ಉಪಸ್ಥಿತರಿದ್ದರು. ನಿರ್ದೇಶಕ ಸುಭಾಷ್ ಸ್ವಾಗತಿಸಿ ಸುರೇಶ್ ಶೆಟ್ಟಿ ವಂದಿಸಿದರು.


Spread the love