ಮಂಗಳೂರಿನಲ್ಲಿ ಟಿಐಎಸ್‌ಎ ಸ್ವ ಸಹಾಯ ಸಂಘದ ಆರಂಭ ಜುಲೈ 23ರಂದು

Spread the love

ಮಂಗಳೂರಿನಲ್ಲಿ ಟಿಐಎಸ್‌ಎ ಸ್ವ ಸಹಾಯ ಸಂಘದ ಆರಂಭ ಜುಲೈ 23ರಂದು

ಮಂಗಳೂರು: ದಿ ಇಂಡಿಯನ್‌ ಸ್ಟಾಮರಿಂಗ್‌ ಅಸೋಸಿಯೇಷನ್‌ (ಟಿಐಎಸ್‌ಎ) ಮಂಗಳೂರಿನಲ್ಲಿ ತನ್ನ ಸ್ವ ಸಹಾಯ ಸಂಘವನ್ನು 2017 ರ ಜುಲೈ 23ರಂದು ಆರಂಭಿಸಲಿದೆ. ಇದರ ಉದ್ಘಾಟನಾ ಕಾರ್ಯಕ್ರಮ ಮತ್ತು ಮೊದಲ ಸಭೆ ಅಂದು ಬೆಳಿಗ್ಗೆ 9ರಿಂದ 3 ಗಂಟೆಯವರೆಗೆ ಮಂಗಳೂರಿನ ಜೆಪ್ಪುವಿನಲ್ಲಿ ಇರುವ ಫಾತಿಮಾ ರಿಟ್ರೀಟ್‌ ಹೌಸ್‌ನಲ್ಲಿ (ರೋಶನಿ ನಿಲಯ ಸ್ಕೂಲ್ ಆಫ್‌ ಸೋಷಿಯಲ್‌ ವರ್ಕ್‌ ಸಮೀಪ) ನಡೆಯಲಿದೆ.

ಮಾತನಾಡುವಾಗ ಉಗ್ಗಿನ (ಸ್ಟಾಮರಿಂಗ್‌) ಸಮಸ್ಯೆ ಇರುವವರ ಭಾವನೆಗಳನ್ನು ಹಂಚಿಕೊಳ್ಳುವುದು, ಸಮಸ್ಯೆ ನಿವಾರಣೆಗೆ ವಿವಿಧ ತಂತ್ರಗಳನ್ನು ಅಭ್ಯಾಸ ಮಾಡುವುದು ಮತ್ತು ಆತ್ಮವಿಶ್ವಾಸ ಗಳಿಸಿಕೊಳ್ಳಲು ನೆರವಾಗುವ ನಿಟ್ಟಿನಲ್ಲಿ ಈ ಸ್ವಸಹಾಯ ಸಂಘ ಜನ್ಮ ತಾಳಿದೆ. ಆಗಾಗ ನಡೆಯುವ ಮುಖಾಮುಖಿ ಸಭೆಗಳಲ್ಲಿ ಇಂಥ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲಾಗುತ್ತದೆ. ಮಂಗಳೂರಿನ ಈ ಸ್ವಸಹಾಯ ಸಂಘವು ಟಿಐಎಸ್‌ಎದ ತತ್ವಗಳನ್ನು ಪಾಲಿಸುತ್ತಿರುವ ಉಗ್ಗಿನ ಸಮಸ್ಯೆ ಇರುವ ಸಮುದಾಯದ ಏಳಿಗೆಗೆ ಪೂರಕವಾಗಲಿದೆ.

ಹಲವಾರು ಶೈಕ್ಷಣಿಕ ಸಂಸ್ಥೆಗಳನ್ನು ಮತ್ತು ಅಭಿವೃದ್ಧಿ ಹೊಂದುವ ತುಡಿತ ಇರುವ ವಿದ್ಯಾರ್ಥಿಗಳನ್ನು ಮಂಗಳೂರಿನಲ್ಲಿ ಕಾಣಬಹುದು. ಈ ಪೈಕಿ ವಿದ್ಯಾರ್ಥಿಗಳಲ್ಲಿ, ಪದವೀಧರರಲ್ಲಿ ಇರುವ ಉಗ್ಗಿನ ಸಮಸ್ಯೆ ನಿವಾರಿಸಲು ಕಾರ್ಯಾಗಾರ ಹಮ್ಮಿಕೊಳ್ಳುವುದು ಮತ್ತು ಅವರಲ್ಲಿ ವಿಶ್ವಾಸ ಮೂಡಿಸುವ ಕಾರ್ಯವನ್ನು ಈ ಸ್ವ ಸಹಾಯ ಸಂಘ ಮಾಡಲಿದೆ.

ನಿಮ್ಮ ಹಾಜರಿಯನ್ನು ಖಾತರಿ ಪಡಿಸಲು ಮತ್ತು ಮಾಹಿತಿಗೆ ಟಿಐಎಸ್‌ಯ ಮಂಗಳೂರು ಸ್ವಸಹಾಯ ಸಂಘದ ಸಂಯೋಜಕ ಬಿನು ಕೆ.ಜಿ. ಮೊಬೈಲ್‌ 9739866947. Email: binukottoor@gmail.com ಸಂಪರ್ಕಿಸಿ.


Spread the love