ಮಂಗಳೂರಿನ ಗುರುನಗರದಲ್ಲಿ ಹಿಂದೂ ಧರ್ಮಜಾಗೃತಿ ಸಭೆ ಸಂಪನ್ನ

Spread the love

ಮಂಗಳೂರಿನ ಗುರುನಗರದಲ್ಲಿ ಹಿಂದೂಧರ್ಮಜಾಗೃತಿ ಸಭೆ ಸಂಪನ್ನ

ಮಂಗಳೂರು  : ಹಿಂದೂ ಜನಜಾಗೃತಿ ಸಮಿತಿ ಹಾಗೂ ಸಮಸ್ತ ಹಿಂದೂ ಧರ್ಮಪ್ರೇಮಿಗಳ ವತಿಯಿಂದ ಮಂಗಳೂರಿನ ಬಿಲ್ಲವರ ಸಮುದಾಯ ಭವನ, ಗುರುನಗರದಲ್ಲಿ ಹಿಂದೂಧರ್ಮಜಾಗೃತಿ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯ ಉದ್ಘಾಟನೆಯನ್ನು ಹಿಂದುತ್ವವಾದಿಯಾದ  ಮಧುಸೂಧನ್‍ಅಯ್ಯರ್ ಮಾಡಿದರು.ಈ ವೇಳೆ ವ್ಯಾಸಪೀಠದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಶ್ರೀ ವಿವೇಕ್ ಪೈ, ಸನಾತನ ಸಂಸ್ಥೆಯ ಸೌ ಲಕ್ಷ್ಮೀ ಪೈ ಉಪಸ್ಥಿತರಿದ್ದರು. ಹಿಂದೂಜನಜಾಗೃತಿ ಸಮಿತಿಯ  ಸುಧಾಕರಆಚಾರ್ಯಶಂಖನಾದ ಮೊಳಗಿಸಿದರು.

ಹಿಂದೂ ರಾಷ್ಟ್ರದ ಸ್ಥಾಪನೆಯೇ ಅಂತಿಮಗುರಿ-  ವಿವೇಕ್ ಪೈ ಹಿಂದೂಜನಜಾಗೃತಿ ಸಮಿತಿ.

ತ್ರೇತಾಯುಗದಲ್ಲಿ ಶ್ರೀರಾಮಚಂದ್ರ ಕೇವಲ ವಾನರರ ಮಾಧ್ಯಮದಿಂದ ಧರ್ಮದ ರಕ್ಷಣೆಯನ್ನು ಮಾಡಿದರು, ದ್ವಾಪರಯುಗದಲ್ಲಿ ಭಗವಾನ್ ಶ್ರೀ ಕೃಷ್ಣನು ಪಾಂಡವರ ಮಾಧ್ಯಮದಿಂದಧರ್ಮಸಂಸ್ಥಾಪನೆಯನ್ನು ಮಾಡಿದನು, ಛತ್ರಪತಿ ಶಿವಾಜಿ ಮಹಾರಾಜರುತಮ್ಮ ಗುರುಗಳಾದ ಸಮರ್ಥರಾಮದಾಸ ಸ್ವಾಮಿಗಳ ಮಾರ್ಗದರ್ಶನದಲ್ಲಿ ಮಾವಳೆಯರ ಮಾಧ್ಯಮದಿಂದ ಹಿಂದವೀ ಸ್ವರಾಜ್ಯದ ಸ್ಥಾಪನೆಯನ್ನು ಮಾಡಿದರು, ಅದೇರೀತಿ ನಾವು ಗುರುಗಳ ಮಾರ್ಗದರ್ಶನದಲ್ಲಿ ಹಿಂದೂರಾಷ್ಟ್ರ ಸ್ಥಾಪನೆ ಮಾಡಲು ಸಿಧ್ಧರಾಗಬೇಕಾಗಿದೆ. ಕೇವಲ ಹಿಂದೂ ಧರ್ಮದಲ್ಲಿ ಮಾತ್ರ ಮೋಕ್ಷದತನಕದಉಲ್ಲೇಖಇದೆ.ಆದರೆ ಇತರ ಮತ-ಪಂಥದಲ್ಲಿ ಕೇವಲ ಸ್ವರ್ಗದತನಕದ ಮಾತ್ರಉಲ್ಲೇಖಇದೆಆದ್ದರಿಂದಅತ್ಯಂತ ಶ್ರೇಷ್ಠವಾದ ಹಿಂದೂಧರ್ಮದ ಮಾರ್ಗದರ್ಶನಕ್ಕನುಸಾರವಾಗಿ ಸಾಧನೆ ಮಾಡಬೇಕಿದೆ.

ಇಡೀ ವಿಶ್ವದಲ್ಲಿದೇವರಕೋಣೆ, ಮಾತೆ, ಪುಣ್ಯಭೂಮಿ, ವಿಶ್ವಗುರುಎಂದು ಕರೆಸಿಕೊಳ್ಳುವಂತಹ ಅರ್ಹತೆಯಿರುವ ಶ್ರೇಷ್ಠವಾದದೇಶಅದು ಕೇವಲ ನಮ್ಮ ಭಾರತ ಮಾತ್ರ, ಆದರೆ ಹಿಂದೂಧರ್ಮದ ಮೇಲೆ ನಿರಂತರವಾಗಿ ಧರ್ಮದ್ರೋಹಿಗಳಿಂದ ಆಘಾತಗಳಾಗುತ್ತಿದೆ, ವಿಶ್ವದಲ್ಲಿಕ್ರೈಸ್ತರಿಗಾಗಿ 152 ರಾಷ್ಟ್ರಗಳಿದೆ, ಮುಸಲ್ಮಾನರಿಗೆ 52 ರಾಷ್ಟ್ರಗಳಿವೆ, ಇಷ್ಟು ಮಾತ್ರವಲ್ಲ ಬೌದ್ಧರಿಗಾಗಿ 12 ರಾಷ್ಟ್ರಗಳಿವೆ, ಕೇವಲ 64 ಲಕ್ಷ ಸ್ವಾಭಿಮಾನಿ ಯಹೂದಿಗಳಿಗೆ ಒಂದು ಸ್ವತಂತ್ರಇಸ್ರೈಲ್‍ರಾಷ್ಟ್ರವಿದೆ, ಆದರೆ ನೂರುಕೋಟಿ ಹಿಂದೂಗಳಿಗೆ ಪೃಥ್ವಿಯ ಮೇಲೆ ಒಂದೇಒಂದು‘ಹಿಂದೂರಾಷ್ಟ್ರ’ವಿಲ್ಲ.

ಸೆಕ್ಯುಲರ್ ವ್ಯವಸ್ಥೆಯಿಂದಾಗಿ ಹಿಂದೂಗಳಿಗೆ ಆಡಳಿತ ವ್ಯವಸ್ಥೆಯಲ್ಲಿ ವಂಚನೆಯಾಗುತ್ತಿದೆ.ದೇಶದ ಕಾನೂನು, ರಕ್ಷಣಾ, ಶಿಕ್ಷಣಕ್ಷೇತ್ರ ಹೀಗೆ ಎಲ್ಲಾಕ್ಷೇತ್ರದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ನಾವು ಈ ಸಾಮಾಜಿಕ ದುಷ್ಟಪ್ರವೃತ್ತಿಗಳ ವಿರುದ್ಧ ಕಾನೂನು ಹೋರಾಟ ಮಾಡಬೇಕಿದೆ.

ದೇವಸ್ಥಾನಗಳನ್ನು ಸರಕಾರೀಕರಣ ಮಾಡಿದೇವಸ್ಥಾನದಲ್ಲಿ ಸಂಗ್ರಹವಾದ ಹಣವನ್ನು ಹಜ್‍ಯಾತ್ರೆಗೆ ನೀಡಲಾಗುತ್ತದೆ. ಆದರೆ ಹಿಂದೂಗಳ ಅಮರನಾಥಯಾತ್ರೆಗೆ, ಶಬರಿಮಲೆಯಾತ್ರೆಗೆಯಾವುದೇಅನುದಾನ ನೀಡುತ್ತಿಲ್ಲ, ಬದಲಾಗಿ ಹೆಚ್ಚುವರಿ ಸುಂಕ ವಿಧಿಸಲಾಗುತ್ತದೆ.ಈ ಸ್ಥಿತಿಯನ್ನು ಬದಲಾಯಿಸಲು ಹಿಂದೂರಾಷ್ಟ್ರದ ಸ್ಥಾಪನೆ ಮಾಡದೇ ಬೇರೆ ಪರ್ಯಾಯವಿಲ್ಲ.

ಧರ್ಮದರಕ್ಷಣೆಗಾಗಿ ಸಂಘಟಿತರಾಗುವುದುಅವಶ್ಯಕತೆಯಿದೆ –  ಮಧುಸೂಧನ್‍ಅಯ್ಯರ್, ಹಿಂದುತ್ವವಾದಿ, ಮಂಗಳೂರು.

ಜಾತಿಅಭಿಮಾನವನ್ನು ಬಿಟ್ಟುಧರ್ಮರಕ್ಷಣೆಗಾಗಿ ಸಂಘಟಿತರಾಗುವುದುಅವಶ್ಯಕತೆಇದೆ. ಜನರ ಮನಸ್ಸಿನಲ್ಲಿ ಧರ್ಮದ ಮಾರ್ಗದರ್ಶನ ಪಡೆಯಲು ತುಡಿತವಿದೆ. ಯೋಗ್ಯ ಮಾರ್ಗದರ್ಶನದ ಆವಶ್ಯಕತೆಇದೆ.ಈ ದಿಶೆಯಲ್ಲಿ ಹಿಂದೂಜನಜಾಗೃತಿಕಾರ್ಯವನ್ನು ಮಾಡುತ್ತಇದೆ.ನಾವು ಸಂಘಟನೆಯಾದರೆ ಮಾತ್ರ ನಮ್ಮರಕ್ಷಣೆಯಾಗಲು ಸಾಧ್ಯವಿದೆ.ಈಗಿನ ಸರಕಾರಟಿಪ್ಪುಸುಲ್ತಾನ್‍ಜಯಂತಿಯ ಸಂದರ್ಭದಲ್ಲಿ ಸಮಾಜದಜನರಲ್ಲಿ ಹಲವಾರುಗೊಂದಲನವನ್ನುಂಟು ಮಾಡಿ ಹಿಂದೂಗಳಿಗೆ ತೊಂದರೆಯನ್ನು ಮಾಡಲಾಗಿದೆ.ಲವ್ ಜಿಹಾದ್‍ನಿಂದ ಹಿಂದೂ ಹುಡುಗಿಯರ ಮತಾಂತರ ಮಾಡಲಾಗುತ್ತಿದೆಆದರೆ ಸರಕಾರವುಇದರ ಬಗ್ಗೆ ಯಾವುದೆಕಾನೂನನ್ನು ಕೈಗೊಳ್ಳುತ್ತಿಲ್ಲ. ಈ ಎಲ್ಲಾ ಸಮಸ್ಯೆಯ ನಿವಾರಣೆಗಾಗಿ ನಾವು ಧರ್ಮಶಿಕ್ಷಣ ಪಡೆಯಬೇಕಾಗಿದೆ.

ಹಿಂದೂ ಧರ್ಮದ ಶ್ರೇಷ್ಟತೆಧರ್ಮಾಚರಣೆಯಲ್ಲಿಅಡಗಿದೆ – – ಸೌ ಲಕ್ಷ್ಮೀ ಪೈ, ವಕ್ತಾರರು, ಸನಾತನ ಸಂಸ್ಥೆ.

ವಿಚಾರವಾದಿಗಳು ಎಂದುಕೊಂಡಿರುವ ವಿಚಾರಶೂನ್ಯ ಹಿಂದೂ ವಿರೋಧಿಗಳಿಂದಾಗಿ ಹಿಂದೂಧರ್ಮದಅವನತಿಯಾಗುತ್ತಿದೆ.ಜವಾಹರ್‍ಲಾಲ್ ವಿಶ್ವವಿದ್ಯಾಲಯದಲ್ಲಿದೇಶವಿರೋಧಿ ಹೇಳಿಕೆಯನ್ನು ನೀಡಿದಕನ್ಹಯ್ಯನನ್ನುತನ್ನ ಸ್ವಂತ ಮಗ ಎಂಬಂತಹದೇಶದ್ರೋಹಿ ಹೇಳಿಕೆ ನೀಡಿದಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಹಿಂದುತ್ವನಿಷ್ಟ ಸಂಘಟನೆಗಳನ್ನು ಗುರಿ ಮಾಡಲಾಗುತ್ತಿದೆ.ಆದರೆಯಾವುದೇ ಹಿಂದುತ್ವವಾದಿ ಸಂಘಟನೆಗಳು ಇಂತಹಕೃತ್ಯ ಮಾಡಲು ಸಾಧ್ಯವೇಇಲ್ಲ, ಹಿಂದೂ ಭಯೋತ್ಪಾದನೆಯನ್ನು ಸಿದ್ಧಪಡಿಸಲು ವಿದೇಶಿ ಶಕ್ತಿಗಳಿಂದ ವ್ಯವಸ್ಥಿತವಾದ ಷಡ್ಯಂತ್ರ ನಡೆಯುತ್ತಿದೆ.

‘ಸುಖಸ್ಯ ಮೂಲಂ ಧರ್ಮಃ’ಅಂದರೆಧರ್ಮಾಚರಣೆಯಿಂದಲೇ ಸುಖ ಸಿಗಲು ಸಾಧ್ಯವಿದೆ.ನಾವೆಲ್ಲರೂ ಸ್ವತಃಧರ್ಮಾಚರಣೆಯನ್ನು ಮಾಡಿ ಸಮಾಜದ ವ್ಯಕ್ತಿಗಳಿಗೆ ಧರ್ಮಚಾರಣೆಯ ಮಹತ್ವವನ್ನು ತಿಳಿಸುವುದು ಅವಶ್ಯಕತೆಇದೆ’.ಧರ್ಮಶಿಕ್ಷಣದ ಅಭಾವದಿಂದಡಿಸೆಂಬರ್ 31 ರಂದು ಹೊಸ ವರ್ಷದಆಚರಣೆಯನ್ನು ಮಾಡುತ್ತಿದ್ದೇವೆ, ಹಿಂದೂಗಳಿಗೆ ಯುಗಾದಿಯೇ ಹೊಸ ವರ್ಷವಾಗಿದೆ.

ಕಾರ್ಯಕ್ರಮದಲ್ಲಿ ಹಿಂದೂ ಧರ್ಮಪ್ರೇಮಿಗಳಾದ ಶ್ರೀ ಗುರುಚಂದ್ರ ಹೆಗ್ಡೆಗಂಗಾರಿ, ಶ್ರೀ ಸಂದೀಪ್‍ಜೆ.ಕೆ ಬೊಂದೆಲ್, ಶ್ರೀ ಹರೀಶ್ ಶೆಟ್ಟೆಕಾವೂರು, ಶ್ರೀ ಉದಯ್ ಪಚ್ಚನಾಡಿ, ಶ್ರೀ ಅಮರೇಶ್ ಮರಕಡ, ಸೌ ಜಯಲಕ್ಷ್ಮೀ ಮೊಗೆರೊಡಿ, ಸೌ ಸುಮಂಗಲಇನ್ನಿತರರು ಉಪಸ್ಥಿತರಿದ್ದರು.

ಹಿಂದೂಜನಜಾಗೃತಿ ಸಮಿತಿಯ ಪರಿಚಯವನ್ನು ಹಿಂದೂಜನಜಾಗೃತಿ ಸಮಿತಿಯದ.ಕಜಿಲ್ಲಾ ಸಮನ್ವಯಕರಾದ ಶ್ರೀ ಚಂದ್ರ ಮೊಗೇರ ಮಾಡಿದರು.ಸಭೆಯ ಸೂತ್ರಸಂಚಾಲನೆಯನ್ನು ಕು.ಸುಶ್ಮಿತಾ ಮಾಡಿದರು.

ಸಭಾಗೃಹದಲ್ಲಿಧಾರ್ಮಿಕ ಆಚರಣೆಗಳ ಮೌಲ್ಯವನ್ನು ಸಮಾಜಕ್ಕೆ ತಿಳಿಸಿಕೊಡುವ ಸನಾತನದ ಗ್ರಂಥಗಳ ಮಾರಾಟ ಮತ್ತು ಪ್ರದರ್ಶನ,ಧರ್ಮಶಿಕ್ಷಣವನ್ನು ತಿಳಿಸಿಕೊಡುವ ಫ್ಲೆಕ್ಸ್ ಹಾಗೂ ಧರ್ಮಚಾರಣೆಯನ್ನು ತಿಳಿಸುವ ಸಿಡಿ  ಪ್ರದರ್ಶನಏರ್ಪಡಿಸಲಾಗಿತ್ತು.


Spread the love