ಮಂಗಳೂರು : ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಾಟ ; ಆರೋಪಿ   ದಸ್ತಗಿರಿ

Spread the love

ಮಂಗಳೂರು : ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಾಟ ಮಾಡುತ್ತಿರುವ ವ್ಯಕ್ತಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿ ಮರದ ದಿಮ್ಮಿಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ

1

ಸಪ್ಟೆಂಬರ್ 30 ರಂದು ಪುತ್ತೂರು ತಾಲೂಕು, ಉಪ್ಪಿನಂಗಡಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 75ರ ನೇತ್ರಾವತಿ ಸೇತುವೆ ಬಳಿ ವಾಹನ ತಪಾಸಣೆ ನಡೆಸುತ್ತಿದ್ದಾಗ, ನೆಲ್ಯಾಡಿ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಪರವಾನಿಗೆ ಇಲ್ಲದೇ ಅಕ್ರಮವಾಗಿ ಲಾರಿ ನೊಂದಣೆ ಸಂಖ್ಯೆ ಕೆಎ-41-418 ವಾಹನದಲ್ಲಿ ಕಾಡುಜಾತಿ ಹಾಗೂ  ಕಿರಾಲ್‍ಬೋಗಿ ಜಾತಿಯ ದಿಮ್ಮಿಗಳನ್ನು ಸಾಗಾಟ ಮಾಡುತ್ತಿರುವ ಪ್ರಕರಣವನ್ನು ಮಂಗಳೂರು ಅರಣ್ಯ ಸಂಚಾರಿ ದಳದ ವಲಯ ಅರಣ್ಯ ಅಧಿಕಾರಿ, ಹಾಗೂ ಉಪ ವಲಯ ಅರಣ್ಯ ಅಧಿಕಾರಿಗಳು ಪತ್ತೆಹಚ್ಚಿ  ಅರಣ್ಯ ಮೊಕದ್ದಮೆಯನ್ನು ದಾಖಲಿಸಿರುತ್ತಾರೆ.

ಕಾಡು ಜಾತಿ ಹಾಗೂ ಕಿರಾಲ್‍ಬೋಗಿ ಜಾತಿಯ ದಿಮ್ಮಿಗಳು ಒಟ್ಟು 16 ಸಂಖ್ಯೆ = 9.776ಘ.ಮೀ ಸೊತ್ತುಗಳನ್ನು ಹಾಗೂ ಸಾಗಾಟ ಮಾಡಲಾದ ಲಾರಿಯನ್ನು ಸರಕಾರಕ್ಕೆ ಅಮಾನತು ಪಡಿಸಿಕೊಳ್ಳಲಾಗಿದೆ. ಆರೋಪಿ ಮಹಮ್ಮದ್‍ರನ್ನು ದಸ್ತಗಿರಿ ಮಾಡಿ  ಜಾಮೀನಿನ ಮೇಲೆ  ಬಿಡುಗಡೆಗೊಳಿಸಲಾಗಿದೆ.

 ಮಂಗಳೂರು ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ, ಶ್ರೀ. ಬಿ ಸದಾಶಿವ ಭಟ್, ಇವರ ನಿರ್ದೇಶನ ಹಾಗೂ ಮಾರ್ಗದರ್ಶನದಲ್ಲಿ  ವಲಯ ಅರಣ್ಯಾಧಿಕಾರಿ, ಶ್ರೀ. ಜೆ ಕ್ಲಿಫರ್ಡ್ ಲೋಬೊ, ಇವರು ಮುಂದಿನ  ತನಿಖೆಯನ್ನು  ನಡೆಸುತ್ತಿದ್ದಾರೆ.


Spread the love