ಮಂಗಳೂರು: ಅಮ್ಯಾಕೊ ಎಂ.ಪಿ.ಎಲ್ -2015 – ಟಿ20 ಕ್ರಿಕೆಟ್ ಗರ್ಜಿಸಿದ ಉಡುಪಿ ಟೈಗರ್ಸ್‍ಗೆ ಒಲಿದ ಜಯ

Spread the love

ಮಂಗಳೂರು: ಇಲ್ಲಿನ ಕರ್ನಾಟಕ ರೀಜಿನಲ್ ಕ್ರಿಕೆಟ್ ಅಕಾಡಮಿಯು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಂಗೀಕಾರದೊಂದಿಗೆ ನಡೆಸುತ್ತಿರುವ ಅಮ್ಯಾಕೊ ಮಂಗಳೂರು ಪ್ರೀಮಿಯರ್ ಲೀಗ್ 2015 ಟ್ವೆಂಟಿ ಟ್ವೆಂಟಿ ಕ್ರಿಕೆಟ್ ಪಂದ್ಯಾಟದ ಮೂರನೆ ದಿನದ ಎರಡನೆಯ ಪಂದ್ಯದಲ್ಲಿ ಉಡುಪಿ ಟೈಗರ್ಸ್ ತಂಡವು ಮೂಡಬಿದರೆಯ ರೋಯಲ್ ಮೈಟಿಯನ್ಸ್ ತಂಡದ ವಿರುದ್ಧ 2 ವಿಕೇಟುಗಳ ಆಂತರದ ಜಯವನ್ನು ಸಾಧಿಸಿತು.

Udupi Tigers Vs Royal Mitians Udupi Tigers Vs Royal Mitians1

ಟಾಸ್ ಗೆದ್ದು ಬ್ಯಾಟಿಂಗಿಗಿಳಿದ ರಾಯಲ್ ತಂಡವು ತನ್ನ ಆರಂಭಿಕ ದಾಂಡಿಗ ಮನೀಶ್‍ರವರ ವಿಕೇಟನ್ನು 10ರ ಮೊತ್ತದಲ್ಲಿ ಕಳೆದುಕೊಂಡಿತು. ಒಂದನೆಯ ವಿಕೇಟಿನಲ್ಲಿ ಜತೆಗೂಡಿದ ವೃಜೇಶ್ ಮತ್ತು ರಿಶಿ ಬೋಪಣ್ಣ ಜೋಡಿಯು 50 ಚೆಂಡುಗಳಲ್ಲಿ 65 ರನ್‍ಗಳನ್ನು ಕಲೆ ಹಾಕಿತು. ಆ ಸಂದರ್ಭದಲ್ಲಿ ಬೋಪಣ್ಣರವರು ರಾಹುಲ್ ಕೋಟ್ಯಾನ್ ರವರಿಗೆ ಬೌಲ್ಡ್ ಆಗಿ ಪೆವಿಲಿಯನಿಗೆ ಮರಳಿದರು. ವೃಜೇಶ್‍ರವರ ಜತೆಗೂಡಿದ ಭರತ್ ಧೂರಿ (35) ತಂಡದ ಮೊತ್ತಕ್ಕೆ 51 ರನ್ ಗಳ ಕೊಡುಗೆಯನ್ನು ನೀಡಿದರು. ರಾಯಲ್ ತಂಡವು ತನ್ನ 20 ಓವರುಗಳಲ್ಲಿ 5 ವಿಕೇಟುಗಳನ್ನು ಕಳೆದುಕೊಂಡು 157 ರ ಮೊತ್ತವನ್ನು ದಾಖಲಿಸಿತು. ಯಶಸ್ವಿ ಬೌಲರ್ ರಾಹುಲ್ ಕೋಟ್ಯಾನ್ 24ಕ್ಕೆ 3, ದರ್ಶನ್ 37ಕ್ಕೆ 1 ವಿಕೇಟನ್ನು ಪಡೆದರು.

ಉಡುಪಿ ಟೈಗರ್ಸ್ ತಂಡವು ನಿಧಾನಗತಿಯಲ್ಲಿ ರನ್ ಪೇರಿಸುತ್ತಾ ಸಾಗಿ 10ನೆಯ ಓವರಿನಲ್ಲಿ 73 ರನ್‍ಗಳನ್ನು ಗಳಿಸುವಷ್ಟರಲ್ಲಿ ಅಮೂಲ್ಯ 3 ವಿಕೇಟುಗಳನ್ನು ಕಳೆದುಕೊಂಡಿತ್ತು. ಪರೀಕ್ಷಿತ್ ಶೆಟ್ಟಿಯವರ ದಾಂಡಿನಿಂದ ಆಕರ್ಷಕ 32 ರನ್‍ಗಳು ಮೂಡಿ ಬಂದಿತ್ತು. ಹೆಚ್ಚಿನ ರನ್ ಗತಿಯ ಅವಶ್ಯಕತೆಯ ಸಂದರ್ಭದಲ್ಲಿ 3 ಸಿಕ್ಸರ್, 2 ಬೌಂಡರಿಗಳುಳ್ಳ 33 ರನ್ ಗಳನ್ನು ಗಳಿಸಿದ ಅನೀಸ್‍ರವರು ರಾಘವೇಂದ್ರರವರಿಗೆ ವಿಕೇಟನ್ನು ಒಪ್ಪಿಸಿದರು. ನಂತರ ಹೊಣೆಯನ್ನು ಹೊತ್ತುಕೊಂಡ ರಾಹುಲ್ ಕೋಟ್ಯಾನ್‍ರವರು ಜವಾಬ್ದಾರಿಯಿಂದ ಆಡಿ ಅಜೇಯ 41ರನ್‍ಗಳೊಂದಿಗೆ ತಂಡಕ್ಕೆ 2 ವಿಕೇಟುಗಳ ಆಂತರದ ವಿಜಯವನ್ನು ತಂದುಕೊಟ್ಟು, ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗಳಿಸಿದರು. ರಾಘವೇಂದ್ರ 2, ಭರತ್,ಮುತಾಹಿರ್,ಶ್ರೀಷ ತಲಾ ಒಂದೊಂದು ವಿಕೇಟುಗಳನ್ನು ಪಡೆದರು.

Brief Score:

Royal Miteans: 157 for 5 wickets in 20 overs, Vrijesh Shetty 61, Rishi Bopanna 35, Bharath Duri 35,

Darshan 4-0-37-1, Rahul Kotian 4—24-3,

Udupi Tigers: 158 for 8 in 19.4 overs   Parikshith Shetty 32, Anish 33, Rahul Kotian 41*, Bharath 3-0-27-1,  Muthahir 3-0-24-1, Shreesha 03-0-18-1, Raghavendra 3.4-0-25-2

Results: Udupi Tigers won the Match by 2 wickets.


Spread the love