ಮಂಗಳೂರು ಧರ್ಮಪ್ರಾಂತ್ಯ ವತಿಯಿಂದ ಮೇರಿ ಮತೆಯ ಫಾತಿಮಾ ದರ್ಶನದ ಶತಮಾನೋತ್ಸವ ಆಚರಣೆ

Spread the love

ಮಂಗಳೂರು ಧರ್ಮಪ್ರಾಂತ್ಯ ವತಿಯಿಂದ ಮೇರಿ ಮತೆಯ ಫಾತಿಮಾ ದರ್ಶನದ ಶತಮಾನೋತ್ಸವ ಆಚರಣೆ
ಮಂಗಳೂರು : ಅ.ವಂ. ಡಾ. ಎಲೋಶಿಯಸ್ ಪಾವ್ಲ್ ಡಿ’ಸೋಜ ಮಂಗಳೂರಿನ ಧರ್ಮಾಧ್ಯಕ್ಷರು ಪೆÇೀರ್ಚುಗಲ್‍ನ ಫಾತಿಮಾದಲ್ಲಿ 1917 ರಲ್ಲಿ ಮಾತೆ ಮರಿಯಮ್ಮನವರು ಮೂವರು ಮಕ್ಕಳಿಗೆ(ಲೂಸಿಯಾ 10, ಫ್ರಾನ್ಸಿಸ್ಕೊ 8 ಮತ್ತು 7 ವಸ್ಸಿನ ಜೆಸಿಂತಾಗೆ ದರ್ಶನ ನೀಡಿದ ನೆನಪಿಗಾಗಿ ತನ್ನೀರ್‍ಬಾವಿಯ ಫಾತಿಮಾ ಮಾತೆಯ ದೇವಾಲಯದಲ್ಲಿ ಸಂಭ್ರಮದ ಬಲಿಪೂಜೆಯನ್ನು ಅರ್ಪಿಸಿದರು.
ಫಾತಿಮಾದಲ್ಲಿ ಮಾತೆ ಮರಿಯಮ್ಮನವರು ನೀಡಿದ ದರ್ಶನದಿಂದ ಕಥೋಲಿಕ ಧರ್ಮಸಭೆ ತುಂಬಾ ಚೈತನ್ಯ ಪಡೆದಿದೆ. ಇವತ್ತು ಪ್ರಪಂಚದ ಮೂಲೆ ಮೂಲೆಗಳಿಂದ ಮಿಲಿಯಗಟ್ಟಲೆ ಜನರು ಫಾತಿಮಾಕ್ಕೆ ಭೇಟಿ ನೀಡುತ್ತಾರೆ. ಅಲ್ಲಿಗೆ ಬಂದವರು ಮರಳಿ ಮನೆಗೆ ಹೋಗುವಾಗ ದೇವರ ಅನುಭವ, ಜೀವನದಲ್ಲಿ ಬದಲಾವಣೆ ಕಂಡುಕೊಂಡು ಹೋಗುತ್ತಾರೆ ಎಂದರು. ಇವತ್ತಿನ ದಿವಸ(ಮೇ 13) ಜಗದ್ಗುರು ಫ್ರಾನ್ಸಿಸ್‍ರವರು ಫಾತಿಮಾಕ್ಕೆ ಭೇಟಿ ನೀಡಿ ಫ್ರಾನ್ಸಿಸ್ಕೊ ಮತ್ತು ಜೆಸ್ಸಿಂತ ಇವರನ್ನು ಸಂತರೆಂದು ಘೋಷಿಸುತ್ತಾರೆ ಎಂಬ ವಿಚಾರವನ್ನು ಸಹ ತಿಳಿಸಿದರು.

ಇದಕ್ಕೆ ಮುಂಚೆ ಬೋಂದೆಲ್ ಚರ್ಚ್‍ನಿಂದ 3 ಗಂಟೆಗೆ ಫಾತಿಮಾ ಮಾತೆಯ ಪ್ರತಿಮೆಯನ್ನು ತೆರೆದ ವಾಹನದಲ್ಲಿ ತನ್ನೀರ್ ಬಾವಿಯ ದೋಸ್ತ್ ಕ್ಲಬ್ ಮೈದಾನ ತನಕ ಮೆರವಣೆಗೆಯಲ್ಲಿ ತರಲಾಯ್ತು. ಅಲ್ಲಿಂದ 4 ಗಂಟೆಗೆ ತನ್ನೀರ್‍ಬಾವಿ ಫಾತಿಮಾ ಮಾತೆಯ ದೇವಾಲಯ ತನಕ ಮೆರವಣಿಗೆಯಲ್ಲಿ ಪ್ರತಿಮೆಯನ್ನು ಸಂಬ್ರಮದಿಂದ ತರಲಾಯ್ತು. ಬಲಿಪೂಜೆಯ ಸಮಯದಲ್ಲಿ ವಂ. ಜೋಸೆಫ್ ಮಾರ್ಟಿಸ್ ಜೆಪ್ಪು ಸಂತ ಜೋಸೆಫರ ಸೆಮಿನರಿಯ ರೆಕ್ಟರ್ ಪ್ರವಚನ ನೀಡಿದರು. ಪ್ರವಚನದಲ್ಲಿ ಮಾತೆ ಮರಿಯಮ್ಮನವರು ಮೂವರು ಮಕ್ಕಳಿಗೆ ನೀಡಿದ ದರ್ಶನದಲ್ಲಿ ಕೊಟ್ಟಂತಹ ಸಂದೇಶ-ಪಾಪಕ್ಕೆ ವಿಮುಖರಾಗುವುದು, ಪ್ರಾಯಶಿತ್ತ ಮಾಡುವುದು, ತನ್ನ ನಿರ್ಮಲ ಹ್ರದಯಕ್ಕೆ ಗೌರವ ನೀಡುವುದರ ಮೂಲಕ ದೇವರ ಪ್ರೀತಿಯನ್ನು ಅರಿಯುವುದು, ಇವುಗಳ ಬಗ್ಗೆ ವಿವರಿಸಿದರು. ಆಶೋಕನಗರ ಚರ್ಚ್‍ನ ಫಾ. ಕ್ಲಾಡ್ ಕೊರ್ದ ಜಪಸರದ ಮಹತ್ವ ಮತ್ತು ಸಾಮಾನ್ಯ ಜನರು ಕೂಡ ಯಾವ ರೀತಿ ಈ ಪ್ರಾರ್ಥನೆಯನ್ನು ಮಾಡಬಹುದು ಎಂಬುದನ್ನು ಮನಮುಟ್ಟುವ ರೀತಿಯಲ್ಲಿ ಹೇಳಿಕೊಟ್ಟರು.
ಈ ಸಂದರ್ಭದಲ್ಲಿ ಸಂತ ಜಾನ್ ಮೇರಿ ವಿಯಾನ್ನಿ ಚರ್ಚ್ ಬಾಂಬಿಲ್ ಇಲ್ಲಿನ ಧರ್ಮಗುರು ಫಾ. ಸ್ಟೇನಿ ಮೊಂತೇರೊರವರು ನಿರ್ಮಿಸಿದ ಫಾತಿಮಾ ಮಾತೆಯ 2 ಗಂಟೆಯ ಚಲನ ಚಿತ್ರವನ್ನು ಧರ್ಮಾಧ್ಯಕ್ಷರು ಬಿಡುಗಡೆಗೊಳಿಸಿದರು.
ಧರ್ಮಪ್ರಾಂತ್ಯದ ವಿಕಾರ್ ಜನರಲ್ ಮೊನ್ಸಿಂಜೊರ್ ಡೆನಿಸ್ ಮೊರಾಸ್ ಪ್ರಭು, 52 ಧರ್ಮಗುರುಗಳು 4,500 ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ತನ್ನೀರ್ ಬಾವಿ ಚರ್ಚನ ಫಾ. ಆಲ್ಬನ್ ರೊಡ್ರಿಗಸ್ ಗಣ್ಯರಿಗೆ ಮತ್ತು ಜನರಿಗೆ ಸ್ವಾಗತ ಬಯಸಿದರು. ಫಾ. ಫ್ರಾನ್ಸಿಸ್ ಡಿ’ಸೋಜ ಕಾರ್ಯಕ್ರಮದ ಸಂಚಾಲಕರು ವಂದನಾರ್ಪಣೆ ಗೈದರು. ಶ್ರೀ ಫೆಲಿಕ್ಸ್ ಡಿ’ಸೋಜ ಚರ್ಚ್‍ನ ಉಪಾಧ್ಯಕ್ಷರು ಮತ್ತು ಶ್ರೀ ಕ್ಲಿ¥sóÀರ್ಡ್ ಲೋಬೊ ನಿಕಟ ಪೂರ್ವ ಉಪಾಧ್ಯಕ್ಷರು ಹಾಜರಿದ್ದರು


Spread the love