ಮಂಗಳೂರು: ಶಿಕ್ಷಕರ ಬೇಡಿಕೆಗಳನ್ನು ಪರಿಹರಿಸಲು ಶ್ರೀ ಐವನ್ ಡಿಸೋಜಾ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ.

Spread the love

ಮಂಗಳೂರು: ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಉಪನ್ಯಾಸಕರು ತಮ್ಮ ಬೇಡಿಕೆಗಳನ್ನು ಒತ್ತಾಯಿಸಿ ತರಗತಿಗಳನ್ನು ಬಹಿಸ್ಕರಿಸಿ ಸರಕಾರಿ ಕಾಲೇಜುಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ  ತುಂಬಾ ತೊಂದರೆಯಾಗಿದ್ದು ವಿದ್ಯಾರ್ಥಿಗಳು ಬೆಳಿಗ್ಗೆ 11 ಗಂಟೆಗೆ ಮನೆಗಳಿಗೆ ತರೆಳುತ್ತಿರುವುದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಿದೆ.

teachers

ಅತಿಥಿ ಉಪನ್ಯಾಸಕರ ಪ್ರಸ್ತುತ ಇರುವ ತಿಂಗಳೊಂದಕ್ಕೆ ರೂ.9000/- ವೇತನವನ್ನು ಕನಿಷ್ಠ ರೂ.25,000/-ಕ್ಕೆ ಎರಿಕೆ  ಮಾಡಬೇಕೆಂದು ಅವರ ಬೇಡಿಕೆ ನ್ಯಾಯಸಮ್ಮತವಾಗಿದ್ದು ಈ ಬಗ್ಗೆ ಸರಕಾರ ಬೇಡಿಕೆ ಈಡೇರಿಸಬೇಕು ಮತ್ತು ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಉಪನ್ಯಾಸಕರನ್ನು ಖಾಯಂ ನೇಮಕಾತಿಯ ಸಂದರ್ಭದಲ್ಲಿ ಅದ್ಯತೆ ನೀಡಿ ಅವರನ್ನು ಪರಿಗಣಿಸಬೇಕು, ಮಹಿಳಾ ಅತಿಥಿ ಉಪನ್ಯಾಸಕರುಗಳಿಗೆ 3 ತಿಂಗಳ ಹೆರಿಗೆ ರಜೆಯನ್ನು ನೀಡಬೇಕು ಎಂಬ ಬೇಡಿಕೆಯು ಅತ್ಯಂತ ಸೂಕ್ತವಾದ ಬೇಡಿಕೆಯಾಗಿದ್ದು, ದ.ಕ. ಜಿಲ್ಲೆಯ 37 ಸರಕಾರಿ ಕಾಲೇಜುಗಳಲ್ಲಿ 1,265/- ಅತಿಥಿ ಉಪನ್ಯಾಸಕರು  ಸೇವೆ ಸಲ್ಲಿಸುತ್ತಿದ್ದಾರೆ.

ರಾಜ್ಯದಾದ್ಯಂತ 411 ಸರಕಾರಿ ಕಾಲೇಜುಗಳಲ್ಲಿ 14,000/-ಕ್ಕೂ ಅಧಿಕ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಎಂದು ಈ ಬಗ್ಗೆ ಅತಿಥಿ ಉಪನ್ಯಾಸ ನಿಯೋಗದ ಡಾ| ಮೋಹನ್ ಕೆ.ಎನ್., ಗೋಪಾಲಕೃಷ್ಣ ಕೆ., ಮಹೇಂದ್ರ ಎಂ. ಗೊಡ್‍ಕರ್, ಸುಚಿತ್ರಾ, ಶರ್ಮಿಳಾ, ಮುಂತಾದವರು ಭೇಟಿ ಮಾಡಿದ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರ ಗಮನಕ್ಕೆ ಈ ಬಗ್ಗೆ ಕೂಡಲೇ ಸಮಸ್ಯೆಯನ್ನು ಪರಿಹರಿಸುವಂತೆ ತಿಳಿಸುವುದಾಗಿಯೂ, ಹಾಗೂ ಈ ಬೇಡಿಕೆಯನ್ನು ವಿಧಾನ ಪರಿಷತ್ತಿನ ಅಧಿವೇóನದಲ್ಲಿ ಕೂಡ ವಿಷಯವನ್ನು ಮಂಡಿಸುವುದಾಗಿಯೂ ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿಸೋಜಾರವರು ತಿಳಿಸಿದ್ದಾರೆ.


Spread the love