ಮಂಗಳೂರು: ಸಿದ್ಧನಾಥ್ ಬುಯಾಂವ್, ಗೋವಾ, ಜಾಗತಿಕ್ ಕೊಂಕ್ಣಿ ಸಂಘಟನೆಯ ಅಧ್ಯಕ್ಷರಾಗಿ ಆಯ್ಕೆ

Spread the love

ಮಂಗಳೂರು: ಅಗಸ್ಟ್ 22, 2015ರಂದು, ಕಲಾಂಗಣ್, ಮಂಗಳೂರಿನಲ್ಲಿ, ಸೇರಿದ ಜಾಗತಿಕ್ ಕೊಂಕ್ಣಿ ಸಂಘಟನ್ ಇದರ 4ನೇ ಜಾಗತಿಕ ಮಹಾಸಭೆಯು, ಸಾಂಸ್ಕೃತಿಕ ಕಾರ್ಯಕರ್ತರಾದ, ಬುಯಾಂವ್ ಥಿಯೆಟರ್ಸ್, ಗೋವಾ ಇದರ ಶ್ರೀ ಸಿದ್ಧನಾಥ್ ಉಲ್ಹಾಸ್ ಬುಯಾಂವ್, ಇವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿತು.

ಶ್ರೀ ಎರಿಕ್ ಒಝೇರಿಯೊ, ಮಂಗಳೂರು, ಇವರು ಕಾರ್ಯದರ್ಶಿಗಳಾಗಿ ಚುನಾಯಿತರಾದರು. ಇತರ ಪದಾಧಿಕಾರಿಗಳು –
• ಶ್ರೀ ಕೆ. ಕೆ. ಉತ್ತರನ್ (ಕೇರಳಾ) – ಉಪಾಧ್ಯಕ್ಷ (ಭಾರತ)
• ಶ್ರೀ ಬಿ. ಪಾಸ್ಕಲ್ ಪಿಂಟೊ (ಕುವೇಯ್ಟ್) – ಉಪಾಧ್ಯಕ್ಷ (ಗಲ್ಫ್ ರಾಷ್ಟ್ರಗಳು)
• ಡಾ| ಒಸ್ಟಿನ್ ಡಿ’ಸೋಜ ಪ್ರಭು (ಯು.ಎಸ್.ಎ.) – ಉಪಾಧ್ಯಕ್ಷ (ಇತರ ರಾಷ್ಟ್ರಗಳು)
• ಶ್ರೀ ಲುವಿ ಜೆ. ಪಿಂಟೊ (ಮಂಗ್ಳುರ್) – ಖಜಾಂಚಿ
• ಶ್ರೀ ಆ್ಯನ್ಸಿ ಡಿ’ಸೋಜ (ವಸಯ್) – ಸಹಕಾರ್ಯದರ್ಶಿ
• ಶ್ರೀ ಜುಜೆ ಸಾಲ್ವಾದೊರ್ ಫೆರ್ನಾಂಡಿಸ್ (ಗೋವಾ) – ಲೋಕ ಸಂಪರ್ಕ ಅಧಿಕಾರಿ

ಕಾರ್ಯಕಾರಿ ಸಮಿತಿಯ ಇತರ ಸದಸ್ಯರು –
• ಶ್ರೀ ಆ್ಯಂಟನಿ ಮಿರಾಂದಾ (ಗೋವಾ)
• ಶ್ರೀ ಸಂತೋಷ್ ಆರ್. ಲೊಟ್ಲಿಕರ್ (ಗೋವಾ)
• ಶ್ರೀ ವಲ್ಲಿ ವಗ್ಗ (ಮಯ್ಸೂರ್)
• ಶ್ರೀ ವಸಂತ್ ಶಾಂತಾರಾಮ್ ಬಾಂದೇಕರ್ (ಕಾರ್ವಾರ್)
• ಶ್ರೀ ಜೊಯ್ ಸಿರಿಯಾಕೊ ಫೆರ್ನಾಂಡಿಸ್ (ಗೋವಾ)
• ಶ್ರೀ ಲೊರೆನ್ಸ್ ಡಿ’ಸೋಜ ಕಮಾನಿ (ಮಹಾರಾಷ್ಟ್ರ)
• ಶ್ರೀ ಕೆ. ವಿಶ್ವನಾಥನ್ (ಕೊಚ್ಚಿನ್)
• ಶ್ರೀ ಜೊನ್ ಮ್ಯಾಕ್ಸಿಮ್ ಕ್ರಾಸ್ತಾ (ಮಿರಾ ರೋಡ್)
• ಶ್ರೀ ಕೆ. ವಿಜಯನ್ (ಕೊಚ್ಚಿನ್)
• ಶ್ರೀ ಸೆಬಾಸ್ತ್ಯಾಂವ್ ದಾ ಮೆರ್ಸೆಂ ಫೆರ್ನಾಂಡಿಸ್ (ಗೋವಾ)
• ಎಡ್ವೊಕೇಟ್ ಥೊಮಸ್ ಡಿ’ಸೋಜ (ಕಾಸರಗೋಡ್)
• ಶ್ರೀ ಸಿ. ಅರುಣ್ ಡಿ’ಸೋಜ (ಸೌದಿ ಅರೇಬಿಯಾ)

20 ಇತರ ರಾಷ್ಟ್ರಗಳಿಂದ ಕೊಂಕಣಿ ಸಂಘಟನೆಗಳ ಮುಖಂಡರನ್ನು ಕಾರ್ಯಾಕಾರಿ ಸಮಿತಿಗೆ ಆಯ್ಕೆ ಮಾಡಲಾಗುವುದು


Spread the love