ಮಂಗಳೂರು: 3ಡಿ ಡಿಸೈನಿಂಗ್ ಮತ್ತು ಪ್ರಿಂಟಿಂಗ್ ಲ್ಯಾಬ್ ಆರಂಭಿಸಿದ ಕೆಎಂಸಿ ಆಸ್ಪತ್ರೆ

Spread the love

ಮಂಗಳೂರು: 3ಡಿ ಡಿಸೈನಿಂಗ್ ಮತ್ತು ಪ್ರಿಂಟಿಂಗ್ ಲ್ಯಾಬ್ ಆರಂಭಿಸಿದ ಕೆಎಂಸಿ ಆಸ್ಪತ್ರೆ

ಮಂಗಳೂರು : ಕೆಎಂಸಿ ಆಸ್ಪತ್ರೆಯ ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ಟೆಕ್ನಾಲಜಿ ಅಸಿಸ್ಟೆಡ್ ರೀಕನ್‌ಸ್ಟ್ರಕ್ಟಿವ್ ಸರ್ಜರಿಯು 3ಡಿ ಡಿಸೈನಿಂಗ್ ಮತ್ತು ಪ್ರಿಂಟಿಂಗ್ ಲ್ಯಾಬ್ ಅನ್ನು ಉದ್ಘಾಟಿಸಿದೆ ಮತ್ತು ಆ ಮೂಲಕ ಹೆಲ್ತ್‌ ಕೇರ್(ಆರೋಗ್ಯ ಸೇವೆ) ಆವಿಷ್ಕಾರದಲ್ಲಿ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. CTARSನ ಸಹಯೋಗದೊಂದಿಗೆ ಆರಂಭವಾಗಿರುವ ಈ ಸೌಲಭ್ಯವು ಕರಾವಳಿ ಕರ್ನಾಟಕ ಮತ್ತು ಉತ್ತರ ಕೇರಳದಲ್ಲಿ ಮೊದಲನೆಯದಾಗಿದ್ದು, ಆರೋಗ್ಯ ಕ್ಷೇತ್ರದ ಕ್ರಿಯಾಶೀಲತೆಯನ್ನು ಪರಿವರ್ತಿಸಲು ಸಹಾಯವಾಗಲಿದೆ. ಇದು ಪೂರ್ವ ಶಸ್ತ್ರಚಿಕಿತ್ಸಾ ಯೋಜನೆ ಮತ್ತು ಶಿಕ್ಷಣ, ರೋಗಿಗೆ-ನಿರ್ದಿಷ್ಟ ಕಟ್ಟಿಂಗ್ ರಚನೆ ಮತ್ತು ಡ್ರಿಲ್ಲಿಂಗ್ ಮಾರ್ಗದರ್ಶಿ, ಮತ್ತು ಕಸ್ಟಮೈಸ್ ಮಾಡಿದ ಇಂಪ್ಲಾಂಟ್‌ಗಳು ಮತ್ತು ಇಂಪ್ಲಾಂಟ್ ಅಚ್ಚುಗಳ ಅಭಿವೃದ್ಧಿ ಒಳಗೊಂಡು ಸುಧಾರಿತ ವೈದ್ಯಕೀಯ 3ಡಿ ಡಿಸೈನ್(ವಿನ್ಯಾಸ) ಮತ್ತು ಪ್ರಿಂಟಿಂಗ್(ಮುದ್ರಣ) ಸೇವೆಗಳನ್ನು ಒದಗಿಸುತ್ತದೆ. ಈ ಸಾಮರ್ಥ್ಯಗಳು ಶಸ್ತ್ರಚಿಕಿತ್ಸೆಗಳಲ್ಲಿ ನಿಖರತೆಯನ್ನು ಹೆಚ್ಚಿಸಲು ನೆರವಾಗುತ್ತವೆ, ಇದು ರೋಗಿಯ ಸುಧಾರಿತ ಕ್ಲಿನಿಕಲ್ ಫಲಿತಾಂಶಗಳಿಗೆ ಕಾರಣವಾಗುತ್ತದೆ.

3ಡಿ ಡಿಸೈನ್(ವಿನ್ಯಾಸ) ಮತ್ತು ಪ್ರಿಂಟಿಂಗ್(ಮುದ್ರಣ) ಫಾರ್ ಹೆಲ್ತ್ ಕೇರ್ ಮೂಲತತ್ವವು, ನೈಜ ಸಮಯದಲ್ಲಿ ಮತ್ತು ಭೌತಿಕ 3ಡಿ ಮಾದರಿಗಳ ಮೂಲಕ ರೋಗಿಗಳಿಗೆ ವೈದ್ಯಕೀಯ ಪರಿಸ್ಥಿತಿಗಳನ್ನು ದೃಶ್ಯರೂಪದಲ್ಲಿ ತೋರಿಸುವ ಮತ್ತು ವಿವರಿಸುವ ಸಾಮರ್ಥ್ಯವನ್ನು ಹೊಂದಿದೆ. ಉದಾಹರಣೆಗೆ, ರೋಗಿಯು ಕೆಳ ದವಡೆಯ ಗೆಡ್ಡೆಯಿಂದ ಬಳಲುತ್ತಿದ್ದರೆ, ಕೇವಲ ಇಮೇಜಿಂಗ್ ಡಯಾಗ್ನಾಸ್ಟಿಕ್ಸ್ ಗಳನ್ನು ಅವಲಂಬಿಸುವ ಬದಲು, ಒಂದು ಸ್ಪಷ್ಟವಾದ 3ಡಿ ಚಿತ್ರಣವನ್ನು ಪಡೆಯಬಹುದು, ಇದು ಗೆಡ್ಡೆಯ ಸ್ವರೂಪದ ಬಗ್ಗೆ ತಕ್ಷಣ ಒಳನೋಟದ ಮಾಹಿತಿಯವನ್ನು ನೀಡುತ್ತದೆ.

ಆರೋಗ್ಯ ಕ್ಷೇತ್ರದಲ್ಲಿ 3ಡಿ ಡಿಸೈನ್ ಮತ್ತು ಪ್ರಿಂಟಿಂಗ್ ಅನ್ನು ಬಳಸಿಕೊಳ್ಳುವ ವೈವಿಧ್ಯಮಯ ಪ್ರಯೋಜನಗಳು:

· ವೈಯಕ್ತಿಕಗೊಳಿಸಿದ ಶಸ್ತ್ರಚಿಕಿತ್ಸಾ ಪೂರ್ವ ಯೋಜನೆ ಮತ್ತು ಚಿಕಿತ್ಸೆ

· ಕಸ್ಟಮೈಸ್ ಮಾಡಿದ ಶಸ್ತ್ರಚಿಕಿತ್ಸಾ ಸಾಧನಗಳು ಮತ್ತು ಪ್ರಾಸ್ಥೆಸಿಸ್(ಅಂಗನ್ಯೂನತೆಗಳ ಸರಿಪಡಿಸುವಿಕೆಗೆ ಬಳಸಲಾಗುವ ಕೃತಕ ಅಂಗ)

· ವಿವಿಧ ಕೇಂದ್ರಗಳ ನಡುವೆ ಜ್ಞಾನ ವಿನಿಮಯವನ್ನು ಅನುಮತಿಸುತ್ತದೆ

· ರೋಗಿಗಳಿಗೆ ಅರಿವು ಹಾಗೂ ಶಿಕ್ಷಣ

· ಆಪರೇಷನ್ ಥಿಯೇಟರ್‌ನಲ್ಲಿ ಶಸ್ತ್ರಚಿಕಿತ್ಸೆಯ ಸಮಯವನ್ನು ಕಡಿಮೆಗೊಳಿಸುತ್ತದೆ

· ಕಡಿಮೆ ಆಸ್ಪತ್ರೆ ವಾಸ ಮತ್ತು ಉತ್ತಮ ವೈದ್ಯಕೀಯ ಫಲಿತಾಂಶ

ಸೌಲಭ್ಯವನ್ನು ಉದ್ಘಾಟಿಸಿದ ನಂತರ, ಮುಖ್ಯ ಅತಿಥಿಯಾಗಿದ್ದ, ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ಟೀಚಿಂಗ್ ಹಾಸ್ಪಿಟಲ್ಸ್, ಚೀಫ್ ಆಪರೇಟಿಂಗ್ ಆಫೀಸರ್ ಡಾ.ಆನಂದ ವೇಣುಗೋಪಾಲ್, “3ಡಿ ಡಿಸೈನ್ ಮತ್ತು ಪ್ರಿಂಟಿಂಗ್ ಆಗಮನವು ಆರೋಗ್ಯ ಕ್ಷೇತ್ರದಲ್ಲಿ ಒಂದು ಗೇಮ್-ಚೇಂಜರ್ ಆಗಿದೆ. ಇದು ಕೇವಲ ಚಿತ್ರಗಳನ್ನು ವಿಶ್ಲೇಷಿಸುವುದರಿಂದ ವೈದ್ಯಕೀಯ ಪರಿಸ್ಥಿತಿಗಳ ಭೌತಿಕ ಪ್ರಾತಿನಿಧ್ಯಗಳನ್ನು ರೂಪಿಸುವ ಶೈಲಿಯನ್ನು ಬದಲಾಯಿಸುತ್ತದೆ. ಈ ತಂತ್ರಜ್ಞಾನವು ರೋಗಿಯ ಗ್ರಹಿಕೆಯನ್ನು ಹೆಚ್ಚಿಸುವುದಲ್ಲದೆ, ನಾವು ಹೇಗೆ ರೋಗನಿರ್ಣಯ ಮಾಡುತ್ತೇವೆ ಮತ್ತು ಚಿಕಿತ್ಸೆಯ ಯೋಜನೆಯನ್ನು ಹೇಗೆ ರೂಪಿಸುತ್ತೇವೆ ಎಂಬುದರಲ್ಲಿ ಕ್ರಾಂತಿ ಉಂಟುಮಾಡುತ್ತದೆ” ಎಂದು ಹೇಳಿದರು.

ಗೌರವ ಅತಿಥಿಗಳಾಗಿದ್ದ ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಡೀನ್ ಡಾ.ಬಿ. ಉನ್ನಿಕೃಷ್ಣನ್, “ನಾವು ಆರೋಗ್ಯ ರಕ್ಷಣೆಯ ಪರಿವರ್ತನೆಯನ್ನು ಪರಿಶೀಲಿಸುವಾಗ, 3ಡಿ ಡಿಸೈನ್ ಮತ್ತು ಪ್ರಿಂಟಿಂಗ್ ಏಕೀಕರಣವು ಪ್ರಗತಿಯ ದಾರಿದೀಪವಾಗಿ ಎದ್ದು ಕಾಣುತ್ತದೆ. ಇದು ಕೇವಲ ತಾಂತ್ರಿಕ ಅದ್ಭುತವಲ್ಲ, ಆದರೆ ಸಮುದಾಯಗಳನ್ನು ಸಶಕ್ತಗೊಳಿಸುವ ಸಾಧನವಾಗಿದೆ. ಭಾರತದ ಆರೋಗ್ಯ ಸೇವೆ ಕ್ಷೇತ್ರದಲ್ಲಿ 3ಡಿ ವಿನ್ಯಾಸ ಮತ್ತು ಮುದ್ರಣದ ಅಳವಡಿಕೆಯ ಅಂಕಿಅಂಶಗಳು ಅದರ ಪರಿಣಾಮದ ಬಗ್ಗೆ ಒತ್ತಿ ಹೇಳುತ್ತವೆ, ಲಭ್ಯವಾಗಬಹುದಾದ ಮತ್ತು ಸೂಕ್ತವಾದ ವೈದ್ಯಕೀಯ ಪರಿಹಾರಗಳ ಹೊಸ ಯುಗವನ್ನು ಆರಂಭಿಸುತ್ತವೆ” ಎಂದು ಹೇಳಿದರು.

ಇತ್ತೀಚಿನ ಮಾಹಿತಿಯ ಪ್ರಕಾರ, ಭಾರತದಲ್ಲಿ ಆರೋಗ್ಯ ರಕ್ಷಣೆಗಾಗಿ 3ಡಿ ವಿನ್ಯಾಸ ಮತ್ತು ಮುದ್ರಣ ತಂತ್ರಜ್ಞಾನದ ಮಾರುಕಟ್ಟೆಯು 2030ರಲ್ಲಿ ಸುಮಾರು ಶೇ.20.9ರಷ್ಟು ಬೆಳೆಯುವ ನಿರೀಕ್ಷೆಯಿದೆ. ಈ ಬೆಳವಣಿಗೆಯು ಸುಧಾರಿತ ಮತ್ತು ವೈಯಕ್ತೀಕರಿಸಿದ ವೈದ್ಯಕೀಯ ಪರಿಹಾರಗಳಲ್ಲಿನ ಬದಲಾವಣೆಯನ್ನು ಸೂಚಿಸುತ್ತದೆ, ವಿವಿಧ ವೈದ್ಯಕೀಯ ವಿಭಾಗಗಳಲ್ಲಿ ರೋಗಿಗಳ ಆರೈಕೆಯ ಮೇಲೆ 3ಡಿ ತಂತ್ರಜ್ಞಾನದ ಧನಾತ್ಮಕ ಪ್ರಭಾವವನ್ನು ಒತ್ತಿಹೇಳುತ್ತದೆ.

ಅಧ್ಯಕ್ಷತೆ ವಹಿಸಿದ್ದ ಮಾಹೆಯ ಮಂಗಳೂರು ಕ್ಯಾಂಪಸ್‌ನ ವೈಸ್ ಚಾನ್ಸೆಲರ್ ಪ್ರೊ .ಡಾ.ದಿಲೀಪ್ ನಾಯ್ಕ್, “ಆರೋಗ್ಯ ರಕ್ಷಣೆಯ ಮೇಲೆ 3ಡಿ ವಿನ್ಯಾಸ ಮತ್ತು ಮುದ್ರಣದ ಪ್ರಭಾವದಿಂದ ನಾನು ಪುಳಕಿತನಾಗಿದ್ದೇನೆ, ಏಕೆಂದರೆ ಈ ತಂತ್ರಜ್ಞಾನವು ಸಾಂಪ್ರದಾಯಿಕ ವಿಧಾನಗಳನ್ನು ಮೀರಿದೆ. ರೋಗಿಗಳಿಗೆ ನಿರ್ದಿಷ್ಟವಾದ ಇಂಪ್ಲಾಂಟ್‌ಗಳಿಂದ ಹಿಡಿದು ವೈಯಕ್ತಿಕಗೊಳಿಸಿದ ಪ್ರಾಸ್ಥೆಟಿಕ್ಸ್ ಒದಗಿಸಲು ನೆರವಾಗುತ್ತದೆ. 3ಡಿ ವಿನ್ಯಾಸ ಮತ್ತು ಮುದ್ರಣವು ನಿಖರತೆ ಮತ್ತು ರೋಗಿ ಕೇಂದ್ರಿತ ಆರೈಕೆಗೆ ನಮ್ಮ ಬದ್ಧತೆಯನ್ನು ಖಾತ್ರಿಪಡಿಸುವುದರ ಮೂಲಕ ಆರೋಗ್ಯ ರಕ್ಷಣೆಯ ಕ್ಷೇತ್ರವನ್ನು ಮರುರೂಪಿಸುತ್ತಿದೆ” ಎಂದು ಹೇಳಿದರು.

ಈ ತಂತ್ರಜ್ಞಾನವನ್ನು ಕಾರ್ಡಿಯೋ-ಥೊರಾಸಿಕ್ ಸರ್ಜರಿ, ನರಶಸ್ತ್ರಚಿಕಿತ್ಸೆ, ಓರಲ್ ಮತ್ತು ಮ್ಯಾಕ್ಸಿಲೊಫೇಶಿಯಲ್ ಸರ್ಜರಿ, ನೇತ್ರವಿಜ್ಞಾನ, ಓಟೋಲರಿಂಗೋಲಜಿ, ಮೂಳೆಚಿಕಿತ್ಸೆ, ಪ್ಲಾಸ್ಟಿಕ್ ಸರ್ಜರಿ, ಪೊಡಿಯಾಟ್ರಿ, ಶ್ವಾಸಕೋಶ ಶಾಸ್ತ್ರ, ಶಸ್ತ್ರಚಿಕಿತ್ಸಕ ಮತ್ತು ವಿಕಿರಣ ಆಂಕೊಲಾಜಿ, ಮೂತ್ರಶಾಸ್ತ್ರ, ನಾಳೀಯ ಶಸ್ತ್ರಚಿಕಿತ್ಸೆಯಂತಹ ವಿವಿಧ ಕ್ಷೇತ್ರಗಳಲ್ಲಿ ಬಳಸಲಾಗುತ್ತದೆ. ಡಾ.ನಾಯಕ್ ಅವರು ಈ ಕ್ಷೇತ್ರಗಳಲ್ಲಿ 3ಡಿ ಮುದ್ರಣದ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು, ಏಕೆಂದರೆ ಇದು ರೋಗಿಗಳಿಗೆ ಉತ್ತಮ ಆರೈಕೆಯನ್ನು ಒದಗಿಸಲು ವೈದ್ಯಕೀಯ ವೃತ್ತಿಪರರಿಗೆ ಹೊಸ ಸಾಧ್ಯತೆಗಳನ್ನು ತೆರೆದಿದೆ.

ಮಂಗಳೂರು ಕೆಎಂಸಿ ಆಸ್ಪತ್ರೆಯ ಪ್ರಾದೇಶಿಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಸಗೀರ್ ಸಿದ್ದಿಕಿ, “ಭಾರತದಲ್ಲಿ ಪ್ರಮುಖ ಆರೋಗ್ಯ ಸಂಸ್ಥೆಯಾಗಿರುವ ಮಣಿಪಾಲ್ ಆಸ್ಪತ್ರೆಗಳು ಅತ್ಯಾಧುನಿಕ ಆರೋಗ್ಯ ತಂತ್ರಜ್ಞಾನದಲ್ಲಿ ಸತತವಾಗಿ ಹೂಡಿಕೆ ಮಾಡುತ್ತವೆ. ಕರಾವಳಿ ಕರ್ನಾಟಕ, ಉತ್ತರ ಕೇರಳ ಮತ್ತು ಗಲ್ಫ್ ಪ್ರದೇಶಗಳ ನಮ್ಮ ವೈವಿಧ್ಯಮಯ ರೋಗಿಗಳ ನೆಲೆಯನ್ನು ಗಮನಿಸಿದರೆ, ವಿಶ್ವ ದರ್ಜೆಯ ಕ್ಲಿನಿಕಲ್ ಸೇವೆಗಳನ್ನು ಒದಗಿಸುವುದು ನಮ್ಮ ಬದ್ಧತೆಯಾಗಿದೆ. ನಮ್ಮ ಆಸ್ಪತ್ರೆಯಲ್ಲಿ ಆರೋಗ್ಯ ರಕ್ಷಣೆಗಾಗಿ ಸುಧಾರಿತ 3ಡಿ ಡಿಸೈನ್ ಮತ್ತು ಪ್ರಿಂಟಿಂಗ್ ಉಪಕರಣಗಳ ಬಿಡುಗಡೆಯನ್ನು ಘೋಷಿಸಲು ನಾನು ಸಂತೋಷಪಡುತ್ತೇನೆ- ಈ ಪ್ರದೇಶದಲ್ಲಿ ಇದೇ ಮೊದಲನೆಯದಾಗಿದೆ. ಈ ಕ್ರಾಂತಿಕಾರಿ ತಂತ್ರಜ್ಞಾನವು ನಮ್ಮನ್ನು ಮುಂದಕ್ಕೆ ಕೊಂಡೊಯ್ಯುವುದು ಮಾತ್ರವಲ್ಲದೆ ನಮ್ಮ ಜನರಿಗೆ ಉನ್ನತ ಮಟ್ಟದ ಆರೈಕೆ, ವೈಯಕ್ತೀಕರಿಸಿದ ಪರಿಹಾರಗಳು ಮತ್ತು ಪ್ರಮುಖ ವೈದ್ಯಕೀಯ ಪ್ರಗತಿಯನ್ನು ಒದಗಿಸುವ ನಮ್ಮ ಸಮರ್ಪಣೆಯನ್ನು ತೋರಿಸುತ್ತದೆ” ಎಂದು ಹೇಳಿದರು.

ಈ ಸಂದರ್ಭದಲ್ಲಿ CTARSನ ನಿರ್ದೇಶಕರಾದ ಡಾ.ಎನ್. ಜಾನ್ ನೇಸನ್, ಕೆಎಂಸಿ ಆಸ್ಪತ್ರೆ ಮಂಗಳೂರಿನ ಕನ್ಸಲ್ಟೆಂಟ್ ಓರಲ್ ಮತ್ತು ಮ್ಯಾಕ್ಸಿಲೊಫೇಶಿಯಲ್ ಸರ್ಜನ್ ಡಾ.ಅಭಯ್ ಕಾಮತ್, ಕೆಎಂಸಿ ಆಸ್ಪತ್ರೆಯ ಕನ್ಸಲ್ಟೆಂಟ್ – ಆರ್ಥೋಪಿಡಿಷಿಯನ್ ಡಾ.ಆತ್ಮಾನಂದ ಹೆಗ್ಡೆ, ಕೆಎಂಸಿ ಆಸ್ಪತ್ರೆ ಮಂಗಳೂರಿನ ಕಾರ್ಡಿಯೋಥೋರಾಸಿಕ್ ವಾಸ್ಕ್ಯುಲಾರ್ ಸರ್ಜರಿಯ ಕನ್ಸಲ್ಟೆಂಟ್ ಡಾ. ಮಾಧವ್ ಕಾಮತ್ ಆರೋಗ್ಯ ರಕ್ಷಣೆಗಾಗಿ 3ಡಿ ವಿನ್ಯಾಸ ಮತ್ತು ಪ್ರಿಂಟಿಂಗ್ ಲ್ಯಾಬ್ ಕುರಿತ ತಾಂತ್ರಿಕ ಮಾಹಿತಿಗಳನ್ನು ನೀಡಿದರು.


Spread the love