ಮಕ್ಕಳನ್ನು ಮಕ್ಕಳ ಹಾಗೆ ನೋಡಿ ಹೆತ್ತವರಿಗೆ ಮಂಜುಳಾ ಸುಬ್ರಹ್ಮಣ್ಯ ಕರೆ

Spread the love

ಮಕ್ಕಳನ್ನು ಮಕ್ಕಳ ಹಾಗೆ ನೋಡಿ ಹೆತ್ತವರಿಗೆ ಮಂಜುಳಾ ಸುಬ್ರಹ್ಮಣ್ಯ ಕರೆ

ಉದ್ಯಾವರ: ಇಂದು ನಾವೆಲ್ಲರೂ ಮಕ್ಕಳ ಬಾಲ್ಯವನ್ನು ಕಸಿಯುತ್ತಿದ್ದೇವೆ. ಅವರನ್ನು ಮಕ್ಕಳಾಗಳು ಬಿಡುತ್ತಿಲ್ಲ. ದೊಡ್ಡವರ ಹಾಗೆ ಮಕ್ಕಳನ್ನು ನಡೆಸಿಕೊಳ್ಳುತ್ತಿದ್ದೆವೆ. ಅವರು ಆದಷ್ಟು ಬೇಗ ದೊಡ್ಡವರಾಗ ಬೇಕು ಎಂಬುದು ಹೆತ್ತವರ ಆಸೆ. ಇದರಿಂದ ಮಕ್ಕಳ ಸೃಜನಶೀಲತೆ ಕುಂಠಿತವಾಗುತ್ತದೆ. ಹಾಗಾಗಿ ಮಕ್ಕಳನ್ನು ಮಕ್ಕಳ ಹಾಗೆ ನೋಡಿ ನಡೆಸಿ ಕೊಳ್ಳಿ. ಎಷ್ಟೋ ಹಿರಿಯರಲ್ಲಿ ನಾನು ಇದನ್ನು ಕಲಿಯಲಿಲ್ಲ , ಆದರೆ ನನ್ನ ಮಕ್ಕಳಾದರೂ ಕಲಿಯಲಿ ಎಂದು ಮಕ್ಕಳಿಗೆ ಕಲಿಸುವ ವ್ಯವಸ್ಥೆಯನ್ನು ಮಾಡುತ್ತಾರೆ. ಆದರೆ ಆ ಕಲಿಕೆ ಮಕ್ಕಳಿಗೆ ಇಷ್ಟವಿದೆಯೋ ಇಲ್ಲವೋ ಎಂದು ಯೋಚಿಸುವುದಿಲ್ಲ. ಮಕ್ಕಳಿಗೆ ಬೇಕಾದನ್ನು ಹೆತ್ತವರು ಮಕ್ಕಳಿಗೆ ಕೊಡಬೇಕೇ ವಿನಾಹ ತಮಗೆ ಬೇಕಾದಲ್ಲ. ಒಳ್ಳೆಯ ಸಂಸ್ಕಾರ ಎನ್ನೋದು ಹೇರಿಕೆ ಅಥವಾ ಕಲಿಕೆ ಯಿಂದ ಬರೂದಿಲ್ಲ ಅದು ಅಂತರಂಗದೊಳಗೆ ಹುಟ್ಟ ಬೇಕು. ನೃತ್ಯ ಸಂಗೀತ, ನಾಟಕ ಮೊದಲಾದ ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಮಕ್ಕಳು ತೊಡಗಿ ಕೊಂಡಾಗ ಒಳ್ಳೆಯ ಸಂಸ್ಕಾರ ಅವರಲ್ಲಿ ಮೂಡಿಬರುತ್ತದೆ. ಇದಕ್ಕೆ ಈ ಮಕ್ಕಳ ಹಬ್ಬದಂತಹ ಕಾರ್ಯಕ್ರಮ ಪೂರಕವಾಗಿದೆ.ಎಂದು ಭರತ ನಾಟ್ಯ ತಜ್ಞೆ, ರಂಗ ಕರ್ಮಿ ಶ್ರೀಮತಿ ಮಂಜುಳ ಸುಬ್ರಹ್ಮಣ್ಯ ಇವರು ಸೇವಾ ಮತ್ತು ಸಾಂಸ್ಕøತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಜವಾಹರ್ ಲಾಲ್ ನೆಹ್ರೂರವರ ಜನ್ಮದಿನದ ಪ್ರಯುಕ್ತ, ಮಕ್ಕಳ ದಿನಾಚರಣೆಯ ಅಂಗವಾಗಿ ಉದ್ಯಾವರ ಬಿಲ್ಲವ ಮಹಾಜನ ಸಂಘದ ಶ್ರೀ ವಿಠೋಬ ರುಖುಮಾಯಿ ನಾರಾಯಣಗುರು ಮಂದಿರದಲ್ಲಿ ಜರಗಿದ ಏಳನೇ ವರ್ಷದ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪೌಢ ಶಾಲಾ ವಿದ್ಯಾಥಿಗಳ ಸಾಮೂಹಿಕ ನೃತ್ಯ ಸ್ಪರ್ಧೆ “ ಯು.ಎಫ್.ಸಿ ಮಕ್ಕಳ ಹಬ್ಬ – 2016 ದ ಸಮಾರೋಪ ಸಮಾರಂಭದಲ್ಲಿ ಮಾಡಿದ ಸಮಾರೋಪ ಭಾಷಣದಲ್ಲಿ ನುಡಿದರು. ಅವರು ಮುಂದುವರಿಯುತ್ತಾ ನೃತ್ಯ ಮನಸ್ಸನ್ನು ಕೆರಳಿಸ ಬಾರದು, ಅರಳಿಸ ಬೇಕು. ನೃತ್ಯವನ್ನು ನಾವು ಆಸ್ವಾದಿಸ ಬೇಕು ವಿನಹಾ ಅದಕ್ಕೆ ಬಳಸುವ ಹಾಡನಲ್ಲ . ನೃತ್ಯ ಅನ್ನೋದು ಸಂಯೋಜಿತ ದೈಹಿಕ ಚಲನೆ, ಅದು ನೋಡುಗರನ್ನು ಆದ್ಯಾತ್ಮಿಕ ಮಟ್ಟಕ್ಕೆ ಕೊಂಡೊಯ್ಯೊಬೇಕು. ಅದರೆ ಇಂದು ನೃತ್ಯ ಮರೆಯಾಗಿ ನೃತ್ಯಕ್ಕೆ ಬಳಸುವ ಅಬ್ಬರ ಹಾಡು ಮೆರೆಯುತ್ತದೆ ಎಂದು ವಿಷಾದಿಸಿದರು.

ufc-makkala-habba-2016-3

ಅಧ್ಯಕ್ಷತೆಯನ್ನು ವಹಿಸಿದ ವಿದ್ಯಾಂಗ ಉಪನಿರ್ದೇಶಕರಾದ ದಿವಾಕರ ಶೆಟ್ಟಿ ಎಚ್ ಇವರು ಮಾತನಾಡುತ್ತಾ ಮಕ್ಕಳ ಪ್ರತಿಭೆಯನ್ನು ಅಡಗಿಸಿಡಲು ಯಾರಿಂದಲೂ ಸಾಧ್ಯವಿಲ್ಲ. ಅದು ಹೊರ ಹೊಮ್ಮಿಯೇ ಹೊಮ್ಮುತ್ತದೆ. ಅದಕ್ಕೆ ಇಂತಹಾ ಹಬ್ಬಗಳು ಪೂರಕವಾಗುತ್ತವೆ. ಇಂದು ಮಕ್ಕಳಿಗೆ ಬಾಲ್ಯ ಇರಲೇ ಬಾರದು ಎಂದು ನಾವು ಹೆತ್ತವರು ನಿರ್ಧರಿಸಿದ್ದೇವೆ ಮಗು ಹುಟ್ಟಿದ ಕೂಡಲೇ ಶಾಲೆಗೆ ದಾಖಲಿಸಲು ನಾವು ಸಿದ್ದರಿದ್ದೇವೆ. ನಮ್ಮ ಬಾಲ್ಯದಲ್ಲಿ ನಮ್ಮ ಹೆತ್ತವರು ಕೊಡುತ್ತಿದ್ದ , ನೀರಲ್ಲಾಡುವ, ಮಣ್ಣಲ್ಲಾಡುವ ಸಂತೋಷವನ್ನು ನಾವಿಂದು ಆರೋಗ್ಯದ ನೆಪದಲ್ಲಿ ನಮ್ಮ ಮಕ್ಕಳಿಗೆ ನಿರಾಕರಿಸುತ್ತದ್ದೇವೆ. ಇದು ದುರಂತ. ಕೆಲವು ಟಿವಿ ರಿಯಾಲಿಟಿ ಶೋಗಳಂತೂ ಮಕ್ಕಳ ಬಾಲ್ಯವನ್ನು ಕೊಲೆ ಮಾಡುತ್ತಾ ಇವೆ. ಆದರೆ ಅದು ನಮಗೆ ಗೊತ್ತಾಗ್ತಾಯಿಲ್ಲ. ಮಕ್ಕಳ ಸಮೇತ ನಾವು ನೋಡುತ್ತ ಸುಳ್ಳು ಸಂತೋಷವನ್ನು ಪಡೆಯುತ್ತಿದ್ದೇವೆ. ಈ ಬಗ್ಗೆ ನಾವು ಹೆತ್ತವರು ಜಾಗ್ರತೆವಹಿಸ ಬೇಕು ಎಂದರು

ಮುಖ್ಯ ಅತಿಥಿಗಳಾಗಿ ಆಗಮಿಸಿರುವ ಉಡುಪಿ ತುಳು ಕೂಟದ ಅದ್ಯಕ್ಷ  ಬಿ. ಜಯಕರ ಶೆಟ್ಟಿ ಇಂದ್ರಾಳಿ ಇವರು ಮಾತನಾಡುತ್ತಾ ಯು. ಎಫ್.ಸಿ ಯ ಸಾಮಾಜಿಕ ಕಾಳಜಿ ಮೆಚ್ಚ ತಕ್ಕ ಸಂಗತಿ. ಮಕ್ಕಳಿಗೆ ತಮ್ಮ ಸಂಸ್ಕøತಿಯನ್ನು ಪರಿಚಯಿಸುವ ಇಂತಹಾ ಹಬ್ಬವನ್ನು ಮಕ್ಕಳು ಸದುಪಯೋಗ ಪಡಿಸಿ ಕೊಳ್ಳ ಬೇಕು ಎಂದರು.

ಉದ್ಯಾವರ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳಾದ ಶ್ರೀ ರಮಾನಂದ ಪುರಾಣಿಕ್, ಉಡುಪಿ -ಇಂದ್ರಾಳಿ ಲಯನ್ಸ್ ಕ್ಲಬ್ ಅದ್ಯಕ್ಷರಾದ ಮಹಮ್ಮದ್ ಮೌಲ ಅತಿಥಿಗಳಾಗಿ ಆಗಮಿಸಿ ಸಂದರ್ಭೋಚಿತವಾಗಿ ಮಾತನಾಡಿದರು.

ವೇದಿಕೆಯಲ್ಲಿ ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಗಂಧಿ ಶೇಖರ್, ಉಪಾಧ್ಯಕ್ಷರಾದ ರಿಯಾಝ್ ಪಳ್ಳಿ ಉಪಶ್ಥಿತರಿದ್ದರು.
ಪ್ರಾರಂಭದಲ್ಲಿ ಸಂಸ್ಥೆಯ ಆದ್ಯಕ್ಷರಾದ ಯು. ಆರ್. ಚಂದ್ರಶೇಖರ್ ಸ್ವಾಗತಿಸಿದರು.ನಿರ್ದೇಶಕರಾದ ಉದ್ಯಾವರ ನಾಗೇಶ್ ಕುಮಾರ್ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು.  ತಿಲಕ್ ರಾಜ್ ಸಾಲ್ಯಾನ್ ವಂದಿಸಿದರು. ಹಿರಿಯ ಸದಸ್ಯ  ರಮೇಶ್ ಕುಮಾರ್ ಉದ್ಯಾವರ ಕಾರ್ಯಕ್ರಮ ನಿರ್ವಹಿಸಿದರು.


Spread the love