ಹೆತ್ತವರು ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿ – ಬೇಬಿ ಅದ್ವಿಕಾ ಶೆಟ್ಟಿ

Spread the love

ಹೆತ್ತವರು ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿ – ಬೇಬಿ ಅದ್ವಿಕಾ ಶೆಟ್ಟಿ

ಉದ್ಯಾವರ: ಪ್ರತಿಯೊಬ್ಬ ಮಗುವಿನಲ್ಲಿ ಯಾವುದಾದರೊಂದು ಪ್ರತಿಭೆ ಇಧ್ದೇ ಇದೆ . ಅದಕ್ಕೆ ಸರಿಯಾದ ಪ್ರೋತ್ಸಾಹ ದೊರೆತರೆ ಅದು ಹೊರ ಹೋಮ್ಮುತ್ತದೆ. ಇದಕ್ಕಿಂತ ಮೊದಲು ಪ್ರತಿಭೆಯನ್ನು ಗುರುತಿಸುವ ಕ್ರೀಯೆ ಜರಗ ಬೇಕು. ಇದನ್ನು ಮನಗಂಡು ಹೆತ್ತವರು ತಮ್ಮ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸ ಬೇಕು. ಜೀವನದಲ್ಲಿ ನೃತ್ಯ ಸಂಗೀತ ಇನ್ನಿತರ ಸಾಂಸ್ಕøತಿಕ ಕ್ಷೇತ್ರದಲ್ಲಿ ತೊಡಗಿಸಿ ಕೊಂಡ ವಿದ್ಯಾರ್ಥಿಗಳು ಅವರ ಮುಂದೆ ಬದುಕಿನಲ್ಲಿ ಬರುವ ಎಂತಹಾ ಸವಾಲುಗಳನ್ನು ಎದೆಗುಂದದೇ ಎದುರಿಸುತ್ತಾರೆ. ಇದು ಸಾಂಸ್ಕತಿಕ ಕ್ಷೇತ್ರದ ಶಕ್ತಿ ಎಂದು ಝೀ ಟಿವಿ ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಮತ್ತು ಕಲರ್ಸ್ ಕನ್ನಡ ಡ್ಯಾನ್ಸಿಂಗ್ ಸ್ಟಾರ್ ಪ್ರತಿಭೆ, ತುಳುವ ಸಿರಿ ಪ್ರಶಸ್ತಿ ಪುರಸ್ಕøತೆ ಬೇಬಿ ಅದ್ವಿಕಾ ಶೆಟ್ಟಿ ಇವರು ಸೇವಾ ಮತ್ತು ಸಾಂಸ್ಕøತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಜವಾಹರ್ ಲಾಲ್ ನೆಹ್ರೂರವರ ಜನ್ಮದಿನದ ಪ್ರಯುಕ್ತ, ಮಕ್ಕಳ ದಿನಾಚರಣೆಯ ಅಂಗವಾಗಿ ಉದ್ಯಾವರ ಬಿಲ್ಲವ ಮಹಾಜನ ಸಂಘದ ಶ್ರೀ ವಿಠೋಬ ರುಖುಮಾಯಿ ನಾರಾಯಣಗುರು ಮಂದಿರದಲ್ಲಿ ಜರಗಿದ ಏಳನೇ ವರ್ಷದ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪೌಢ ಶಾಲಾ ವಿದ್ಯಾಥಿಗಳ ಸಾಮೂಹಿಕ ನೃತ್ಯ ಸ್ಪರ್ಧೆ “ ಯು.ಎಫ್.ಸಿ ಮಕ್ಕಳ ಹಬ್ಬ – 2016 ದೀಪ ಬೆಳಗಿಸಿ ಉದ್ಘಾಟಿಸಿ ನುಡಿದರು. ಅವರು ಮುಂದುವರಿಯುತ್ತಾ ಪಲಿತಾಂಶ, ಅಂಕ ಮಾತ್ರ ಬದುಕಿನಲ್ಲಿ ಮಹತ್ತರ ಸ್ಥಾನ ಗಳಿಸುವುದಲ್ಲ ಕಲಾ ಮಾಧ್ಯಮ ಕೂಡಾ ವಿದ್ಯಾರ್ಥಿಗಳ ಬದುಕಲ್ಲಿ ಮಹತ್ತರವಾದ ಪಾತ್ರ ವಹಿಸುತ್ತದೆ. ಸಾಂಸ್ಕøತಿಕ ಕ್ಷೇತ್ರ ದಲ್ಲಿ ತೊಡಗಿಸಿ ಕೊಂಡ ವಿದ್ಯಾರ್ಥಿಗಳು ಕಲಿಕೆಯಲ್ಲೂ ಮುಂದಿರುತ್ತಾರೆ, ಅದು ಕಲಿಕೆಗೆ ಪೂರಕವಾಗುತ್ತದೆ ತೊಡಕಾಗುದಿಲ್ಲ ಎಂದರು.

ufc-makkala-habba-2016-0 ufc-makkala-habba-2016-1 ufc-makkala-habba-2016-2

ಅಧ್ಯಕ್ಷತೆ ವಹಿಸಿ ಕೊಂಡ ಮಾಜಿ ಸಚಿವರೂ ಕಾಪು ಶಾಸಕರಾದ ವಿನಯ ಕುಮಾರ್ ಸೊರಕೆಯವರು ಮಕ್ಕಳ ಕಲಾ ಪ್ರತಿಭೆಗಳು ವಿಕಾಸಗೊಳ್ಳಲು ಇಂತಾಹಾ ಮಕ್ಕಳ ಸಾಂಸ್ಕøತಿಕ ಹಬ್ಬ ಪೂರಕವಗಿದೆ. ನೆಹ್ರೂರವರ ಜನ್ಮದಿನದ ಹೆಸರಲ್ಲಿ ಜರಗುವ ಈ ಕಾರ್ಯಕ್ರಮ ಅರ್ಥಪೂಣವಾಗಿದೆ. ಇಂದು ಮಕ್ಕಳ ಹಬ್ಬವನ್ನು ಉಧ್ಘಾಟಿಸಿದ ಅಧ್ವಿಕಾಳ ಪ್ರತಿಭೆ ಹೊರ ಹೊಮ್ಮಲು ಅವರ ಹೆತ್ತವರು ಆಕೆಗೆ ಕೊಟ್ಟ ಪ್ರೋತ್ಸಾಹ ಮತ್ತು ಅವಕಾಶ ಮುಖ್ಯವಾಗಿದೆ. ಇದನ್ನು ಮಾದರಿಯಾಗಿಟ್ಟು ಕೊಂಡು ಹೆತ್ತವರು ಮಕ್ಕಳನ್ನು ಪ್ರೋತ್ಸಾಹಿಸಿ ಬೆಳೆಸ ಬೇಕು. ಆಗ ಮಾತ್ರ ನೆಹರೂರವರು ಮಕ್ಕಳಲ್ಲಿ ಕಂಡ ಭರವಸೆಯ ಭಾರತ ನಿರ್ಮಾಣವದೀತು ಎಂದು ನುಡಿದರು.

ಅತಿಥಿಗಳಾಗಿ ಉದ್ಯಾವರ ಗ್ರಾಮ ಪಂಚಾಯತ್ ಅದ್ಯಕ್ಷರಾದ ಶ್ರೀಮತಿ ಸುಗಂಧಿ ಶೇಖರ್, ಉಪಾದ್ಯಕ್ಷರಾದ ಶ್ರೀ ರಿಯಾಝ್ ಪಳ್ಳಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಶ್ರೀ ಗಿರೀಶ್ ಕುಮಾರ್ ಆಗಮಿಸಿದ್ದರು. ವೇದಿಕೆಯಲ್ಲಿ ಸಂಸ್ಥೆಯ ನಿರ್ದೇಶಕರುಗಳಾದ ಶ್ರೀಮತಿ ಚಂದ್ರಾವತಿ ಏಸ್. ಭಂಡಾರಿ, ಶರತ್ ಕುಮಾರ್, ಉಪಸ್ಥಿತರಿಧ್ದರು.

ಉದ್ಘಾಟಕಿ ಕು| ಅದ್ವಿಕಾ ಶೆಟ್ಟಿ ಯವರನ್ನು ಶಾಸಕ ಶ್ರೀ ವಿನಯ ಕುಮಾರ್ ಸೊರಕೆಯವರು ಸಂಸ್ಥೆಯ ಮತ್ತು ಮಕ್ಕಳ ಪರವಾಗಿ ಸಂಮಾನಿಸಿದರು,

ಪ್ರಾಂರಭದಲ್ಲಿ ಸಂಸ್ಥೆಯ ಆದ್ಯಕ್ಷರಾದ ಶ್ರೀ ಯು. ಆರ್. ಚಂದ್ರಶೇಖರ್ ಸ್ವಾಗತಿಸಿದರು.ನಿರ್ದೇಶಕರಾದ ಉದ್ಯಾವರ ನಾಗೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾಂiÀರ್iದರ್ಶಿ ಶ್ರೀ ತಿಲಕ್ ರಾಜ್ ಸಾಲ್ಯಾನ್ ವಂದಿಸಿದರು. ಹಿರಿಯ ಸದಸ್ಯ ಶ್ರೀ ರಮೇಶ್ ಕುಮಾರ್ ಉದ್ಯಾವರ ಕಾರ್ಯಕ್ರಮ ನಿರ್ವಹಿಸಿದರು.

ಸಮಾರಂಭಕ್ಕೆ ಮುನ್ನ ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕಾ ಶಾಲೆ ಬಳಿಯಿಂದ ಸಮಾರಂಭದ ಸ್ಥಳಕ್ಕೆ ಮಕ್ಕಳ ವರ್ಣರಂಜಿತ ಮೆರವಣಿಗೆ ಜರಗಿತು, ಸಮಾರಂಭದ ನಂತರ ಉದ್ಘಾಟಕಿ ಕು| ಅದ್ವಿಕಾ ಶೆಟ್ಟಿಯವರು ಒಂದು ನೃತ್ಯ ಪ್ರದರ್ಶಿಸಿ ಮಕ್ಕಳನ್ನು ರಂಜಿಸಿದರು.


Spread the love