ಮಕ್ಕಳ ಬದುಕು ಅರಳಲು ತಾಯಿಯೇ ಕಾರಣ  – ಜನಾರ್ದನ ಗೌಡ

Spread the love

ಮಕ್ಕಳ ಬದುಕು ಅರಳಲು ತಾಯಿಯೇ ಕಾರಣ  – ಜನಾರ್ದನ ಗೌಡ

ಮಂಗಳೂರು : ಮಕ್ಕಳ ಬದುಕು ರೂಪಿಸುವಲ್ಲಿ ತಾಯಿಯ ಪಾತ್ರ ಬಹಳ ಮುಖ್ಯವಾದುದು. ಈ ಮಹತ್ವದ ಪಾತ್ರವನ್ನು ನಮ್ಮ ಜನಪದ ಸಾಹಿತ್ಯದ ಮೂಲಕ ಅನಾದಿ ಕಾಲದಿಂದಲೂ ನಾವು ಅರಿತಿದ್ದು, ಇಂದಿಗೂ ಅದು ಪ್ರಸ್ತುತ ಎಂದು ಜಿಲ್ಲಾ ಪಂಚಾಯತ್‍ನ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಜನಾರ್ದನ ಗೌಡ ಹೇಳಿದರು.

ಅವರಿಂದು ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ ಪ್ರತಿಭಾವಂತ ಹೆಣ್ಣು ಮಕ್ಕಳಿಗೆ ಹಾಗೂ ಅತ್ಯುತ್ತಮ ಸಾಧನೆಗೈದ ಸರಕಾರಿ ಪ್ರೌಢಶಾಲೆಗಳಿಗೆ ಪುರಸ್ಕಾರ, ಮಕ್ಕಳ ದಿನಾಚರಣೆ ಮತ್ತು ಚೈಲ್ಡ್ ಲೈನ್ ಜತೆ ದೋಸ್ತಿ ಸಪ್ತಾಹ ಉದ್ಘಾಟನೆ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.

ಹೆಣ್ಣು ಮಕ್ಕಳನ್ನು ರಕ್ಷಿಸಿ, ಶಿಕ್ಷಣ ಕೊಡಿಸಿ ಎಂಬ ಆಂದೋಲನ ಸಮಾಜದಲ್ಲಿ ಇನ್ನಷ್ಟು ಸಮಾನತೆ ಹಾಗೂ ಸಕಾರಾತ್ಮಕ ಚಿಂತನೆಯತ್ತ ಕೊಂಡೊಯ್ಯಲು ನೆರವಾಗಲಿದೆ ಎಂದರು. ಬುಡಕಟ್ಟು ಜನಾಂಗದಲ್ಲಿ ಸ್ತ್ರೀಯರಿಗೆ ಬಾಲ್ಯದಿಂದಲೇ ಮಹತ್ವದ ಸ್ಥಾನವನ್ನು ನೀಡಲಾಗಿದೆ. ಇಲ್ಲಿ ಸ್ತೀ ಪ್ರಧಾನ ಭೂಮಿಕೆಯಲಿದ್ದಾಳೆಂಬುದು ನನ್ನ ಅಭಿಪ್ರಾಯ ಎಂದರು. ಇಂದಿನ ಕಾರ್ಯಕ್ರಮದಿಂದಾಗಿ ಲಿಂಗಾನುಪಾತ ತಡೆಗೆ ಹೆಚ್ಚಿನ ಒತ್ತು ದೊರೆಯಲಿ ಎಂದರು.

ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸ್ಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ 21 ಮಂದಿ ಹೆಣ್ಣು ಮಕ್ಕಳಿಗೆ ಹಾಗೂ ಪಿಯುಸಿಯ 30 ವಿದ್ಯಾರ್ಥಿನಿಯರಿಗೆ ತಲಾ 5000 ರೂ. ಪೆÇ್ರೀತ್ಸಾಹ ಧನ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು. 24 ಸರಕಾರಿ ಪ್ರೌಢಶಾಲೆಗಳಿಗೆ ತಲಾ 10,000 ರೂ. ಪೆÇ್ರೀತ್ಸಾಹಧನ ಹಾಗೂ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿ ಯೋಜನೆಯಡಿ ಅಸಾಧಾರಣ ಪ್ರತಿಭೆ ಪ್ರದರ್ಶಿಸಿದ ಜಿಲ್ಲೆಯ 12 ಮಂದಿ ವಿದ್ಯಾರ್ಥಿಗಳಿಗೆ ತಲಾ 10,000 ರೂ. ನಗದು ಹಾಗೂ ಪ್ರಮಾಣ ಪತ್ರವನ್ನು ವಿತರಿಸಲಾಯಿತು.

ಇದೇ ವೇಳೆ ಹೆಣ್ಣು ಮಕ್ಕಳನ್ನು ರಕ್ಷಿಸಿ, ಹೆಣ್ಣು ಮಗುವನ್ನು ಓದಿಸಿ ಕರಪತ್ರ ಬಿಡುಗಡೆ ಮಾಡಲಾಯಿತು. ಗುಡ್ಡಾ ಗುಡ್ಡಿ ಫಲಕ ಅನಾವರಣ, ಮಮತೆಯ ತೊಟ್ಟಿಲು ಭಿತ್ತಿಪತ್ರವನ್ನು ಬಿಡುಗಡೆ ಮಾಡಲಾಯಿತು.

ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಲ್ಲನ ಗೌಡ ಪಾಟೀಲ್, ಮಂಗಳೂರು ತಾ.ಪಂ. ಅಧ್ಯಕ್ಷ ಮುಹಮ್ಮದ್ ಮೋನು, ಡಿಡಿಪಿಐ ಶಿವರಾಮಯ್ಯ, ಶಿಕ್ಷಣಾಧಿಕಾರಿ ಜ್ಞಾನೇಶ್, ಡಾ. ಅರುಣ್ ಕುಮಾರ್, ಮಕ್ಕಳ ರಕ್ಷಣಾಧಿಕಾರಿ ಉಸ್ಮಾನ್, ಉಪಕಾರ್ಯದರ್ಶಿ ಎ.ವಿ. ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕ ಸುಂದರ ಪೂಜಾರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.


Spread the love