ಮಗಳನ್ನೇ ವೇಶ್ಯಾವಾಟಿಕೆ ಕೂಪಕ್ಕೆ ದೂಡಿದ ತಂದೆ! ಮಂಗಳೂರಿನ ದಂಧೆಯ ಕಿಂಗ್ ಪಿನ್ ಭರತ್ ಶೆಟ್ಟಿ ಸಹಿತ ಮೂವರ ಬಂಧನ!

Spread the love

ಮಗಳನ್ನೇ ವೇಶ್ಯಾವಾಟಿಕೆ ಕೂಪಕ್ಕೆ ದೂಡಿದ ತಂದೆ! ಮಂಗಳೂರಿನ ದಂಧೆಯ ಕಿಂಗ್ ಪಿನ್ ಭರತ್ ಶೆಟ್ಟಿ ಸಹಿತ ಮೂವರ ಬಂಧನ!

ಚಿಕ್ಕಮಗಳೂರು: ಹಣದಾಸೆಗೆ ತಂದೆಯೇ ತನ್ನ ಅಪ್ರಾಪ್ತ ಮಗಳನ್ನೇ ವೇಶ್ಯಾವಾಟಿಕೆ ದಂಧೆಗೆ ನೂಕಿದ ಕ್ರೂರ ಘಟನೆ ಚಿಕ್ಕಮಗಳೂರು ಜಿಲ್ಲೆಯ ಬೀರೂರಿನಲ್ಲಿ ನಡೆದಿದೆ. ಈ ಘಟನೆಯಲ್ಲಿ ಮಾಂಸ ದಂಧೆಯ ‘ಕಿಂಗ್‌ಪಿನ್’ ಎಂದೇ ಕರೆಸಿಕೊಳ್ಳುವ ಭರತ್ ಶೆಟ್ಟಿ ಸೇರಿ ಒಟ್ಟು 12 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ದಿನಕ್ಕೆ 5 ಸಾವಿರ ರೂಪಾಯಿ ಸಿಗುತ್ತೆ ಅಂತ ಹೆತ್ತ ಮಗಳನ್ನೇ ದಂಧೆಗೆ ಒಪ್ಪಿಸಿದ್ದಾನೆ ಎನ್ನಲಾಗಿದೆ. ತಾಯಿಯನ್ನು ಕಳೆದುಕೊಂಡು ಸಂಬಂಧಿಕರ ಮನೆಯಲ್ಲಿದ್ದ ಅಪ್ರಾಪ್ತ, PUC ವರೆಗೂ ವಿದ್ಯಾಭ್ಯಾಸ ಮುಗಿಸಿದ ನಂತರ ತಂದೆ ಮನೆಗೆ ಮರಳಿದ್ದಳು. ಈ ವೇಳೆ ಡಿಸೆಂಬರ್‌ನಲ್ಲಿ ತಂದೆಯೊಂದಿಗೆ ಅಜ್ಜಿಯ ಮನೆಗೆ ಹೋಗಿ 2 ದಿನ ಉಳಿದು ಬಂದಿದ್ದಳು. ಆದರೆ ಅಜ್ಜಿ ಕರೆದಿದ್ದಾರೆ ಅಂತ ಆಕೆಯ ಮನೆಗೆ ಹುಡುಗಿ ಹೋಗಿದ್ದ ವೇಳೆ ಅಜ್ಜಿಯ ಮನೆಗೆ ಬಂದಿದ್ದ ಭರತ್ ಶೆಟ್ಟಿ ಎಂಬಾತ ತಂದೆ-ಮಗಳೊಡನೆ ಸಲುಗೆ ಬೆಳೆಸಿ, ಆತನ ಮನೆಗೆ ಬಂದು ಇರುವಂತೆಯೂ ತಿಳಿಸಿದ್ದ.

ಇದಕ್ಕೊಪ್ಪಿದ್ದ ತಂದೆ ಮಗಳಿಬ್ಬರೂ ಭರತ್‌ನೊಂದಿಗೆ ಮಂಗಳೂರಿಗೆ ತೆರಳಿದ್ದರು. ಮಾರ್ಗ ಮಧ್ಯದಲ್ಲಿ ತಾನು ಮುಟ್ಟಾಗಿರುವುದಾಗಿ ತಂದೆಗೆ ತಿಳಿಸಿದ್ದಳು. ಅದರೂ ಮರುದಿನ ಭರತ್ ಶೆಟ್ಟಿ ಆಕೆಯ ಬಳಿ ಬಂದು, 4-5 ಜನ ಬರುತ್ತಾರೆ ಅವರೊಂದಿಗೆ ದೈಹಿಕ ಸಂಪರ್ಕ ಬೆಳೆಸಲು ಒತ್ತಾಯಿಸಿದ್ದನಂತೆ. ನಂತರ 20 ರಿಂದ 45 ವರ್ಷ ವಯಸ್ಸಿನ ನಾಲ್ವರು ಒಬ್ಬರಾದ ಮೇಲೊಬ್ಬರಂತೆ ಆಕೆಯನ್ನು ಲೈಂಗಿಕವಾಗಿ ಶೋಷಿಸಿದ್ದರು. ಇದಾದ ಮರುದಿನವೂ ಹುಡುಗಿ ನಿರಾಕರಿಸಿದರೂ ಈ ಕ್ರೂರ ಕೃತ್ಯ ಪುನರಾವರ್ತಿತವಾಯಿತು. “ನಾನು ಅಪ್ರಾಪ್ತ, ನನ್ನನ್ನು ಬಿಡಿ” ಎಂದು ಬಾಲಕಿ ಅಂಗಲಾಚಿದರೂ, “ನಾವು ಭರತ್‌ಗೆ ಹಣ ಕೊಟ್ಟಿದ್ದೇವೆ” ಎಂದು ಹೇಳಿ ಆರೋಪಿಗಳು ಅವಳ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಬಾಲಕಿ ನೀಡಿದ ದೂರಿನ ಮೇರೆಗೆ ಪೊಲೀಸರು FIR ದಾಖಲಿಸಿ, ಬಾಲಕಿಯ ತಂದೆ, ಅಜ್ಜಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮಾಂಸ ದಂಧೆಯ ಕಿಂಗ್‌ಪಿನ್ ಎನ್ನಲಾಗಿರುವ ಭರತ್ ಶೆಟ್ಟಿ ಸೇರಿದಂತೆ ಒಟ್ಟು 12 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಭರತ್ ಶೆಟ್ಟಿಯ ವಿರುದ್ಧ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ವೇಶ್ಯಾವಾಟಿಕೆ ಸಂಬಂಧಿತ 8 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇನ್ನಷ್ಟು ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments