ಮತದಾನದಿಂದ ಮಾತ್ರ ಪ್ರಜಾಪ್ರಭುತ್ವದ ಮೂಲ ಆಶಯಗಳು ಕೈಗೂಡಲು ಸಾಧ್ಯ – ಡಾ.ಅಪ್ಪಾಜಿಗೌಡ

Spread the love

ಮತದಾನದಿಂದ ಮಾತ್ರ ಪ್ರಜಾಪ್ರಭುತ್ವದ ಮೂಲ ಆಶಯಗಳು ಕೈಗೂಡಲು ಸಾಧ್ಯ – ಡಾ.ಅಪ್ಪಾಜಿಗೌಡ  

ಮಂಗಳೂರು : ಕರ್ನಾಟಕ ಸರ್ಕಾರ, ಚುನಾವಣಾ ಆಯೋಗ, ಕಾಲೇಜು ಶಿಕ್ಷಣ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಡಾ.ಪಿ.ದಯಾನಂದ ಪೈ-ಪಿ.ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ- 2019 ರ ಕಾರ್ಯಕ್ರಮದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪದವಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಮತದಾರರ ಅರಿವು ಹಾಗೂ ಕನ್ನಡ ಮತ್ತು ಇಂಗ್ಲೀಷ್ ಪ್ರಬಂಧ ಸ್ಫರ್ಧೆ, ರಸಪ್ರಶ್ನೆ ಹಾಗೂ ನಾಟಕ ಸ್ಫರ್ಧಾ ಕಾರ್ಯಕ್ರಮವನ್ನು ನಡೆಸಲಾಯಿತು.

ಈ ಕಾರ್ಯಕ್ರಮವನ್ನು ಮಂಗಳೂರುವಲಯ ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕ ಡಾ. ಅಪ್ಪಾಜಿಗೌಡ ಎಂ.ಜೆ, ಇವರು ಉದ್ಘಾಟಿಸಿ ಮಾತನಾಡಿ “ಮತದಾನ ಪ್ರತಿಯೊಬ್ಬ ಭಾರತೀಯನ ಮೂಲಭೂತ ಕರ್ತವ್ಯ ಇದನ್ನು ನಿಭಾಯಿಸಿದಲ್ಲಿ ಮಾತ್ರ ಪ್ರಜಾಪ್ರಭುತ್ವದ ಮೂಲ ಆಶಯಗಳು ಕೈಗೂಡಲು ಸಾಧ್ಯ ಹಾಗೂ ಮತದಾನ ನಮ್ಮ ಹಕ್ಕು ಅದನ್ನು ಚಲಾಯಿಸುವುದರ ಮೂಲಕ ಯುವ ಜನಾಂಗ, ಅದರಲ್ಲೂ ಮೊಟ್ಟಮೊದಲ ಬಾರಿಗೆ ಮತದಾನ ಮಾಡುವವರು ಕಡ್ಡಾಯವಾಗಿ ಮತದಾನ ಮಾಡಿ ದೇಶದ ಪ್ರಜಾಪ್ರಾತಿನಿಧಿಕ ನಿರ್ಣಯಗಳಲ್ಲಿ ಬಾಗಿಯಾಗಿ ದೇಶದ ಕಟ್ಟುವ ಕಾರ್ಯದಲ್ಲಿ ತೊಡಗಿಕೊಳ್ಳಬೇಕೆಂದು” ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರು ರಾಜಶೇಖರ ಹೆಬ್ಬಾರ್ ಸಿ ಅವರು ಮತದಾನ ಅರಿವು ಕಾರ್ಯಕ್ರಮದ ಪ್ರಾಮುಖ್ಯತೆಯನ್ನು ವಿವರಿಸಿ “ಮತದಾನ ನಮ್ಮ ಜನ್ಮಸಿದ್ಧ ಹಕ್ಕಾಗಿದ್ದು ಆ ಪವಿತ್ರ ಕಾರ್ಯದಲ್ಲಿ ಎಲ್ಲಾರೂ ಪಾಲ್ಗೊಂಡು ಪ್ರಸ್ತುತ ನಶಿಸುತ್ತಿರುವ ಪ್ರಜಾಪ್ರಭುತ್ವ ಮೌಲ್ಯಗಳನ್ನು ಕಾಪಾಡಲು ಶ್ರಮವಹಿಸಬೇಕೆಂದು” ಹೇಳಿದರು.

ಕಾಲೇಜಿನ ಉಪಪ್ರಾಂಶುಪಾಲರಾದ ಡಾ.ಶಿವರಾಂ ಪಿ, ಕಲ್ಯಾಣಾಧಿಕಾರಿ ಡಾ. ಜಯಕರ ಭಂಡಾರಿ, ಕಾರ್ಯಕ್ರಮದ ಸಂಯೋಜಕಿ ಡಾ.ಶರ್ಮಿಳಾ ರೈ ಬಿ ಹಾಗೂ ಇತರರು ಭಾಗವಹಿಸಿದ್ದರು. ವಿಜೇತರಿಗೆ ಕಾಲೇಜಿನ ಪ್ರಾಂಶುಪಾಲರು ಬಹುಮಾನ ವಿತರಿಸಿ ಶುಭ ಹಾರೈಸಿದರು.


Spread the love