ಮತದಾನದ ಮೂಲಕ ರಾಷ್ಟ್ರಸೇವೆಯ ಅವಕಾಶ – ಸುಧಾಕರ.ಕೆ.

Spread the love

ಮತದಾನದ ಮೂಲಕ ರಾಷ್ಟ್ರಸೇವೆಯ ಅವಕಾಶ – ಸುಧಾಕರ.ಕೆ.

ಮಂಗಳೂರು: ಜನವರಿ 20 ರಂದು ತಾಲೂಕು ಪಂಚಾಯತ್, ಸಭಾಂಗಣ ಬೆಳ್ತಂಗಡಿ ಇಲ್ಲಿ ಬೆಳ್ತಂಗಡಿ ತಾಲೂಕಿನ ಗ್ರಾಮ ಪಂಚಾಯತ್ ಪ್ರೇರಕರಿಗಾಗಿ, ಮತದಾರರ ಸೇರ್ಪಡೆ, ತಿದ್ದುಪಡಿ, ಹಾಗೂ ಮತದಾನ ಪ್ರಕ್ರಿಯೆಯಲ್ಲಿ ಮತದಾರರ ಸಕ್ರೀಯ ಭಾಗವಹಿಸುವಿಕೆ ಕುರಿತು ಪ್ರೇರಣಾ ಕಾರ್ಯಾಗಾರ ಏರ್ಪಡಿಲಾಯಿತು.

ಸದ್ರಿ ಸಭೆಯಲ್ಲಿ ಜಿಲ್ಲಾ ಸ್ವೀಪ್ ಸಮಿತಿಯ ಕಾರ್ಯದರ್ಶಿ/ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಸುಧಾಕರ.ಕೆ. ಇವರು ಪ್ರೇರಕರಿಗೆ ಮತದಾರರ ಸೇರ್ಪಡೆ ಹಾಗೂ ಮತದಾರರ ಪಾಲ್ಗೊಳ್ಳುವಿಕೆ ಕುರಿತು ವಿವರವಾದ ಮಾಹಿತಿ ನೀಡಿದರು. ಮತದಾನ, ರಾಷ್ಟ್ರ ಸೇವೆಯ ಒಂದು ಸಾಧನ. ಎಲ್ಲಾ ಜನರು ಈ ರಾಷ್ಟ್ರ ನಿರ್ಮಾಣದ ಮಹಾಕಾರ್ಯದಲ್ಲಿ ತೊಡಗಿಸಿಕೊಂಡಾಗ ನಮ್ಮ ಸುಂದರ ದೇಶ ಬಲಿಷ್ಠ ರಾಷ್ಟ್ರವಾಗಿ ತಲೆ ಎತ್ತಿ ನಿಲ್ಲಬಲ್ಲದು ಎಂದು ನುಡಿದರು. ಎಲ್ಲಾ ಪ್ರೇರಕ ಬಂಧುಗಳು ಇಂದಿನಿಂದಲೇ ತಮ್ಮ ವ್ಯಾಪ್ತಿಯಲ್ಲಿ ಇರುವ ನೂತನ ಮತದಾರರ ಸೇರ್ಪಡೆ ಕಾರ್ಯಕ್ಕೆ ತೊಡಗುವಂತೆ ಕರೆ ನೀಡಿದರು. ದಿನಾಂಕ 22.1.2018ರ ವರೆಗೆ ಗರಿಷ್ಠ ಮಟ್ಟದಲ್ಲಿ ಹೆಸರು ನೋಂದಣಿ ಹಾಗೂ ಅಗತ್ಯ ತಿದ್ದುಪಡಿಗಳಿಗೆ ಬೇಕಾದ ನಮೂನೆಗಳನ್ನು ಬಿ.ಎಲ್.ಒ.ಗಳಿಂದ ಪಡೆದು ಈ ಅಭಿಯಾನವನ್ನು ಹೊಸ ಎತ್ತರಕ್ಕೆ ಏರಿಸುವಲ್ಲಿ ಪ್ರೇರಕರು ತಮ್ಮ ಕೊಡುಗೆ ನೀಡುವಲ್ಲಿ ಮುಂದೆ ಬರಬೇಕು ಎಂದು ನುಡಿದರು.

ಬೆಳ್ತಂಗಡಿ ತಾಲೂಕು ಪಂಚಾಯತ್ ವ್ಯವಸ್ಥಾಪಕರು ಹಾಜರಿದ್ದರು. ನರೇಗಾದ ಸಂಯೋಜಕ ಜಯಾನಂದ ಪ್ರೇರಕರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ವಯಸ್ಕರ ಶಿಕ್ಷಣಾಧಿಕಾರಿ ಕಛೇರಿಯ ಕಾರ್ಯಕ್ರಮ ಸಹಾಯಕಿ ಭಾಗೀರಥಿ.ರೈ. ಇವರು ವಂದಿಸಿದರು. ಎಂದು ಕಾರ್ಯದರ್ಶಿ, ಸ್ವೀಪ್ ಸಮಿತಿ ಹಾಗೂ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ, ದ.ಕ ಜಿಲ್ಲಾ ಪಂಚಾಯತ್, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.


Spread the love