ಮರಳುಗಾರಿಕೆ ನಿಷೇಧಕ್ಕೆ ಕೇಂದ್ರ ಸರಕಾರ ಹಾಗೂ ಸಂಸದೆ ಶೋಭಾ ನೇರ ಕಾರಣ – ಪ್ರಮೋದ್ ಮಧ್ವರಾಜ್

Spread the love

ಮರಳುಗಾರಿಕೆ ನಿಷೇಧಕ್ಕೆ ಕೇಂದ್ರ ಸರಕಾರ ಹಾಗೂ ಸಂಸದೆ ಶೋಭಾ ನೇರ ಕಾರಣ – ಪ್ರಮೋದ್ ಮಧ್ವರಾಜ್

ಕಾರ್ಕಳ: ನನಗೆ ಓಟಿಗೋಸ್ಕರ ಸುಳ್ಳು ಹೇಳುವ ಅನಿವಾರ್ಯತೆ ಇಲ್ಲ ಜನರೊಂದಿಗೆ ನಿರಂತರವಾಗಿ ಇರುವ ಸಂಸದರು ಬೇಕಾ ಅಥವಾ ಅಪರೂಪಕಕ್ಕೆ ಬಂದು ಹೋಗುವ ಸಂಸದರು ಬೇಕಾ ಎನ್ನುವುದನ್ನು ಈ ಬಾರಿಯ ಚುನಾವಣೆಯಲ್ಲಿ ಮತದಾರರು ಅರಿತು ಮತದಾನ ಮಾಡಬೇಕು. ಸಂಸದನಾಗಿ ಗೆದ್ದಲ್ಲಿ 5 ವರ್ಷಗಳ ಕಾಲ ಜನರ ಸೇವಕನಾಗಿ ಕೆಲಸ ಮಾಡುತ್ತೇನೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಹೇಳಿದರು.

ಅವರು ಬುಧವಾರ ಹೆಬ್ರಿಯ ಚೈತನ್ಯ ಯುವ ವೃಂದದ ಸಭಾಂಗಣದಲ್ಲಿ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಜೆ ಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ತಾನು ಸಚಿವನಾಗಿದ್ದ ವೇಳೆ ಉಡುಪಿ ಕ್ಷೇತ್ರದ ಮಟ್ಟಿಗೆ ಸ್ವಾರ್ಥಿಯಾಗಿದ್ದರೆ, ಮುಂದೆ ಲೋಕಸಭಾ ಅಭ್ಯರ್ಥಿಯಾದರೆ ಲೋಕಸಭಾ ಕ್ಷೇತ್ರದ ಮಟ್ಟಿಗೆ ಸ್ವಾರ್ಥಿಯಾಗಿ ಜನಸೇವೆ ಮಾಡಲಿದ್ದೇನೆ ಎಂದ ಪ್ರಮೋದ್ ಉಡುಪಿ ಜಿಲ್ಲೆಯಲ್ಲಿ ಮರಳು ಸಮಸ್ಯೆಗೆ ಸಂಸದೆ ಶೋಭಾ ಕರಂದ್ಲಾಜೆಯವರ ವೈಫಲ್ಯವೇ ಕಾರಣ. ಕೇಂದ್ರ ಸರಕಾರದ ಕಠಿಣ ಮರಳು ನೀತಿಯಿಂದ ನಮ್ಮ ಜಿಲ್ಲೆಗೆ ಸಮಸ್ಯೆಯಾಗಿದ್ದ ಇದರ ಬಗ್ಗೆ ಸಂಸದೆಯವರು ಮಾತನಾಡುತ್ತಿಲ್ಲ ಎಂದರು.

ಕೇಂದ್ರದ ಅರಣ್ಯ ಪರಿಸರ ಸಚಿವ ಪ್ರಕಾಶ ಜಾವ್ಡೆಕರ್, ಕುದುರೆಮುಖ ಸೇರಿ ದೇಶದಲ್ಲಿ 45 ಕಡೆ ಹುಲಿ ಯೋಜನೆ ಜಾರಿಗೋಳಿಸುವಾಗ ಸಂಸದರಾದ ಶೋಭಾ ಕರಂದ್ಲಾಜೆ ಹಾಗೂ ನಳಿನ್ ಕುಮಾರ್ ಕಟೀಲ್ ಮೌನವಾಗಿದ್ದರ ಪರಿಣಾಮ ಹುಲಿ ಯೋಜನೆ ಜಾರಿಯಾಗಿದೆ. ಕರ್ನಾಟಕದಲ್ಲಿ ಕಸ್ತೂರಿ ರಂಗನ್ ವರದಿಯ ಅನುಷ್ಠಾನ ಆಗಬಾರದು ಎಂಬ ನಿಟ್ಟಿನಲ್ಲಿ ಮೂರು ಬಾರಿ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ವರದಿ ನೀಡಿದರೂ ನರೇಂದ್ರ ಮೋದಿ ನೇತೃತ್ವದ ಕೇಂದರ ಸರಕಾರ ಕಿವಿಗೊಡುತ್ತಿಲ್ಲ ಎಂದು ಕಾರ್ಕಳದ ಮಾಜಿ ಶಾಸಕ ಗೋಪಾಲ ಭಂಡಾರಿ ಹೇಳಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಯೋಗಿಶ್ ಶೆಟ್ಟಿ, ಕೆಪಿಸಿಸಿ ಕಾರ್ಯದರ್ಶಿ ಭರತ್ ಮುಂಡೋಡಿ, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಉಪಸ್ಥಿತರಿದ್ದರು.


Spread the love