ಮಲ್ಪೆ ಕೊಳ ₹ 25 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ಯಶ್ಪಾಲ್ ಸುವರ್ಣ ಚಾಲನೆ

Spread the love

ಮಲ್ಪೆ ಕೊಳ ₹ 25 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ಯಶ್ಪಾಲ್ ಸುವರ್ಣ ಚಾಲನೆ

ಉಡುಪಿ:  ನಗರಸಭೆಯ ಕೊಳ ವಾರ್ಡಿನಲ್ಲಿ ನಗರಸಭೆಯ ಅನುದಾನದಿಂದ ₹25 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಶ್ರೀರಾಮ 1 ನೇ ಅಡ್ಡ ರಸ್ತೆಯ ಕಾಂಕ್ರೀಟಿಕರಣ ಕಾಮಗಾರಿಗೆ ಉಡುಪಿ ಶಾಸಕರಾದ   ಯಶಪಾಲ್ ಸುವರ್ಣ ಗುದ್ದಲಿಪೂಜೆ ನೆರವೇರಿಸಿ ಚಾಲನೆ ನೀಡಿದರು.

ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಯಶಪಾಲ್ ಸುವರ್ಣ ಕೊಳ ವಾರ್ಡಿನ ಜನತೆಯ ಬಹುದಿನದ ಬೇಡಿಕೆಯಾಗಿದ್ದ ಶ್ರೀರಾಮ ರಸ್ತೆಯ ಕಾಂಕ್ರೀಟಿಕರಣಕ್ಕೆ ನಗರಸಭೆ ಮೂಲಕ ಅನುದಾನ ಒದಗಿಸಿ ಚಾಲನೆ ನೀಡಲಾಗಿದ್ದು, ನಗರಸಭಾ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಮುತುವರ್ಜಿ ವಹಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಉಡುಪಿ ನಗರಸಭೆ ಅಧ್ಯಕ್ಷರಾದ  ಪ್ರಭಾಕರ ಪೂಜಾರಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ   ಸುಂದರ ಕಲ್ಮಾಡಿ, ನಗರಸಭಾ ಸದಸ್ಯರಾದ  ಎಡ್ಲಿನ್ ಕರ್ಕಡ, ಬಾಲಕರ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷರಾದ  ಸತೀಶ್, ಸ್ಥಳೀಯ ಮುಖಂಡರಾದ  ಪಾಂಡುರಂಗ ಮಲ್ಪೆ,  ಮಂಜು ಕೊಳ,  ರವಿ ಸಾಲ್ಯಾನ್ , ಶ್ರೀ ಯಶವಂತ,  ಶರತ್,  ಶಂಕರ ಸುವರ್ಣ,  ದಿನೇಶ್ ಕೊಳ,  ದೇವದಾಸ್ ಸುವರ್ಣ,  ಸುಮಂತ ಕೊಳ ಮೊದಲಾದವರು ಉಪಸ್ಥಿತರಿದ್ದರು.


Spread the love
Subscribe
Notify of

0 Comments
Inline Feedbacks
View all comments