ಮಹಿಳೆಯರ ಸರಗಳ್ಳತನ – ಇಬ್ಬರ ಬಂಧನ

Spread the love

ಮಹಿಳೆಯರ ಸರಗಳ್ಳತನ – ಇಬ್ಬರ ಬಂಧನ

ಮಂಗಳೂರು: ಉಳ್ಳಾಲ ಮತ್ತು ಮೂಡಬಿದರೆ ಪರಿಸರದಲ್ಲಿ ಮಹಿಳೆಯರ ಸರಗಳ್ಳತನ ನಡೆಸಿದ ಇಬ್ಬರು ಆರೋಪಿಗಳನ್ನು ಉತ್ತರ ಠಾಣಾ ಪೋಲಿಸರು ಮಂಗಳವಾರ ಬಂಧಿಸಿದ್ದಾರೆ.
ಬಂಧಿತರನ್ನು ಮರೋಳಿಯ ವಿಮರ್ಶ ಆಳ್ವ (21) ಹಾಗೂ ಪಾಂಡೇಶ್ವರ ಶಿವನಗರದ ಸಾಹಿಲ್ ಹುಸೇನ್ (21) ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ ಚಿನ್ನದ ಸರ, ಕೃತ್ಯಕ್ಕೆ ಬಳಸಿದ 2 ಹೋಂಡಾ ಆ್ಯಕ್ಟಿವಾ ಸ್ಕೂಟರ್ ಸಹಿತ ರೂ 2.26 ಲಕ್ಷ ಮೊತ್ತ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಉತ್ತರ ಠಾಣಾ ಇನ್ಸ್ ಪೆಕ್ಟರ್ ಶಾಂತಾರಾಮ್, ಎಸ್ ಐ ಮದನ್, ಪ್ರೊಬೇಷನರಿ ಎಸ್ ಐ ಗಳಾದ ಶೀತಲ್ ಅಲಗೂರು, ರವಿ ಪವಾರ್, ಸಿಬಂದಿಗಳಾದ ಪದ್ಮನಾಭ, ಹರಿಯಪ್ಪ, ಗೋವರ್ದನ್, ವಿನಾಯಕ್, ಮಲ್ಲಿಕಾರ್ಜುನ್ ಭಾಗವಹಿಸಿದ್ದರು.


Spread the love