ಮಾರುತಿ ಓಮ್ನಿ ವಾಹನವನ್ನು ಅಂಬುಲೆನ್ಸಾಗಿ ಬಳಸಲು ನಿಷೇಧ

Spread the love

ಮಾರುತಿ ಓಮ್ನಿ ವಾಹನವನ್ನು ಅಂಬುಲೆನ್ಸಾಗಿ ಬಳಸಲು ನಿಷೇಧ
ಮ0ಗಳೂರು :ಹಲವಾರು ಖಾಸಗಿ ಆಸ್ಪತ್ರೆಗಳು/ ನರ್ಸಿಂಗ್ ಹೋಮ್‍ಗಳು/ ಖಾಸಗಿ ಪ್ರವರ್ತಕರು ಮಾರುತಿ ಓಮ್ನಿ ವ್ಯಾನ್‍ಗಳನ್ನು ಎಂಬುಲೆನ್ಸ್ ವಾಹನಗಳಾಗಿ ನೊಂದಣಿ ಮಾಡಿಕೊಂಡಿರುತ್ತಾರೆ. ಮಾರುತಿ ಓಮ್ನಿ ವಾಹನಗಳನ್ನು ಅಂಬುಲೆನ್ಸ್ ಆಗಿ ಬಳಸಲು ಮಾನ್ಯ ಸಾರಿಗೆ ಆಯುಕ್ತರ ಸುತ್ತೋಲೆ ಪ್ರಕಾರ ನಿಷೇಧ ಮಾಡಲಾಗಿದೆ.

ಹೊಸ ಮಾರುತಿ ಓಮ್ನಿಗಳನ್ನು ಅಂಬುಲೆನ್ಸ್ ಆಗಿ ನೊಂದಣಿ ಮಾಡಲು ನಿಷೇಧವಿರುತ್ತದೆ. ಆದ್ದರಿಂದ ಈಗಾಗಲೇ ಮಾರುತಿ ವಾಹನಗಳನ್ನು ಎಂಬುಲೆನ್ಸ್ ಆಗಿ ನೊಂದಾಯಿಸಿಕೊಂಡವರು ಕೂಡಲೇ ಟೂರಿಸ್ಟ್ ಟ್ಯಾಕ್ಸಿ/ ಖಾಸಗಿ ವಾಹನವನ್ನಾಗಿ ಪರಿವರ್ತನೆ ಮಾಡಿಕೊಳ್ಳಲು ಈ ಮೂಲಕ ತಿಳಿಸಲಾಗಿದೆ. ಮಾರುತಿ ಓಮ್ನಿ ಅಂಬುಲೆನ್ಸ್ ಅರ್ಹತಾ ಪತ್ರಗಳ ನವೀಕರಣವನ್ನು ಸ್ಥಗಿತಗೊಳಿಸಲಾಗಿದೆ ಎಂದು ಉಪಸಾರಿಗೆ ಆಯುಕ್ತರು & ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ,(ಪ್ರಭಾರ), ಮಂಗಳೂರು ದ.ಕ. ಇವರ ಪ್ರಕಟಣೆ ತಿಳಿಸಿದೆ.


Spread the love