ಮೀನುಗಾರರ ಸಾಲ ಬಡ್ಡಿ ಪಾವತಿಸಲು 596 ಲಕ್ಷ ಬಿಡುಗಡೆ

Spread the love

ಮೀನುಗಾರರ ಸಾಲ ಬಡ್ಡಿ ಪಾವತಿಸಲು 596 ಲಕ್ಷ ಬಿಡುಗಡೆ

ಮ0ಗಳೂರು : 2016-17ನೇ ಸಾಲಿನಲ್ಲಿ ಮೀನುಗಾರರು ವಾಣಿಜ್ಯ ಬ್ಯಾಂಕ್‍ಗಳಿಂದ ಪಡೆದ ಸಾಲದ ಮೇಲಿನ ಶೇಕಡಾ 2 ಕ್ಕಿಂತ ಹೆಚ್ಚಿನ ಬಡ್ಡಿಯನ್ನು ಪಾವತಿಸುವ ಯೋಜನೆಯಲ್ಲಿ ರೂ.100 ಲಕ್ಷವನ್ನು ಮೀನುಗಾರರ ಪರವಾಗಿ ಬ್ಯಾಂಕ್‍ಗಳಿಗೆ ಪಾವತಿಸಲಾಗಿದೆ. ಸರ್ಕಾರದಿಂದ ಪುನ: 596.51ಲಕ್ಷಗಳ ಅನುದಾನ ಬಿಡುಗಡೆಯಾಗಿರುತ್ತದೆ.

ಮೀನುಗಾರಿಕೆ ದೋಣಿಗಳಿಗೆ ಡೀಸೆಲ್ ಮಾರಾಟ ತೆರಿಗೆ ಮರುಪಾವತಿ ಯೋಜನೆಯಡಿ ರೂ.9552ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಈವರೆಗೆ ರೂ.9523ಲಕ್ಷ ಸಹಾಯಧನವನ್ನು ಮೀನುಗಾರರಿಗೆ ಪಾವತಿ ಮಾಡಲಾಗಿದೆ. ಅಲ್ಲದೆ ಸರ್ಕಾರದಿಂದ ಹೆಚ್ಚುವರಿಯಾಗಿ 20 ಕೋಟಿ ಅನುದಾನ ಬಿಡುಗಡೆ ಆಗಿರುತ್ತದೆ.

ಉಡುಪಿ ಜಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿಯಲ್ಲಿ ಬ್ರೇಕ್ ವಾಟರ್ ನಿರ್ಮಿಸುವ ಯೋಜನೆಯನ್ನು ಒಟ್ಟು ಮೊತ್ತ ರೂ.102.11ಕೋಟಿಯಲ್ಲಿ ಹಮ್ಮಿಕೊಂಡಿದ್ದು, ಇದರಲ್ಲಿ ಕೇಂದ್ರ ಸರಕಾರದ ಶೇಕಡಾ 75 ಭಾಗ ಅಂದರೆ ರೂ.76.58 ರಾಜ್ಯ ಸರಕಾರದಿಂದ ಶೇಕಡಾ 25 ಭಾಗ ಅಂದರೆ ರೂ.25.52 ಅನುದಾನದಲ್ಲಿ ಸದ್ರಿ ಯೋಜನೆಯನ್ನು ಕೈಗೊಳ್ಳಲಾಗಿದೆ. 2016-17ನೇ ಸಾಲಿನಲ್ಲಿ ಪ್ರಥಮ ಕಂತಾಗಿ ಕೇಂದ್ರ ಸರ್ಕಾರದಿಂದ ರೂ.300ಲಕ್ಷ ಹಾಗೂ ರಾಜ್ಯ ಸರ್ಕಾರದಿಂದ ರೂ.100ಲಕ್ಷದಂತೆ ಒಟ್ಟು ರೂ.400ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಇದನ್ನು ಸಂಪೂರ್ಣ ವಿನಿಯೋಗಿಸಲಾಗಿದೆ.

ದ್ವಿತೀಯ ಕಂತಿನ ಅನುದಾನವನ್ನು ‘ಸಾಗರಮಾಲ’ ಯೋಜನೆಯಡಿ ರೂ.10 ಕೋಟಿ ಅನುದಾನ ಬಿಡುಗಡೆ ಗೊಳಿಸುವುದಾಗಿ ಹಡಗುಯಾನ ಸಚಿವಾಲಯ ತಿಳಿಸಿದೆ. ಈ ಅನುದಾನವನ್ನು ರಾಜ್ಯ ಸರ್ಕಾರದಿಂದ ಬಿಡುಗಡೆಗೊಳಿಸುವ ಸಂಬಂಧ ಅಗತ್ಯ ಕ್ರಮ ವಹಿಸಲಾಗುತ್ತಿದೆ ಎಂದು ಮೀನುಗಾರಿಕೆ ಇಲಾಖೆಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.


Spread the love