ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯ ಕೇವಲ ಘೋಷಣೆಗೆ ಮಾತ್ರ ಸೀಮಿತವಾಗದಿರಲಿ – ಪ್ರಮೋದ್ ಮಧ್ವರಾಜ್

Spread the love

ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯ ಕೇವಲ ಘೋಷಣೆಗೆ ಮಾತ್ರ ಸೀಮಿತವಾಗದಿರಲಿ – ಪ್ರಮೋದ್ ಮಧ್ವರಾಜ್

ಉಡುಪಿ: ಕೇಂದ್ರ ಬಜೆಟ್ ನಲ್ಲಿ ಮೀನುಗಾರಿಕೆಗೂ ಸಚಿವಾಲಯ ಘೋಷಿಸಿದ್ದು , ಈತನಕ ಕೇಂದ್ರ ಕೃಷಿ ಸಚಿವಾಲಯದಡಿ ಮೀನುಗಾರಿಕೆ ಇಲಾಖೆ ಕಾರ್ಯನಿರ್ವಹಿಸುತ್ತಿತ್ತು. ಬಜೆಟಿನಲ್ಲಿ ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯ ಘೋಷಣೆಯಿಂದ ಮೀನುಗಾರರ ಅನೇಕ ವರ್ಷಗಳ ಬೇಡಿಕೆ ಈಡೇರಿದಂತಾಗಿದೆ ಆದರೆ ಕೇವಲ ಘೊಷಣೆಗೆ ಮಾತ್ರ ಸೀಮಿತವಾಗದೆ ಅನುದಾನವೂ ಬರಬೇಕು ಎಂದು ಮಾಜಿ ಮೀನುಗಾರಿಕಾ ಸಚಿವ ಹಾಗೂ ಮೀನುಗಾರ ಮುಖಂಡ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಬಜೆಟ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ಮೀನುಗಾರಿಕಾ ಸಚಿವಾಲಯ ಘೋಷಣೆ ಮಾಡಿದರಷ್ಠೆ ಸಾಲದು ಅದಕ್ಕೆ ಬೇಕಾದ ಅನುದಾನವೂ ಬರಬೇಕು.ಈ ಮೊದಲು ಯುಪಿಎ ಸರಕಾರ ಇದ್ದಾಗ ಮೀನುಗಾರಿಕೆಗೆ ಎಪ್ಪತ್ತೈದು ಶೇಕಡಾ ಮತ್ತು ರಾಜ್ಯ ಸರಕಾರ ಇಪ್ಪತ್ತೈದು ಶೇಕಡಾಅನುದಾನ ನೀಡುತ್ತಿತ್ತು.ಆದರೆ ಎನ್ ಡಿ ಎ ಸರಕಾರ ಬಂದ ಬಳಿಕ ಅದು ತಲಾ ಐವತ್ತು ಶೇಖಡಾಕ್ಕೆ ಸೀಮಿತವಾಗಿದೆ.ಹೀಗಾಗಿ ಯಾವುದೇ ಯೋಜನೆಗಳಿಗೂ ಹತ್ತು ಕೋಟಿಗಿಂತ ಹೆಚ್ಚು ಅನುದಾನ ಬರುತ್ತಿರಲಿಲ್ಲ. ಕೇವಲ ನಾಮ್ ಕೆವಾಸ್ತೆಗೆ ಸಚಿವಾಲಯ ಘೋಷಣೆ ಮಾಡದೆ ,ಅದಕ್ಕೆ ಹೆಚ್ಚಿಗೆ ಎಷ್ಟು ಹಣವನ್ನು ಮೀಸಲಿಡುತ್ತಾರೆ ಎಂಬುದು ಇನ್ನಷ್ಟೇ ಗೊತ್ತಾಗಲಿದೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.


Spread the love