ಮುಂದಿನ ಐದು ವರ್ಷದಲ್ಲಿ ಕಾಪು ರಾಜ್ಯದ ಮಾದರಿ ಕ್ಷೇತ್ರವಾಗಿ ಬದಲಾಗಲಿದೆ. : ವಿನಯ್ ಕುಮಾರ್ ಸೊರಕೆ

Spread the love

ಮುಂದಿನ ಐದು ವರ್ಷದಲ್ಲಿ ಕಾಪು ರಾಜ್ಯದ ಮಾದರಿ ಕ್ಷೇತ್ರವಾಗಿ ಬದಲಾಗಲಿದೆ. : ವಿನಯ್ ಕುಮಾರ್ ಸೊರಕೆ

ಕಾಪು: ಈಗಾಗಲೇ ಕಾಪು ಕ್ಷೇತ್ರ ದಾಖಲೆ ಅಭಿವೃದ್ಧಿ ಪಥದತ್ತ ದಾಪುಗಾಲು ಇರಿಸಿಸಿದೆ.  ಇನ್ನೊಂದು ಬಾರಿ ಶಾಸಕರನ್ನಾಗಿ ನನ್ನನ್ನು ಆರಿಸಿದಲ್ಲಿ ಕಾಪು ಕ್ಷೇತ್ರವನ್ನು ರಾಜ್ಯದ ಮಾದರಿ ಕ್ಷೇತ್ರವನ್ನಾಗಿ ಬದಲಾಯಿಸುತ್ತೇನೆ ಎಂದು ಕಾಪು ಶಾಸಕ ವಿನಯ್ ಕುಮಾರ್ ಸೊರಕೆ  ಹೇಳಿದರು.

ಕಾಪು ರಾಜೀವ ಭವನದಲ್ಲಿ ನಡೆದ ಕಾಪು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಕಾರ್ಯಕರ್ತರ ಸಭೆ ಯನ್ನು ಉದ್ದೇಶಿಸಿ ಅವರು ಮಾತನಾಡಿದರು.ಪ್ರತೀ ಬ್ಲಾಕ್ ನಲ್ಲಿ ಕಾರ್ಯಕರ್ತರು ತಾವೇ ಅಭ್ಯರ್ಥಿ ಅಂದುಕೊಂಡು  ಅಭಿವೃದ್ಧಿಯನ್ನು  ಪ್ರತಿ ಮತದಾರರಿಗೆ ತಿಳಿಸಿ ಪ್ರಚಾರ ಮಾಡಬೇಕಿದೆ ಎಂದು ಸೊರಕೆ ತಿಳಿಸಿದರು.

ಕಾಪು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ  ಉತ್ತರ ವಲಯ ಮತ್ತು ದಕ್ಷಿಣ ವಲಯ ಪದಾಧಿಕಾರಿಗಳನ್ನುಈ ಸಂದರ್ಭ ಆಯ್ಕೆ ಮಾಡಲಾಯಿತು. ಕೆಪಿಸಿಸಿ ಕಾರ್ಯದರ್ಶಿ ದೇವಿ ಪ್ರಸಾದ್ ಶೆಟ್ಟಿ, ಅಲ್ಪಸಂಖ್ಯಾತ ವಿಭಾಗದ ಉಪಾಧ್ಯಕ್ಷ ಗುಲಾಂ ಅಹ್ಮದ್ ಹೆಜಮಾಡಿ, ಜಿಲ್ಲಾ ಅಧ್ಯಕ್ಷ ಇಸ್ಮಾಯಿಲ್ ಅತ್ರಾಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ, ಕಾಪು ಬ್ಲಾಕ್ ಅಲ್ಪಸಂಖ್ಯಾತ ದಕ್ಷಿಣ ವಲಯ ಅಧ್ಯಕ್ಷ ಹೆಚ್ ಅಬ್ದುಲ್ಲಾ, ಉತ್ತರ ವಲಯದ ಅಧ್ಯಕ್ಷ ರಿಯಾಜ್ ಪಳ್ಳಿ,ಹಿರಿಯ ಕಾಂಗ್ರೆಸ್ ಮುಖಂಡರಾದ ಅಶೋಕ್ ಕುಮಾರ್ ಕೊಡವೂರು, ಕಾಪು ದಿವಾಕರ ಶೆಟ್ಟಿ, ಎಂ. ಗಫೂರ್, ಕಾಪು ಉಸ್ತುವಾರಿ  ಕಳ್ಳಿಗೆ ತಾರಾನಾಥ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್ , ಇಂಟಿಕ್ ರಾಜ್ಯಾಧ್ಯಕ್ಷರಾದ ರಾಕೇಶ್ ಮಲ್ಲಿ, ಜಿಲ್ಲಾಧ್ಯಕ್ಷ ಗಣೇಶ್, ಜಿಲ್ಲಾ ಪಂಚಾಯತ್ ಸದಸ್ಯ  ವಿಲ್ಸನ್ ರೊಡ್ರಿಗಸ್, ಪ್ರಚಾರ ಸಮಿತಿ ಅಧ್ಯಕ್ಷ ದಿನೇಶ್ ಕೋಟ್ಯಾನ್, ಮೊದಲಾದವರು ಉಪಸ್ಥಿತರಿದ್ದರು.


Spread the love