ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆ: ದ.ಕ.ದಲ್ಲಿ 1844 ಗಾಯಾಳುಗಳಿಗೆ 1.16 ಕೋಟಿ ವೆಚ್ಚ

Spread the love

ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆ: ದ.ಕ.ದಲ್ಲಿ 1844 ಗಾಯಾಳುಗಳಿಗೆ  1.16 ಕೋಟಿ ವೆಚ್ಚ

ಮ0ಗಳೂರು: ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ತುರ್ತು ಚಿಕಿತ್ಸೆ ನೀಡುವ ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1844 ಮಂದಿ ಅಪಘಾತ ಗಾಯಾಳುಗಳಿಗೆ ಇದುವರೆಗೆ ಚಿಕಿತ್ಸೆ ನೀಡಲಾಗಿದ್ದು, ಜನತೆಗೆ ಯೋಜನೆಯು ಆಪದ್ಭಾಂದವವಾಗಿ ಪರಿಣಮಿಸಿದೆ.

ಪ್ರಸಕ್ತ ವರ್ಷ ಏಪ್ರಿಲ್‍ನಿಂದ ಸೆಪ್ಟಂಬರ್ ಅಂತ್ಯದವರೆಗೆ ಜಿಲ್ಲೆಯಲ್ಲಿ ನಡೆದ ರಸ್ತೆ ಅಪಘಾತಗಳಲ್ಲಿ ಇವರಿಗೆ ರಾಜ್ಯ ಸರಕಾರದಿಂದ ತುರ್ತು ಚಿಕಿತ್ಸೆ ನೀಡಲಾಗಿದೆ. ರಾಜ್ಯದ ಒಳಗೆ ರಸ್ತೆ ಅಪಘಾತಕ್ಕೆ ಒಳಗಾದ ಯಾವುದೇ ವ್ಯಕ್ತಿ/ಗಾಯಾಳುಗಳನ್ನು ಅಪಘಾತದಿಂದ ಹೊರತರಲು ಇಂತಹ ಸಂಕಷ್ಟದ ಸೂಕ್ಷ್ಮ ಸಮಯದಲ್ಲಿ ತುರ್ತಾಗಿ ಪ್ರಥಮ ಆದ್ಯತೆಯ ಮೇಲೆ ವೈದ್ಯಕೀಯ ಚಿಕಿತ್ಸೆ ಒದಗಿಸುವುದು ಮುಖ್ಯಮಂತ್ರಿ ಸಾಂತ್ವನ-ಹರೀಶ್ ಯೋಜನೆಯ ಮುಖ್ಯ ಉದ್ದೇಶವಾಗಿರುತ್ತದೆ. ಅಪಘಾತಕ್ಕೆ ಒಳಗಾದ ವ್ಯಕ್ತಿಯ ಜೀವವನ್ನು ರಕ್ಷಿಸಲು ಮೊದಲ 48 ಗಂಟೆಗಳ ಅವಧಿಯಲ್ಲಿ ರೂ.25000 ವರೆಗೆ ಗಾಯಾಳುವಿಗೆ ಉಚಿತವಾಗಿ ಚಿಕಿತ್ಸೆ ನೀಡಲು ಅವಕಾಶ ಕಲ್ಪಿಸಲಾಗಿದೆ.

ಅಪಘಾತವು ಅನಿರೀಕ್ಷಿತವಾಗಿರುವುದರಿಂದ, ಅಪಘಾತದಿಂದ ನೋವು ಅನುಭವಿಸಿದ ಸಂಕಷ್ಟದೊಂದಿಗೆ, ಆತನ ಚಿಕಿತ್ಸೆಗೆ ಹಣ ಹೊಂದಾಣಿಕೆ ಮಾಡುವುದು ರೋಗಿಯ ಕುಟುಂಬಕ್ಕೆಹೆಚ್ಚಿನ ಸಂಕಷ್ಟ ತಂದೊಡ್ಡುತ್ತದೆ. ಬಡ ಮತ್ತು ಮದ್ಯಮ ವರ್ಗದ ಕುಟುಂಬಗಳಿಗೆ ಇದೊಂದು ತೀರಾ ಸಂಕಷ್ಟಮಯ ಪರಿಸ್ಥಿತಿ. ಸಾವು ನೋವಿನೊಂದಿಗೆ ಒದ್ದಾಡುವ ತಮ್ಮ ಕುಟುಂಬ ಸದಸ್ಯನ ನರಳಾಟ ಒಂದೆಡೆ, ಇನ್ನೊಂದೆಡೆ ತುರ್ತು ಚಿಕಿತ್ಸೆಗೆ ಹಣಕಾಸಿನ ವ್ಯವಸ್ಥೆ ಮಾಡಬೇಕಾದ ಅನಿವಾರ್ಯತೆ. ಜನತೆಯೆ ಈ ಸಂಕಷ್ಟವನ್ನು ಪರಿಗಣಿಸಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆಯನ್ನು 2016-16ರ ರಾಜ್ಯ ಬಜೆಟ್‍ನಲ್ಲಿ ಘೋಷಿಸಿದ್ದರು. ಅಂದಿನ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಯೋಜನೆಯನ್ನು ರೂಪಿಸಿದ್ದರು.

“ಗೋಲ್ಡನ್ ಅವರ್” ಎಂದೇ ಕರೆಯಲ್ಪಡುವ ಅಪಘಾತದ ನಂತರ ರೋಗಿಗೆ ಚಿಕಿತ್ಸೆ ದೊರಕುವರೆಗಿನ ಅವಧಿ ಅಪಘಾತ ರೋಗಿಗೆ ಅತ್ಯಮೂಲ್ಯವಾದುದು. ತಕ್ಷಣದ ಹಾಗೂ ತುರ್ತು ಚಿಕಿತ್ಸೆ ಲಭ್ಯವಿಲ್ಲದೆ ಎಷ್ಟೋ ಗಾಯಾಳುಗಳು ಸಾವನ್ನಪ್ಪಿದ ಪ್ರಕರಣಗಳಿವೆ. ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆಯನ್ನು ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನದ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಜಾರಿಗೊಳಿಸಲಾಗುತ್ತಿದೆ.

ಕರ್ನಾಟಕ ರಾಜ್ಯದ ಭೌಗೋಳಿಕ ಗಡಿಯೊಳಗಿರುವ ರಾಷ್ಟ್ರ ಹೆದ್ದಾರಿ, ಹಾಗೂ ಇತರೆ ರಸ್ತೆಗಳಲ್ಲಿ ಅಪಘಾತಕ್ಕೆ ತುತ್ತಾದ ಗಾಯಾಳುಗಳು ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ ಸಂತಸ್ಧರಿಗೆ, ಗುರುತಿಸಲ್ಪಟ್ಟ ಅತಿ ಹತ್ತಿರದ ಆಸ್ಪತ್ರೆಗಳಲ್ಲಿ ತತ್‍ಕ್ಷಣದ ಚಿಕಿತ್ಸೆಗಳನ್ನು ಒದಗಿಸಲಾಗುತ್ತದೆ. ಯಾವುದೇ ಗುರುತಿನ ಚೀಟಿ ಅವಶ್ಯಕತೆ ಇರುವುದಿಲ್ಲ. ಬಿಪಿಎಲ್, ಎಪಿಎಲ್ ಎರಡೂ ವರ್ಗಕ್ಕೂ ಇದು ಅನ್ವಯವಾಗುತ್ತದೆ. ಗಮನಾರ್ಹ ವಿಶೇಷತೆಯೇನಂದರೆ ಹೊರರಾಜ್ಯ ಹಾಗೂ ವಿದೇಶಿಯರಿಗೂ ಇದು ಅನ್ವಯವಾಗುತ್ತದೆ. ಮೊದಲ 48ಗಂಟೆಗಳವರೆಗಿನ ಅಪಘಾತ ಗಾಯಾಳುವಿನ ರೂ. 25 ಸಾವಿರವರೆಗಿನ ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರಕಾರ ಭರಿಸಲಿದೆ. ­

ರಾಜ್ಯದ ಎಲ್ಲಾ ಸರಕಾರಿ ಆಸ್ಪತ್ರೆಗಳು, ಸರಕಾರಿ ಮೆಡಿಕಲ್ ಕಾಲೇಜುಗಳು ಹಾಗೂ ಸುವóರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಡಿ ನೋಂದಾವಣಿಗೊಂಡಿರುವ ಖಾಸಗಿ ಆಸ್ಪತ್ರೆಗಳು ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆಯಡಿ ಚಿಕಿತ್ಸೆ ನೀಡುತ್ತಿದೆ. ಈ ಎಲ್ಲಾ ಆಸ್ಪತೆಗಳಲ್ಲಿ ಜಿಪಿಎಸ್ ಅಳವಡಿಸಲಾಗಿದ್ದು, ಇದರಿಂದ 108 ಅಂಬ್ಯುಲೆನ್ಸ್‍ಗಳಲ್ಲಿ ಅಪಘಾತ ಗಾಯಾಳುಗಳನ್ನು ಕರೆ ತರುವಾಗ ಸಮೀಪದ ಸೂಕ್ತ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಶೀಘ್ರದಲ್ಲಿಯೇ ದಾಖಲಿಸಿ, ಸಕಾಲದಲ್ಲಿ ಚಿಕಿತ್ಸೆ ದೊರಲು ಸಾಧ್ಯವಾಗುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2016 ವರ್ಷದ ಏಪ್ರಿಲ್‍ನಿಂದ ಸೆಪ್ಟಂಬರ್ ಅಂತ್ಯದವರೆಗೆ ವಿವಿಧ ಅಪಘಾತದಲ್ಲಿ ಗಾಯಗೊಂಡ 1844 ಸಂತ್ರಸ್ತರಿಗೆ ಮುುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆಯಲ್ಲಿ ತುರ್ತು ಚಿಕಿತ್ಸೆ ನೀಡಲಾಗಿದ್ದು, ಇದಕ್ಕಾಗಿ 1.16 ಕೋಟಿ ರೂ. ಮೊತ್ತವನ್ನು ಇದಕ್ಕಾಗಿ ರಾಜ್ಯ ಸರಕಾರ ವೆಚ್ಚ ಮಾಡಿದೆ. ಈ ಪೈಕಿ ಸರಕಾರಿ ಆಸ್ಪತ್ರೆಗಳಲ್ಲಿ 618 ಅಪಘಾತ ಗಾಯಾಳುಗಳಿಗೆ ಚಿಕಿತ್ಸೆ ನೀಡಿ, ರೂ. 24.98 ಲಕ್ಷ ವೆಚ್ಚ ಮಾಡಲಾಗಿದೆ. ಸರಕಾರಿ ಆಸ್ಪತ್ರೆಗಳ ಪೈಕಿ ಜಿಲ್ಲಾ ವೆನ್‍ಲಾಕ್ ಆಸ್ಪತ್ರೆಯಲ್ಲಿಯೇ 580 ಮಂದಿಗೆ ತುರ್ತು ಚಿಕಿತ್ಸೆ ನೀಡಲಾಗಿದ್ದು, ರೂ.24.68 ಲಕ್ಷ ನೀಡಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ 1226 ಗಾಯಾಳುಗಳಿಗೆ ಮುಖ್ಯಮಂತ್ರಿ ಹರೀಶ್ ಸಾಂತ್ವನ ಯೋಜನೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಇದಕ್ಕಾಗಿ ರೂ.91.76 ಲಕ್ಷ ಮೊತ್ತ ವೆಚ್ಚ ಮಾಡಲಾಗಿದೆ.

ಈ ಯೋಜನೆಯಲ್ಲಿ ಒಳಪಟ್ಟ ಆಸ್ಪತ್ರೆಗಳು:
ಮಂಗಳೂರು ತಾಲೂಕು: ಇಂಡಿಯಾನ ಆಸ್ಪತ್ರೆ, ಕೆ.ಎಂ.ಸಿ ಆಸ್ಪತ್ರೆ ಅತ್ತಾವರ, ವೆನ್‍ಲಾಕ್ ಜಿಲ್ಲಾ ಆಸ್ಪತ್ರೆ, ಗ್ಲೋಬಲ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಫಾದರ್ ಮುಲ್ಲರ್ ಆಸ್ಪತ್ರೆ ಕಂಕನಾಡಿ, ಯನಪೋಯ ಸ್ಪೆಷಾಲಿಟಿ ಆಸ್ಪತ್ರೆ ಕೊಡಿಯಾಲಬೈಲ್, ಒಮೇಗಾ ಆಸ್ಪತ್ರೆ, ಯುನಿಟಿ ಆಸ್ಪತ್ರೆ, ಹೈಲಾಂಡ್ ಆಸ್ಪತ್ರೆ, ಮಂಗಳಾ ಆಸ್ಪತ್ರೆ, ಶ್ರೀನಿವಾಸ ಆಸ್ಪತ್ರೆ ಮುಕ್ಕ, ಯೆನಪೋಯ ಮೆಡಿಕಲ್ ಕಾಲೇಜ್ ಆಸ್ಪತ್ರೆ, ದೇರಳಕಟ್ಟೆ, ಕೆ.ಎಸ್ ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ, ಕಣಚೂರು ಆಸ್ಪತ್ರೆ ದೇರಳಕಟ್ಟೆ, ನೇತಾಜಿ ಎಲ್ಲಪ್ಪ ಆಸ್ಪತ್ರೆ ತೊಕ್ಕೊಟು, ಸಹರಾ ಆಸ್ಪತ್ರೆ ತೊಕ್ಕೊಟು,
ಪುತ್ತೂರು ತಾಲೂಕು: ತಾಲೂಕು ಆಸ್ಪತ್ರೆ, ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆ, ಪುತ್ತೂರು ಸಿಟಿ ಆಸ್ಪತ್ರೆ, ಮಹಾವೀರ ಮೆಡಿಕಲ್ ಸೆಂಟರ್ ಪುತ್ತೂರು, ಚೇತನಾ ಆಸ್ಪತ್ರೆ ಪುತ್ತೂರು, ಆಶ್ವಿನಿ ಆಸ್ಪತ್ರೆ ನೆಲ್ಯಾಡಿ, ಧನ್ವಂತರಿ ಉಪ್ಪಿನಂಗಡಿ,

ಬಂಟ್ವಾಳ ತಾಲೂಕು: ತಾಲೂಕು ಆಸ್ಪತ್ರೆ, ಪುಷ್ಪರಾಜ್ ಆಸ್ಪತ್ರೆ ಕಲ್ಲಡ್ಕ, ಫಾದರ್ ಮುಲ್ಲರ್ ಆಸ್ಪತ್ರೆ ತುಂಬೆ, ಸೋಮಯಾಜಿ ಆಸ್ಪತ್ರೆ ಬಿ.ಸಿ.ರೋಡ್, ಸುರಕ್ಷಾ ಆಸ್ಪತ್ರೆ ವಿಟ್ಲ.

ಬೆಳ್ತಂಗಡಿ ತಾಲೂಕು: ತಾಲೂಕು ಆಸ್ಪತ್ರೆ, ಅಭಯ ಆಸ್ಪತ್ರೆ, ಶ್ರೀಕೃಷ್ಣ ಆಸ್ಪತ್ರೆ, ಎಸ್‍ಡಿಎಂ ಆಸ್ಪತ್ರೆ ಉಜಿರೆ, ಎಲ್.ಎಂ.ಪಿಂಟೋ ಹೆಲ್ತ್‍ಸೆಂಟರ್, ಬದ್ಯಾರ್.

ಸುಳ್ಯ ತಾಲೂಕು: ತಾಲೂಕು ಆಸ್ಪತ್ರೆ, ಕೆವಿಜಿ ಮೆಡಿಕಲ್ ಕಾಲೇಜು ಆಸ್ಪತ್ರೆ ಸುಳ್ಯ.


Spread the love