ಮುಜರಾಯಿಗೆ ಧರ್ಮಸ್ಥಳ ದೇಗುಲ ಇಲ್ಲ: ಜಯಚಂದ್ರ ಸ್ಪಷ್ಟನೆ

Spread the love

ಬೆಂಗಳೂರು: ಧರ್ಮಸ್ಥಳದ ಮಂಜುನಾಥೇಶ್ವರ ದೇವಾಲಯವನ್ನು ಮುಜರಾಯಿ ಇಲಾಖೆಗೆ ಸೇರಿಸಿಕೊಳ್ಳುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದು ಕಾನೂನು ಮತ್ತು ಮುಜರಾಯಿ ಸಚಿವ ಟಿ.ಬಿ.ಜಯಚಂದ್ರ ಅವರು ಸ್ಪಷ್ಟಪಡಿಸಿದ್ದಾರೆ.

tbjayachandra-ಮ

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ದೇಗುಲವನ್ನು ಮುಜರಾಯಿ ಇಲಾಖೆಗೆ ವಹಿಸಿಕೊಳ್ಳಲಾಗುತ್ತಿದೆ ಎಂದು ಸುಳ್ಳು ಪ್ರಚಾರ ಮಾಡಲಾಗುತ್ತಿದೆ. ಧರ್ಮಸ್ಥಳ ದೇಗುಲವನ್ನು ವೀರೇಂದ್ರ ಹೆಗ್ಗಡೆಯವರು ಅತ್ಯಂತ ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಧರ್ಮಸ್ಥಳದ ಮೇಲೆ ನಂಬಿಕೆ ಇಟ್ಟ ಲಕ್ಷಾಂತರ ಜನರಿದ್ದು, ಅವರ ಭಾವನೆಗಳಿಗೆ ನೋವು ತರುವ ಪ್ರಯತ್ನವನ್ನು ಕೆಲವರು ಮಾಡುತ್ತಿದ್ದಾರೆ ಎಂದರು.

ರಂಜನ್ ರಾವ್ ಎಂಬುವವರು ಧರ್ಮಸ್ಥಳದ ವಿರುದ್ಧ ಮುಜರಾಯಿ ಇಲಾಖೆಗೆ ಒಂದು ದೂರು ನೀಡಿದ್ದರು. ಅದನ್ನು ನಾವು ಮುಜರಾಯಿ ಆಯುಕ್ತರಿಗೆ ಕಳುಹಿಸಿದ್ದೇವು. ಸರ್ಕಾರಕ್ಕೆ ಧರ್ಮಸ್ಥಳವನ್ನು ವಶಕ್ಕೆ ಪಡೆಯುವ ಯಾವುದೇ ಉದ್ದೇಶವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.


Spread the love